fbpx
ಸಮಾಚಾರ

ಉದ್ಯೋಗಿಯಿಂದ ಅವಳಿ ಮಕ್ಕಳನ್ನು ಪಡೆದ ಇಲಾನ್ ಮಸ್ಕ್: 51ರ ಮಸ್ಕ್‌ ಈಗ 9 ಮಕ್ಕಳ ತಂದೆ

ಟೆಸ್ಲಾ ಖ್ಯಾತಿಯ ಉದ್ಯಮಿ ಇಲಾನ್ ಮಸ್ಕ್ ಅವರು ತನ್ನ ಕಂಪನಿಯ ಉದ್ಯೋಗಿಯೊಬ್ಬರಿಂದ ಅವಳಿ ಮಕ್ಕಳನ್ನು ಪಡೆದಿರುವ ಸಂಗತಿ ಈಗ ಬೆಳಕಿಗೆ ಬಂದಿದೆ. ಎಲೋನ್‌ ಮಸ್ಕ್ ಮಾಲೀಕತ್ವದ ಬ್ರೈನ್‌ ಚಿಪ್‌ ಸ್ಟಾರ್ಟಪ್ ನ್ಯೂರಾಲಿಂಕ್‌ನ ಉನ್ನತ ಹುದ್ದೆಯಲ್ಲಿರುವ 36 ವರ್ಷದ ಶಿವೋನ್ ಜಿಲಿಸ್ ಜತೆಗಿನ ಸಂಬಂಧದಿಂದ ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಅವಳಿ ಮಕ್ಕಳನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ.

‘ಬ್ಯುಸಿನೆಸ್ ಇನ್‌ಸೈಡರ್‘ ಈ ಕುರಿತು ವರದಿ ಪ್ರಕಟಿಸಿದ್ದು, ಮಸ್ಕ್ ಮತ್ತು ಝಿಲಿಸ್ ಇಬ್ಬರೂ ಮಕ್ಕಳ ಹೆಸರು ಬದಲಾವಣೆ ಕುರಿತಂತೆ ನ್ಯಾಯಾಲಯಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ವಿಚಾರ ಬಹಿರಂಗವಾಗಿದೆ ಎಂದು ಹೇಳಿದೆ. ವರದಿಯ ಪ್ರಕಾರ, ಮಕ್ಕಳ ಹೆಸರಲ್ಲಿ “ತಮ್ಮ ತಂದೆಯ ಕೊನೆಯ ಹೆಸರನ್ನು ಹೊಂದಲು” ಮತ್ತು ಅವರ ಮಧ್ಯದ ಹೆಸರಿನ ಭಾಗವಾಗಿ ಅವರ ತಾಯಿಯ ಕೊನೆಯ ಹೆಸರನ್ನು ಹೊಂದಲು ಏಪ್ರಿಲ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ. ಈ ಅರ್ಜಿಯಿಂದಲೇ ಅವಳಿ ಮಕ್ಕಳ ಸುದ್ದಿ ಹಬ್ಬಿದೆ. ಅರ್ಜಿಯನ್ನು ಮೇ ತಿಂಗಳಲ್ಲಿ ಅಂಗೀಕರಿಸಲಾಗಿದೆ ಎಂದು ವರದಿ ತಿಳಿಸಿದೆ.

ಇಲಾನ್ ಮಸ್ಕ್ ಅವರು ಕೆನಡಾದ ಗಾಯಕಿ ಗ್ರಿಮ್ಸ್ ಜತೆಗೆ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. ಮಾಜಿ ಪತ್ನಿ, ಕೆನಡಾದ ಲೇಖಕಿ ಜಸ್ಟಿನ್ ವಿಲ್ಸನ್ ಜತೆಗಿನ ದಾಂಪತ್ಯದಲ್ಲಿ ಐದು ಮಕ್ಕಳನ್ನು ಪಡೆದಿದ್ದು, ಝಿಲಿಸ್ ಜತೆಗಿನ ಸಂಬಂಧದಿಂದ ಅವಳಿ ಮಕ್ಕಳನ್ನು ಹೊಂದುವ ಮೂಲಕ ಸುದ್ದಿಯಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top