ಸಾಮಾಜಿಕ ಜಾಲತಾಣಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ? ಈಗಲಂತೂ ಮಕ್ಕಳಿಂದ ಹಿಡಿದು ವಯೋವೃದ್ಧರ ತನಕವೂ ಎಲ್ಲರೂ ಈ ಫೇಸ್ ಬುಕ್ , ವಾಟ್ಸಪ್ ಮತ್ತು ಇನ್ಸ್ಟಾಗ್ರಾಂ ಅನ್ನು ಬಳಸುತ್ತಾರೆ. ಹೀಗಿರುವಾಗ ಬಳಕೆದಾರರನ್ನು ಸೆಳೆಯಲು ಈ ಆ್ಯಪ್ ಗಳು ತಮ್ಮ ಬಳೆಕೆದಾರರಿಗಾಗಿ ಹೊಸ-ಹೊಸ ಫೀಚರ್ ಗಳನ್ನು ನೀಡುತ್ತಲೇ ಇರುತ್ತಾರೆ .
ಇದೀಗ ಎಲ್ಲರ ಮೋಸ್ಟ್ ಫೇವರಿಟ್ ಮೆಸೇಜಿಂಗ್ ಆ್ಯಪ್ ಆದ ವಾಟ್ಸಪ್ ತನ್ನ ಬಳಕೆದಾರರಿಗೆ ಹೊಸ ವರ್ಷದ ಹೊಸ್ತಿಲಲ್ಲಿ ಸಿಹಿ ಸುದ್ದಿಯೊಂದನ್ನು ನೀಡಿದ್ದು. ಇನ್ಮುಂದೆ ವಾಟ್ಸಪ್ ನಲ್ಲಿ ಒಂದು ಅದ್ಭುತ ಫೀಚರ್ ಲಭ್ಯವಾಗಲಿದೆ . ಹೌದು, ಸಾಮಾಜಿಕ ಜಾಲತಾಣವಾದ ವಾಟ್ಸಪ್ ಒಂದು ನೂತನ ಫೀಚರ್ ಪರಿಚಯಿಸಿದ್ದು. ಇದರಿಂದ ಹಲವರಿಗೆ ಉಪಯೋಗವಾಗಲಿದೆ. ಹಾಗಾದರೆ ಏನಿದು ಹೊಸ ಫೀಚರ್ ? ಏನು ಏತ್ತ ? ತಿಳಿಯಲು ಮುಂದೆ ಓದಿ.
ಬಹುತೇಕ ಎಲ್ಲ ಬಳಕೆದಾರರು ಉಪಯೋಗಿಸುತ್ತಿರುವ ಡಿಲೀಟ್ ಫಾರ್ ಎವರಿಒನ್ ಫೀಚರ್ನಲ್ಲಿ ಹೊಸ ಆಯ್ಕೆ ಸದ್ಯದಲ್ಲೇ ಸಿಗಲಿದೆ. ಅದೇನೆಂದರೆ ವಾಟ್ಸ್ಆ್ಯಪ್ ಡಿಲಿಟ್ ಫಾರ್ ಎವರಿಒನ್ ಫೀಚರ್ನ ಲಿಮಿಟ್ ಅನ್ನು ಹೆಚ್ಚಿಸಲಾಗಿದೆ. ಅಂದರೆ ಮಾಡಿದ ಮೆಸೇಜ್ (Message) ಅನ್ನು ಯಾರಿಗೂ ಕಾಣದಂತೆ ಡಿಲೀಟ್ ಮಾಡಲು ಹೆಚ್ಚಿನ ಕಾಲವಕಾಶ ನೀಡಲಾಗಿದೆ.
ಈಗ ಕಂಪನಿಯು ಹೊಸ ಅಪ್ಡೇಟ್ ಬಿಡುಗಡೆ ಮಾಡಲು ಆರಂಭಿಸಿದ್ದು, ಇದರಲ್ಲಿ ‘ಡಿಲೀಟ್ ಫಾರ್ ಎವರಿಒನ್’ ಆಪ್ಷನ್ ಅನ್ನು 2 ದಿನ 12 ಗಂಟೆಗಳಿಗೆ ಹೆಚ್ಚಿಸಲಾಗುತ್ತಿದೆ. ಈ ಮುನ್ನ ‘ಡಿಲೀಟ್ ಫಾರ್ ಎವರಿಒನ್’ ಇದು 1 ಗಂಟೆ 8 ನಿಮಿಷ 16 ಸೆಕೆಂಡ್ ಆಗಿತ್ತು. ಕೆಲ ಆ್ಯಂಡ್ರಾಯ್ಡ್ ಬೀಟಾ ಬಳಕೆದಾರರಿಗೆ ಹೊಸ ಅಪ್ಡೇಟ್ ಸಿಗಲಾರಂಭಿಸಿದೆ.
ಎಡಿಟ್ ಆಯ್ಕೆ:
ಎಡಿಟ್ ಮಾಡುವ ಆಯ್ಕೆಯನ್ನು ಗ್ರಾಹಕರಿಗೆ ಒದಗಿಸಲು ವಾಟ್ಸ್ಆ್ಯಪ್ ಮುಂದಾಗಿದ್ದು, ನೂತನ ಆಯ್ಕೆಯನ್ನು ಪರಿಶೀಲಿಸುತ್ತಿದೆ. ಇದರ ಪ್ರಕಾರ ಬಳಕೆದಾರರು ಯಾರಿಗಾದರೂ ಸಂದೇಶ ಕಳುಹಿಸಿದಾಗ ಅಕ್ಷರಗಳು ತಪ್ಪಾಗಿದ್ದಲ್ಲಿ, ಅದನ್ನು ಎಡಿಟ್ ಮಾಡಲು ಸಾಧ್ಯವಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
