ಬಾಲಿವುಡ್ ನ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕನಾಗಿರುವ ಕರಣ್ ಜೋಹರ್ ನಿರೂಪಣೆಯಲ್ಲಿ ಮೂಡಿ ಬರುವ ‘ಕಾಫಿ ವಿತ್ ಕರಣ್’ ಟಾಕ್ ಶೋನ 7ನೇ ಅವತರಿಣಿಕೆ ಆರಂಭವಾಗಿದೆ.. ಎಷ್ಟೇ ವಿರೋಧವಿದ್ದರೂ ಎಷ್ಟೇ ಆರೋಪಗಳಿದ್ದರೂ ಈ ಶೋ ಗೆ ಇರುವ ಕ್ರೇಜ್ ಬೇರೆಯದ್ದೇ ಲೆವೆಲ್ ಎಂದು ಹೇಳಬಹುದು. ಏಕೆಂದರೆ ಈವರೆಗೂ ಮೂಡಿಬಂದಿರುವ ‘ಕಾಫಿ ವಿತ್ karan’ ಎಲ್ಲಾ ಸೀಸನ್ ಗಳು ಸೂಪರ್ ಡೂಪರ್ ಹಿಟ್…
ಇದೀಗ ಕಾಫಿ ವಿತ್ ಕರೆಂಟ್ ಸೀಸನ್ 7 ಆರಂಭವಾಗಿದ್ದು ಇದೇ ಜುಲೈ 7ನೇ ತಾರೀಕಿನಿಂದ ಪ್ರಸಾರವಾಗಲಿದೆ.. ಪ್ರತಿ ಸಲ ಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಶೋ ಈ ಬಾರಿ ಟಿವಿ ವಾಹಿನಿಗಳ ಬದಲಾಗಿ ನೇರವಾಗಿ ಒಟಿಟಿ ಯಲ್ಲಿ ಬರುತ್ತಿದೆ. ಖ್ಯಾತ ಓ ಟಿ ಪ್ಲಾಟ್ ಫಾರ್ಮ್ ಆಗಿರುವ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ಕಾಫಿ ವಿತ್ ಕರೆಂಟ್ ಸೀಸನ್-7 ಪ್ರಸಾರವಾಗಲಿದೆ.
ಇದೀಗ ಟ್ರೈಲರ್ ರಿಲೀಸ್ ಮಾಡುವ ಮೂಲಕ ಯಾರೆಲ್ಲ ಸೆಲೆಬ್ರಿಟಿಗಳು ಎಂಟ್ರಿ ಕೊಟ್ಟಿದ್ದಾರೆ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಆಲಿಯಾ ಭಟ್, ರಣವೀರ್ ಸಿಂಗ್, ಶಾಹಿದ್ ಕಪೂರ್, ಕಿಯಾರಾ ಅಡ್ವಾಣಿ, ಅನಿಲ್ ಕಪೂರ್, ವರುಣ್ ಧವನ್, ಅನನ್ಯಾ ಪಾಂಡೆ, ಸಾರಾ ಅಲಿ ಖಾನ್, ಟೈಗರ್ ಶ್ರಾಫ್, ಜಾನ್ವಿ ಕಪೂರ್, ವಿಜಯ್ ದೇವರಕೊಂಡ ಮತ್ತು ಕೃತಿ ಸನೋನ್ ಸೇರಿದ್ದಾರೆ. ಎಲ್ಲರೂ ಸದ್ಯ ರಿಲೀಸ್ ಆಗಿರುವ ಟ್ರೈಲರ್ ನಲ್ಲಿ ಕಾಣಿಸಿಕೊಂಡಿದ್ದಾರೆ.
It’s edgy? It’s spicy? It’s playful?
It’s all of the above – catch a sneak peek into some of the guests making this season the hottest one ever!#HotstarSpecials #KoffeeWithKaran S7 new season starts 7th July only on @DisneyPlusHS @apoorvamehta18 @jahnvio @aneeshabaig @Dharmatic_ pic.twitter.com/sJv9NeZzuf— Karan Johar (@karanjohar) July 2, 2022
ಸದ್ಯ ರಿಲೀಸ್ ಆಗಿರುವ ಟ್ರೈಲರ್ನ ಹೈಲೆಟ್ ಅಂದರೆ ಸಮಂತಾ. ಹೌದು ಸಮಂತಾ ಕಾಫಿ ವಿತ್ ಕರಣ್ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಎಂದರೆ ಸಮಂತಾ ನಟ ಅಕ್ಷಯ್ ಕುಮಾರ್ ಜೊತೆ ಕರಣ್ ಶೋಗೆ ಹಾಜರಾಗಿದ್ದಾರೆ. ಈ ಶೋನಲ್ಲಿ ಸಮಂತಾ ಹೇಳಿರುವ ಡೈಲಾಗ್ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಮಂತಾ, ಕರಣ್ ಜೋಹರ್ಗೆ ‘ಅಸಂತೋಷದ ಮದುವೆಗೆ ನೀವೆ ಕಾರಣ. ನೀವು ಜೀವನವನ್ನು ಕೆ3ಜಿ ( ಕಭಿ ಖುಷಿ ಕಭಿ ಗಮ್) ಎಂದು ಹೇಳಿದ್ದೀರಿ. ಆದರೆ ರಿಯಾಲಿಟಿ ಎಂದರೆ ಕೆಜಿಎಫ್” ಎಂದು ಹೇಳಿದ್ದಾರೆ. ಆದರೆ ಸಮಂತಾ ಪ್ರಕಾರ ಅದು ಹೇಗೆ ‘ಕೆಜಿಎಫ್’ ಎಂಬುದನ್ನು ಷೋ ಸಂಪೂರ್ಣ ರಿಲೀಸ್ ಆದ ಮೇಲೆಯೇ ನೋಡಬೇಕು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
