fbpx
ಸಮಾಚಾರ

ಸರ್ಜರಿ ನಂತರ ಸೋಷಿಯಲ್ ಮೀಡಿಯಾದಲ್ಲಿ ದಿಗಂತ್ ಪ್ರತ್ಯಕ್ಷ: ಹೇಳಿದ್ದೇನು ಗೊತ್ತಾ?

ಗೋವಾದಲ್ಲಿ ಸಮ್ಮರ್ ಶಾರ್ಟ್ಸ್ ಸ್ಟಂಟ್ ಮಾಡುವ ವೇಳೆ ಕುತ್ತಿಗೆಗೆ ಗಂಭೀರ ಏಟು ಮಾಡಿಕೊಂಡಿದ್ದ ನಟ ದಿಗಂತ್, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. . ಇದೀಗ ಚೇತರಿಸಿಕೊಂಡಿರುವ ದಿಗಂತ್, ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಕಷ್ಟದ ಕಾಲದಲ್ಲಿ ಸಹಾಯ ಮಾಡಿದವರಿಗೆ ಧನ್ಯವಾದ ಹೇಳಿದ್ದಾರೆ.

ತಮ್ಮ ಕುತ್ತಿಗೆಗೆ ಪೆಟ್ಟು ಬಿದ್ದಾಗ, ಎಮರ್ಜೆನ್ಸಿ ಸಮಯದಲ್ಲಿ ತಮಗೆ ಸಹಾಯ ಮಾಡಿದ ಎಲ್ಲರಿಗೂ ಇದೀಗ ದಿಗಂತ್ ಧನ್ಯವಾದ ತಿಳಿಸಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ದಿಗಂತ್, ತಮಗೆ ಸಹಾಯ ಹಸ್ತ ಚಾಚಿದ ಎಲ್ಲರಿಗೂ ಕೈ ಮುಗಿದು ಥ್ಯಾಂಕ್ಸ್ ಹೇಳಿದ್ದಾರೆ.

 

 

“ಒಂದು ದೊಡ್ಡ ಅವಘಡ ಆಗಬಹುದಿತ್ತು. ಆದರೆ, ನನ್ನ ಒಂದು ಸಿಂಪಲ್ ಸರ್ಜರಿಯಿಂದ ನನ್ನನ್ನ ರೆಡಿ ಮಾಡಿದ್ದಾರೆ. ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರೇ ನೀವೂ ನನ್ನನ್ನ ಏರ್‌ಲಿಫ್ಟ್ ಮಾಡೋಕೆ ಸಾಕಷ್ಟು ಸಹಾಯ ಮಾಡಿದ್ರಿ. ಥ್ಯಾಂಕ್ಯು ಸೋ ಮಚ್. ಗೋವಾದ ಮಣಿಪಾಲ್ ಆಸ್ಪತ್ರೆ ಹಾಗೂ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ನೀವೂ ಕೂಡ ಸಾಕಷ್ಟು ಸಹಾಯ ಮಾಡಿದ್ದೀರಾ.. ಥ್ಯಾಂಕ್ಯು. ಅದರಲ್ಲಿ ಮುಖ್ಯವಾಗಿ ಡಾ.ವಿದ್ಯಾಧರ್ ಅವರೇ.. ವೈದ್ಯರನ್ನ ದೇವರಿಗೆ ಹೋಲಿಸುತ್ತಾರೆ. ಡಾ.ವಿದ್ಯಾಧರ್ ಅವರು ದೇವರ ರೂಪದಲ್ಲಿ ಬಂದು ನನಗೆ ಸರ್ಜರಿ ಮಾಡಿದರು. ಥ್ಯಾಂಕ್ಯು ಡಾಕ್ಟರ್.. ಥ್ಯಾಂಕ್ಯು ಸೋ ಮಚ್’’

 

 

“ನನ್ನನ್ನು ಇಷ್ಟ ಪಡುವ ಎಲ್ಲಾ ಅಭಿಮಾನಿಗಳು, ಇಂಡಸ್ಟ್ರಿ ಸ್ನೇಹಿತರು, ಹಿತೈಷಿಗಳು, ಕುಟುಂಬದವರು, ಎಲ್ಲರೂ ತಮ್ಮ ತಮ್ಮ ಪ್ರಾರ್ಥನೆಗಳ ಮೂಲಕ ನನ್ನನ್ನು ನೆನೆಸಿಕೊಂಡಿದ್ದೀರಿ. ನಿಮ್ಮೆಲ್ಲರ ಪ್ರಾರ್ಥನೆಯಿಂದಲೇ ನಾನು ಕೇವಲ 1 ವಾರದಲ್ಲಿ ಗುಣಮುಖನಾಗಿದ್ದೇನೆ. ಇನ್ನು ಕೇವಲ 2 ವಾರಗಳಲ್ಲಿ ಸಂಪೂರ್ಣ ಗುಣಮುಖನಾಗಿ, ನನ್ನ ವೃತ್ತಿಯ ಕಡೆ ಗಮನಹರಿಸುತ್ತೇನೆ ಎಂದರು. ” ಎಂದು ದಿಗಂತ್ ವಿಡಿಯೋ ಮೂಲಕ ಧನ್ಯವಾದ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top