fbpx
ಸಮಾಚಾರ

ಜೇಮ್ಸ್ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಆಸ್ಪತ್ರೆಗೆ ದಾಖಲು! ಸ್ಥಿತಿ ಗಂಭೀರ- ವೈದ್ಯರ ಮಾಹಿತಿ ಏನು?

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾಗಳಲ್ಲಿ ಒಂದಾಗಿರುವ ‘ಜೇಮ್ಸ್’ ಚಿತ್ರವನ್ನು ನಿರ್ಮಾಣ ಮಾಡಿದ್ದ ನಿರ್ಮಾಪಕ ಕಿಶೋರ್ ಪಟ್ಟಿಕೊಂಡ ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಿಶೋರ್ ಅವರಿಗೆ ಹೈ ಬಿಪಿಯಿಂದ ಸ್ಟ್ರೋಕ್ ಆಗಿದೆ ಎನ್ನುವ ಮಾಹಿತಿ ತಿಳಿದುಬಂದಿದ್ದು,ಸ್ಟ್ರೋಕ್ ಆದ ತಕ್ಷಣ ಕಿಶೋರ್ ಅವರನ್ನು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಕಿಶೋರ್ ಅವರನ್ನು ಅಪೋಲೋ ಆಸ್ಪತ್ರೆಯ ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗತ್ತಿದೆ ಎನ್ನಲಾಗಿದೆ. ಕಿಶೋರ್ ಸ್ಥಿತಿ ಗಂಭೀರವಾಗಿದ್ದು ಕೋಮಾದಲ್ಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಇದೀಗ ಆಸ್ಪತ್ರೆಯ ವೈದ್ಯರು ಇವರ ಪರಿಸ್ಥಿತಿ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾಧ್ಯಮದ ಜೊತೆ ಮಾತನಾಡಿದ ವೈದ್ಯರು “ಆಸ್ಪತ್ರೆಗೆ ಕಿಶೋರ್ ಬಂದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಲೆಫ್ಟ್ ಬ್ರೈನ್ ಬಳಿ ಬ್ಲಡ್ ಕ್ಲಾಟ್ ಆಗಿತ್ತು. ಇಮಿಡಿಯೇಟ್ ಸರ್ಜರಿ ಮಾಡಿದೆವು. ಸದ್ಯ ಅವರಿಗೆ ಪ್ರಜ್ಞೆ ಬಂದಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಆದರೆ, ಒಂದು ವಾರ ಕಾಲ ಐಸಿಯುನಲ್ಲೇ ಇರಬೇಕಾಗುತ್ತದೆ. ವೆಂಟಿಲೇಟರ್ ತೆಗೆಯಲು ನೋಡಿದ್ವಿ. ಆದ್ರೆ ಸದ್ಯಕ್ಕಿನ್ನೂ ಆಗ್ತಿಲ್ಲ. ತುಂಬಾ ರೆಸ್ಟ್ ಲೇಸ್ ಆಗಿರೋದ್ರಿಂದ ಈ ರೀತಿ ಆಗಿದೆ. ಅವರು ತುಂಬಾ ರೆಸ್ಟ್ ಮಾಡಬೇಕಾಗುತ್ತೆ” ಎಂದಿದ್ದಾರೆ.

ಲೆಫ್ಟ್ ಬ್ರೈನ್ ಬಳಿ ಬ್ಲಡ್ ಸಿಲೋಟ್ ಆಗಿರುವ ಕಾರಣ ಅವರಿಗೆ ಮಾತನಾಡೋಕ್ಕೆ ಸ್ವಲ್ಪ ಸಮಯ ವಾಗಬಹುದು. ಫಿಸಿಯೋತೆರಪಿ ಮಾಡಿಸಿದರೆ ಸರಿ ಹೋಗುತ್ತದೆ. ಸ್ಟ್ರೋಕ್ ಇಂದ ಇವರ ರೈಟ್ ಸೈಡ್ ಸ್ವಲ್ಪ ಸ್ವಾದೀನ ಕಳೆದುಕೊಂಡಿದೆ. ಈಗಲೂ ಅವರ ಸ್ಥಿತಿ ಗಂಭೀರವಾಗಿದ್ದು, ಇನ್ನು ಒಂದು ವಾರ ಇವರನ್ನು ಐಸಿಯುನಲ್ಲೇ ಚಿಕಿತ್ಸೆ ಮುಂದುವರಿಸಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top