fbpx
ಸಿನಿಮಾ

ಕಿರುತೆರೆಯಲ್ಲಿ ಒಟ್ಟಿಗೆ ನಟಿಸಿ ಮದುವೆಯಾದ ಜೋಡಿಗಳು ಇವರೇ?

ಕಿರುತೆರೆಯ ಸೆಲೆಬ್ರಿಟಿಗಳು ಧಾರವಾಹಿ ಅಥವಾ ಸಿನಿಮಾಗಳಲ್ಲಿ ಮಾತ್ರ ಜೋಡಿಯಾಗಿದ್ದಲ್ಲದೆ ನಿಜ ಜೀವನದಲ್ಲೂ ಜೋಡಿ ಯಾಗಿದ್ದಾರೆ. ಕಿರುತಾರೆಯಲ್ಲಿ ಒಟ್ಟಿಗೆ ನಟಿಸಿ ಇವರ ಮಧ್ಯೆ ಪ್ರೀತಿ ಬೆಳದು ವಿವಾಹಾರದವರು ಬಹಳಷ್ಟು ಜನ ಇದ್ದಾರೆ. ಇದೀಗ ಸ್ಯಾಂಡಲ್ವುಡ್ ನಲ್ಲಿ ಆನ್ ಸ್ಕ್ರೀನ್ ನಲ್ಲಿ ಜೋಡಿಯಾಗಿದ್ದಲ್ಲದೆ ಆಫ್ ಸ್ಕ್ರೀನ್ ನಲ್ಲೂ ಜೋಡಿಯಾಗಿರುವ ಪಟ್ಟಿ ಇಲ್ಲಿದೆ.

ಯಶ್- ರಾಧಿಕಾ ಜೋಡಿ!
ಸ್ಯಾಂಡಲ್ವುಡ್ ನ ಕ್ಯೂಟ್ ಕಪಲ್ ಎಂದರೆ ಅದು ಯಶ್ ಮತ್ತು ರಾಧಿಕಾ ಜೋಡಿ. ನಂದಗೋಕುಲ ಎಂಬ ಧಾರಾವಾಹಿ ಮೂಲಕ ಪರಿಚಯರಾದ ಇವರು, ಮೊಗ್ಗಿನ ಮನಸು ಸಿನಿಮಾದಲ್ಲಿ ಒಟ್ಟಿಗೆ ನಟಿಸಿ ನಂತರ ರಾಮಾಚಾರಿ ಈಗೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಪ್ರೀತಿಸಿ ಒಂದಾದ ಈ ಜೋಡಿ ನಿಜಜೀವನದಲ್ಲೂ ಪರಸ್ಪರ ಪ್ರೀತಿಸಿ ಮದುವೆಯಾದರು. ಇದೀಗ ಈ ಜೋಡಿಗೆ ಮುದ್ದಾದ ಇಬ್ಬರು ಮಕ್ಕಳಿದ್ದಾರೆ.

 

 

ಪ್ರಶಾಂತ್ ಮತ್ತು ರೂಪಾ!
ಕನ್ನಡದ ಕಾಮಿಡಿ ಧಾರಾವಾಹಿಗಳಲ್ಲಿ ಹೆಚ್ಚಾಗಿ ಹೆಸರು ಮಾಡಿದ್ದೂ ಎಂದರೆ ಅದು “ಸಿಲ್ಲಿ ಲಲ್ಲಿ” ಧಾರಾವಾಹಿ. ಈ ಧಾರಾವಾಹಿಯಲ್ಲಿ ಪ್ರಶಾಂತ್ ಮತ್ತು ರೂಪ ಅವರ ಪಾತ್ರ ಹೆಚ್ಚಿನ ಪ್ರಾಮುಖ್ಯತೆ ಗಳಿಸಿತ್ತು. ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿ ಸ್ನೇಹ ಬೆಳೆಸಿದ ಇವರು ನಂತರ ಪರಸ್ಪರ ಪ್ರೀತಿಸಿ ಮದುವೆಯಾದರು.

 

 

ಚಂದನ್ ಮತ್ತು ಕವಿತಾ!
ಕಿರುತರೆಯ ಅತ್ಯಂತ ಜನಪ್ರಿಯ ಧಾರಾವಾಹಿ ಎಂದರೆ ಅದು “ಲಕ್ಷ್ಮಿ ಬಾರಮ್ಮ”. ಇನ್ನು ಈ ಧಾರಾವಾಹಿಯಲ್ಲಿ ಜನ ಮನ ಗೆದ್ದ ಜೋಡಿ ಎಂದರೆ ಅದು ಚಂದು ಮತ್ತು ಚಿನ್ನು ಜೋಡಿ. ತೆರೆಯಮೇಲೆ ಒಟ್ಟಿಗೆ ಇದ್ದ ಜೋಡಿ ತೆರೆಯ ಹಿಂದೆ ಕೂಡ ಪ್ರೀತಿಸಿ ವಿವಾಹರಾಗಿದ್ದಾರೆ. ಕಳೆದ ವರ್ಷ ಇವರಿಬ್ಬರು ಮದುವೆ ಯಾಗಿದ್ದಾರೆ.

 

 

ಚಂದನ್ ಶೆಟ್ಟಿ- ನಿವೇದಿತಾ!
ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಜನ ಮನ ಗೆದ್ದ ಜೋಡಿ ಎಂದರೆ ಕನ್ನಡ ರಾಪರ್ ಚಂದನ್ ಶೆಟ್ಟಿ ಮತ್ತು ಬಾರ್ಬಿ ಡಾಲ್ ನಿವೇದಿತಾ ಗೌಡ. ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಒಟ್ಟಿಗೆ ಕಾಣಿಸಿಕೊಂಡ ಈ ಜೋಡಿ ನಂತರ ಪ್ರೀತಿಸಿ ಮದುವೆಯಾಗಿದ್ದಾರೆ. ಇತ್ತೀಚಿಗೆ ಈ ಜೋಡಿ ರಾಜ ರಾಣಿ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದ್ದರು.

 

 

ಸುನೇತ್ರಾ ಮತ್ತು ರಮೇಶ್‌ ಪಂಡಿತ್‌!
ಕಿರುತರೆಯ ಮತ್ತೊಂದು ಜೋಡಿ ಎಂದರೆ ಅದು ಸುನೇತ್ರಾ ಮತ್ತು ರಮೇಶ್‌ ಪಂಡಿತ್‌ ಅವರ ಜೋಡಿ. ಸುನೇತ್ರಾ ಸಿಲ್ಲಿ ಲಲ್ಲಿ ಧಾರಾವಾಹಿ ಮೂಲಕ ಹೆಚ್ಚಿನ ಜನಪ್ರಿಯತೆ ಗಳಿಸಿಕೊಂಡರು. ಈ ಇಬ್ಬರು ಜೋಡಿ ಪ್ರೀತಿಸಿ ವಿವಾಹರಾದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top