fbpx
ಸಮಾಚಾರ

ಅಂದು ’36’, ಇಂದು ’35’: ಸಿಕ್ಕಾಪಟ್ಟೆ ಟ್ರೋಲ್ ಆದ ಸ್ಟುವರ್ಟ್ ಬ್ರಾಡ್: ಈ Memesಗಳನ್ನ ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ

ಇಂಗ್ಲೆಂಡಿನ ಶ್ರೇಷ್ಠ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ಸ್ಟುವರ್ಟ್ ಬ್ರಾಡ್ ಶನಿವಾರ ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಮತ್ತೊಂದು ಅನಗತ್ಯ ದಾಖಲೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡರು. ತಾವು ಎಸೆದ ಒಂದೇ ಓವರ್‌ನಲ್ಲಿ 35 ರನ್‌ಗಳನ್ನು ಬಿಟ್ಟುಕೊಟ್ಟು ಟೆಸ್ಟ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಬೌಲರ್ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ.

 

 

ಇಂಗ್ಲೆಂಡ್ ತಂಡದ ವೇಗಿ ಸ್ಟುವರ್ಟ್ ಬ್ರಾಡ್ ಇನ್ನಿಂಗ್ಸ್‌ನ 84ನೇ ಓವರ್ ಎಸೆದಾಗ ಜಸ್ಪ್ರೀತ್ ಬುಮ್ರಾ ಸ್ಟ್ರೈಕ್‌ನಲ್ಲಿದ್ದರು. ಈ ಓವರ್‌ನಲ್ಲಿ 4, 5 ( ವೈಡ್ ಫೋರ್), 6 ( ನೋಬಾಲ್ ), 4, 4, 4, 6 ಮತ್ತು 1 ರನ್ ಹೀಗೆ ಒಟ್ಟು 35 ರನ್ ಹರಿದುಬಂತು. ಪರಿಣಾಮ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಓವರ್ ಒಂದರಲ್ಲಿ ಅತಿ ಹೆಚ್ಚು ರನ್ ದಾಖಲಾದ ವಿಶ್ವ ದಾಖಲೆ ನಿರ್ಮಾಣವಾಯಿತು.

 

 

ಇದು 15 ವರ್ಷಗಳ ಹಿಂದೆ ಟಿ 20 ವಿಶ್ವಕಪ್‌ನಲ್ಲಿ ಯುವರಾಜ್ ಸಿಂಗ್ ಅವರ ಒಂದು ಓವರ್‌ನಲ್ಲಿ ಆರು ಸಿಕ್ಸರ್‌ಗಳಿಗೆ ಹೇಗೆ ಸಿಡಿದರು ಎಂಬುದನ್ನು ಟ್ವಿಟರ್‌ನಲ್ಲಿ ಅಭಿಮಾನಿಗಳು ಬ್ರಾಡ್‌ಗೆ ನೆನಪಿಸಿದ್ದಾರೆ. ಹೀಗೆ ಈ ವಿಶ್ವದಾಖಲೆಯ ಕುರಿತು ಹಲವಾರು ಮಾಜಿ ಕ್ರಿಕೆಟಿಗರು ಹಾಗೂ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿದ್ದು, ಕೆಲವರು ಜಸ್ಪ್ರೀತ್ ಬುಮ್ರಾಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದರೆ, ಇನ್ನೂ ಕೆಲವರು ಸ್ಟುವರ್ಟ್ ಬ್ರಾಡ್ ಅವರನ್ನು ಕಾಲೆಳೆದು ಟ್ರೋಲ್ ಮಾಡುತ್ತಿದ್ದಾರೆ.

 

 

ಇಂಥಾ ಕೆಲವು ಟ್ರೊಲ್ ಗಳಲ್ಲಿ ಕೆಲವೊಂದನ್ನು ನಿಮಗಾಗಿ ಹೆಕ್ಕಿ ತರಲಾಗಿದೆ ನೋಡಿ ನೀವು ಒಮ್ಮೆ ನಕ್ಕಿಬಿಡಿ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top