ಡೆಲಿವರಿ ಬಾಯ್ ಅವರ ಕಷ್ಟ ಒಂದಾ ಎರೆಡಾ. ತಾವು ದಿನನಿತ್ಯ ಬೆಳೆಗೆ ಇಂದ ಸಂಜೆಯವರೆಗೂ ತಮ್ಮ ಗ್ರಾಹಕರು ಆರ್ಡರ್ ಮಾಡಿದ ಆಹಾರ ಸರಿಯಾದ ಸಮಯಕ್ಕೆ ತಲುಪಿಸಬೇಕೆಂದು ಬಹಳಷ್ಟು ಶ್ರಮಪಟ್ಟು ಕಷ್ಟ ಪಟ್ಟು ದುಡಿಯುತ್ತಾರೆ. ಆದರೆ ಇವರ ಕಷ್ಟಗಳಿಗೆ ಹತ್ತು ಹಲವಾರು ಅಡ್ಡಿಗಳು ಎದುರಾಗುತ್ತಿರುತ್ತವೆ. ಒಂದು ಕಡೆ ಟ್ರಾಫಿಕ್ ಸಮಸ್ಯೆ ಯಾದರೆ ಮತ್ತೊಂದೆಡೆ ಮಳೆ. ಇಂತಹ ಸಂಧರ್ಭದಲ್ಲಿ ಡೆಲಿವರಿ ಬಾಯ್ ಮಾಡಿರುವ ಕೆಲಸ ಶ್ಲ್ಯಾಘನೀಯವಾಗಿದೆ.
ಮುಂಬೈ ಅಂತ ನಗರಗಳಲ್ಲಿ ಹೆಚ್ಚಾಗಿ ನಾವು ಟ್ರಾಫಿಕ್ ಸಮಸ್ಯೆಯನ್ನು ಕಾಣಬಹುದು. ಇದಲ್ಲದೆ ಮತ್ತೊಂದು ಸಮಸ್ಯೆ ಎಂದರೆ ಅದು ಮಳೆ. ಮಳೆ ಬಂದರೆ ಮುಂಬೈ ನಗರದ ಬೀದಿಗಳಲ್ಲಿ ಓಡಾಡಲು ಸಾಧ್ಯವಾಗುವುದಿಲ್ಲ. ಆದರೆ ಇಂತಹ ಸಂಧರ್ಭದಲ್ಲಿ ತನಗೆ ಹಾಗು ತನ್ನ ನಂಬಿದ ಗ್ರಾಹಕರಿಗೆ ಯಾವುದೇ ತೊಂದರೆ ಆಗಬಾರದೆಂದು ಡೆಲಿವರಿ ಬಾಯ್ ಕುದುರೆ ಏರಿ ತಮ್ಮ ಗ್ರಾಹಕರಿಗೆ ಫುಡ್ ಸಪ್ಲೈ ಮಾಡಿದ್ದಾರೆ.
ಕಳೆದ ಶುಕ್ರವಾರ (ಜುಲೈ 1) ಮುಂಬೈ ನಗರದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ಇದರ ಪರಿಣಾಮವಾಗಿ ರಸ್ತೆಗಳು ಜಲಾವೃತಿಯಾಗಿದ್ದವು. ಇದರಿಂದ ಡೆಲಿವರಿ ಬಾಯ್ ಗೆ ಗಾಡಿಯನ್ನು ಓಡಿಸಲು ಕಷ್ಟವಾಗುತ್ತಿತ್ತು. ಬುದ್ದಿ ಉಪಯೋಗಿಸಿದ ಈತ ಕುದುರೆ ಏರಿ ತನ್ನ ಗ್ರಾಹಕರಿಗೆ ಫುಡ್ ಡೆಲಿವರಿ ಮಾಡಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದ್ದು, ಬಾರಿ ಮೆಚ್ಚುಗೆ ಮತ್ತು ಕಮೆಂಟ್ ಗಳು ಹರಿದಾಡುತ್ತಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
