ರೈತರಿಗೆ ಸಹಾಯವಾಗುವ ದೃಷ್ಟಿಯಿಂದ ಭಾರತ ಸರ್ಕಾರ ಪಿಎಂ ಕಿಸಾನ್ ವೆಬ್ ಸೈಟ್ ಅಭಿವೃದ್ಧಿಪಡಿಸಿದೆ. ಇದರಲ್ಲಿ ರೈತರಿಗೆ ವ್ಯವಸಾಯದ ಬಗ್ಗೆ ಅನೇಕ ಮಾಹಿತಿಯನ್ನು ನೀಡಲಾಗುತ್ತದೆ. ಸ್ಥಳೀಯ ಡೀಲರ್‌ಗಳು, ಮಾರುಕಟ್ಟೆ, ಕೃಷಿ ಸಲಹೆಗಾರರ ಬಗ್ಗೆ, ಕೃಷಿ ರಕ್ಷಣೆ, ಐಪಿಎಮ್ ಪ್ರಯೋಗಗಳನ್ನು ರೈತರಿಗೆ ನೇರವಾಗಿ ನೀಡುತ್ತದೆ.. ಆದರೆ ಈ ವೆಬ್ ಸೈಟ್ ಈಗ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಹೌದು, ಪಿಎಂ ಕಿಸಾನ್ ವೆಬ್ ಸೈಟ್ ನಲ್ಲಿ ಕನ್ನಡವನ್ನು ಹೊರತುಪಡಿಸಿ ಉಳಿದ ಎಲ್ಲಾ ಭಾಷೆಗಳ ಆಯ್ಕೆಯನ್ನು ನೀಡಲಾಗಿದೆ. ಆದರೆ ಕನ್ನಡದ ಆಯ್ಕೆಯನ್ನು ನೀಡಿಲ್ಲ. ಪಿ ಎಂ ಕಿಸಾನ್ ವೆಬ್ ಸೈಟ್ ತೆರೆದರೆ ಭಾರತದ ಏಳೆಂಟು ಭಾಷೆಗಳ ಪಟ್ಟಿ ಕಾಣುತ್ತದೆ. ರೈತರು ತಮಗಿಷ್ಟವಾದ ಭಾಷೆಯನ್ನು ಆಯ್ಕೆ ಮಾಡಿಕೊಂಡು ಮಾಹಿತಿ ತಿಳಿಯಬಹುದು. ಆದರೆ ಕನ್ನಡ ಭಾಷೆಯ ಆಯ್ಕೆಯೇ ಇಲ್ಲ. ಹಾಗಾಗಿ ಕನ್ನಡಿಗರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಉದ್ದೇಶಪೂರಿತ ತಪ್ಪು ಬೇಕಂತಲೇ ಕರ್ನಾಟಕ ಮತ್ತು ಕನ್ನಡವನ್ನು ಕೇಂದ್ರ ಸರ್ಕಾರ ಕಡೆಗಣಿಸಿಸುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಮಾನ್ಯ @PMOIndia , @nstomar @nstomaroffice @ShobhaBJP #PMkisan ವೆಬ್ ನಲ್ಲಿ ಕನ್ನಡದಲ್ಲಿ ಸೇವೆಯೇ ಇಲ್ಲ, ಕರ್ನಾಟಕದಲ್ಲಿ ಲಕ್ಷಾಂತರ ಪಲಾನುಭವಿಗಳು ಇದ್ದಾರೆ.
@AgriGoI ದಯವಿಟ್ಟು ಕೊಡಲೇ ಕನ್ನಡದಲ್ಲೂ ಸೇವೆ ಕೊಡಿ.#KannadaForKannadigas pic.twitter.com/kyEIvxWTGA— GC ChandraShekhar (@GCC_MP) July 3, 2022
ಈ ಬಗ್ಗೆ ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ ಅಸಮಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಟ್ವಿಟ್ಟರ್ ಯಲ್ಲಿ ಟ್ವೀಟ್ ಮಾಡಿರುವ ಸಂಸದರು “#PMkisan ವೆಬ್ ನಲ್ಲಿ ಕನ್ನಡದಲ್ಲಿ ಸೇವೆಯೇ ಇಲ್ಲ, ಕರ್ನಾಟಕದಲ್ಲಿ ಲಕ್ಷಾಂತರ ಪಲಾನುಭವಿಗಳು ಇದ್ದಾರೆ. ದಯವಿಟ್ಟು ಕೊಡಲೇ ಕನ್ನಡದಲ್ಲೂ ಸೇವೆ ಕೊಡಿ.” ಎಂದು ಆಗ್ರಹಿಸಿದ್ದಾರೆ.. ಟ್ವೀಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಟ್ಯಾಗ್ ಮಾಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
