fbpx
ಸಮಾಚಾರ

ಸಮನ್ವಿ ಸಾವಿನ ನೋವಿನ ಬಳಿಕ ಮೂಡಿದ ಸಂತಸ: ಮುದ್ದಾದ ಮಗುವಿಗೆ ಜನ್ಮ ನೀಡಿದ ಕಿರುತೆರೆ ನಟಿ ಅಮೃತಾ

ಪುಟ್ಟ ಕಂದಮ್ಮ ಸಮನ್ವಿಯನ್ನು ಕಳೆದುಕೊಂಡ ದುಃಖದಲ್ಲಿದ್ದ ಕುಟುಂಬದಲ್ಲೀಗ ಮತ್ತೆ ಸಂತಸ ಆವರಿಸಿದೆ. ಕಿರುತೆರೆ ನಟಿ ಅಮೃತಾ ರೂಪೇಶ್ ಮನೆಯಲ್ಲಿ ಸಂತಸ ಮನೆ ಮಾಡಿದೆ. ಮನೆಗೆ ಹೊಸ ಅತಿಥಿಯ ಆಗಮನದ ಖುಷಿಯಲ್ಲಿದ್ದಾರೆ. ಅಮೃತಾ ಗಂಡು ಮಗುವಿಗೆ ತಾಯಿಯಾಗಿದ್ದಾರೆ. ಮುದ್ದು ಮಗಳು ಸಮನ್ವಿ ಸಾವಿನ ನಂತರ ಸಾಕಷ್ಟು ಕುಗ್ಗಿ ಹೋಗಿದ್ದ ಕುಟುಂಬಕ್ಕೆ ಇದೀಗ ಹೊಸ ಚೈತನ್ಯ ಸಿಕ್ಕಿದೆ.

ಅಮೃತಾ ರೂಪೇಶ್ (ಜುಲೈ.2)ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿನ ಜನನವಾಗಿದ್ದು, ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಮಗುವಿನ ಆಗಮನದ ಖುಷಿಯ ವಿಚಾರವನ್ನು ಅಮೃತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಶುಭಹಾರೈಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

 

 

ಮಗಳನ್ನು ಕಳೆದುಕೊಂಡಿದ್ದ ಅಮೃತಾ
ಬೆಂಗಳೂರಿನ ಕೋಣನಕುಂಟೆಯ ವಾಜರಹಳ್ಳಿಯಲ್ಲಿ ಕಳೆದ ಜನವರಿಯಲ್ಲಿ ರಸ್ತೆ ಅಪಘಾತದಲ್ಲಿ 6 ವರ್ಷದ ಸಮನ್ವಿ ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಖ್ಯಾತ ಹರಿಕಥೆ ದಾಸ ಗುರುರಾಜ ನಾಯ್ಡುರ ಮೊಮ್ಮಗಳು ಅಮೃತಾ ನಾಯ್ಡು. ಅಮ್ಮ-ಮಗಳು ಸ್ಕೂಟಿಯಲ್ಲಿ ಹೋಗುತ್ತಿರುವಾಗ ಬಂದ ಲಾರಿಯೊಂದು ಡಿಕ್ಕಿ ಹೊಡೆದಿತ್ತು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top