fbpx
ಸಮಾಚಾರ

ಅಭಿಮಾನಿಯಿಂದ ತಯಾರಾಯ್ತು ಅಪ್ಪುವಿನ ಜೀವಂತ ಮೇಣದ ಬೋಂಬೆ! ನೋಡಿ ಭಾವುಕರಾದ ಪತ್ನಿ ಅಶ್ವಿನಿ

ನಟ “ಪವರ್ ಸ್ಟಾರ್”, “ಅಪ್ಪು” ಹೀಗೆ ಹಲವಾರು ಹೆಸರುಗಳಿಂದ ಕರೆಯಲ್ಪಟ್ಟ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಆಗಲಿ ತಿಂಗಳುಗಳೇ ಕಳೆದರು ಅವರ ನೆನಪು ಮಾತ್ರ ಸದಾ ಅಭಿಮಾನಿಗಳ ಮನಸಲ್ಲಿ ಅಚ್ಚೆಯಾಗಿ ಉಳಿದಿದೆ. ಅಪ್ಪು ಅವರು ನಮ್ಮನ್ನು ಅಗಲಿದರು ಸಹ ಅವರ ಹೆಸರಿನಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳು ಮಾತ್ರ ಸದಾ ನಡೆಯುತ್ತಿದೆ. ಇಂತಹ ಸಂಧರ್ಭದಲ್ಲಿ ಅಪ್ಪು ಅವರ ಅಭಿಮಾನಿ ತಂದಿದ್ದ ಒಂದು ಗಿಫ್ಟ್ ಇದೀಗ ಬಹಳಷ್ಟು ಚರ್ಚೆಗೆ ಕಾರಣವಾಗಿದೆ.

ಅಪ್ಪು ನಮನ್ನು ಅಗಲಿದರು ಅವರು ನೆನಪು ಮಾತ್ರ ಅಭಿಮಾನಿಗಳ ಮನಸಲ್ಲಿ ಜೀವಂತ ವಾಗಿದೆ. ಇದೆ ಕಾರಣಕ್ಕೆ ಅಪ್ಪುವಿನ ಅಪ್ಪಟ ಅಭಿಮಾನಿಯೊಬ್ಬ ಸಾಕಷ್ಟು ಹಣ ಖರ್ಚು ಮಾಡಿ ಅಪ್ಪುವಿನ ರೀತಿಯಲ್ಲೇ ಕಾಣುವ ಮೇಣದ ಬೊಂಬೆಯೊಂದನ್ನು ತಯಾರಿಸಿದ್ದಾನೆ. ಈ ಮೇಣದ ಬೊಂಬೆಯನ್ನು ಅಪ್ಪು ಅವರ ಪತ್ನಿ ಅಷ್ವಿನಿ ಅವರು ವೀಕ್ಷಿಸಿದರು

ಈ ಮೇಣದ ಗೊಂಬೆಯನ್ನು ಒಂದು ಕ್ಷಣ ನೋಡಿದರೆ ಅಪ್ಪು ಎಲ್ಲೂ ಹೋಗಿಲ್ಲ ಇನ್ನು ಜೀವಂತವಾಗಿ ನಮ್ಮ ಮುಂದೆಯೇ ಕುಳಿತಿದ್ದಾರೆ ಎನ್ನುವಷ್ಟು ನೈಜತೆಯಿಂದ ಕೂಡಿದೆ. ಇನ್ನು ಅಪ್ಪುವಿನ ಮೇಣದ ಬೊಂಬೆಯನ್ನು ವೀಕ್ಷಿಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಒಂದು ಕ್ಷಣ ಭಾವುಕರಾದರು. ಈ ಮೇಣದ ಗೊಂಬೆಯನ್ನಿ ಉಡುಗೊರೆಯಾಗಿ ನೀಡಿದ ಅಭಿಮಾನಿಗೆ ಧನ್ಯವಾದವನ್ನು ತಿಳಿಸಿದ್ದಾರೆ. ಇದಲ್ಲದೆ ನಿಮ್ಮ ಪ್ರೀತಿಯಲ್ಲಿ ಅಪ್ಪು ಎಂದಿಗೂ ಜೀವಂತವಾಗಿ ಇರುತ್ತಾರೆ ಎಂದು ಹೇಳಿ ಅಪ್ಪು ಬೊಂಬೆಗೆ ಮುತ್ತು ಕೊಟ್ಟು ಅಲ್ಲಿಂದ ಹೊರಟರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top