fbpx
ಸಮಾಚಾರ

ಜುಲೈ 07: ಇಂದಿನ ಪಂಚಾಂಗ ಮತ್ತು ಭವಿಷ್ಯ

ಜುಲೈ 7, 2022 ಗುರುವಾರ
ವರ್ಷ : 1944, ಶೋಭಾಕೃತ
ತಿಂಗಳು : ಆಷಾಢ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ಅಷ್ಟಮೀ : Jul 06 07:48 pm – Jul 07 07:28 pm; ನವಮೀ : Jul 07 07:28 pm – Jul 08 06:25 pm
ನಕ್ಷತ್ರ : ಹಸ್ತ: Jul 06 11:44 am – Jul 07 12:19 pm; ಚಿತ್ತ: Jul 07 12:20 pm – Jul 08 12:13 pm
ಯೋಗ : ಪರಿಘ: Jul 06 11:42 am – Jul 07 10:38 am; ಶಿವ: Jul 07 10:38 am – Jul 08 09:01 am
ಕರಣ : ವಿಷ್ಟಿ: Jul 06 07:49 pm – Jul 07 07:44 am; ಬಾವ: Jul 07 07:44 am – Jul 07 07:28 pm; ಬಾಲವ: Jul 07 07:28 pm – Jul 08 07:02 am

Time to be Avoided
ರಾಹುಕಾಲ : 2:00 PM to 3:35 PM
ಯಮಗಂಡ : 6:02 AM to 7:38 AM
ದುರ್ಮುಹುರ್ತ : 10:17 AM to 11:08 AM, 03:22 PM to 04:13 PM
ವಿಷ : 08:17 PM to 09:53 PM
ಗುಳಿಕ : 9:13 AM to 10:49 AM

Good Time to be Used
ಅಮೃತಕಾಲ : 06:11 AM to 07:49 AM
ಅಭಿಜಿತ್ : 11:59 AM to 12:49 PM

Other Data
ಸೂರ್ಯೋದಯ : 6:02 AM
ಸುರ್ಯಾಸ್ತಮಯ : 6:46 PM

 

 

ಸಂಕಷ್ಟಗಳು ಮಂಜಿನಂತೆ ಕರಗಿ ಹೋಗುವವು. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ನೂತನ ಕೆಲಸದ ಜವಾಬ್ದಾರಿ ತೆಗೆದುಕೊಳ್ಳಬೇಕಾಗುವುದು. ಅತಿ ಆತ್ಮವಿಶ್ವಾಸದಿಂದ ಕೆಲಸ ಕೆಡುವುದು. ಹಾಗೆಂದ ಮಾತ್ರಕ್ಕೆ ಧೃತಿಗೆಡುವ ಅಗತ್ಯವಿಲ್ಲ.

 

ಹಲವು ವಿಷಯಗಳಲ್ಲಿ ನಿಮಗೆ ಗೊಂದಲ ಉಂಟಾಗುವುದು. ಹಾಗಾಗಿ ವಿಷಯಗಳ ಬಗ್ಗೆ ಖಚಿತ ಹಾಗೂ ಸ್ಪಷ್ಟ ನಿಲುವು ತಾಳುವುದು ಒಳ್ಳೆಯದು. ಹಣದ ಹರಿವು ನೀವು ಬಯಸಿದಂತೆ ಇರುವುದು. ಬಂಧುಗಳ ಆರೋಗ್ಯ ಸುಧಾರಣೆಯ ಜವಾಬ್ದಾರಿ ನಿಮ್ಮ ಮೇಲೆ ಬೀಳುವ ಸಾಧ್ಯತೆ ಇದೆ.

 

ಕುಟುಂಬ ಸದಸ್ಯರೊಡನೆ ಸಾಮರಸ್ಯ ಕಾಪಾಡಿಕೊಂಡರೆ ಹೆಚ್ಚು ಪ್ರಯೋಜನವಿದೆ. ವ್ಯಂಗ್ಯವಾಗಿ ಮಾತನಾಡಬೇಡಿ. ಇದರಿಂದ ಉತ್ತಮ ಸಂಬಂಧಗಳು ಕೈ ತಪ್ಪಿ ಹೋಗುವವು.  ಹಳೆ ಮಿತ್ರರ ಅಥವಾ ಸಂಬಂಧಿಕರ ಭೇಟಿ ನಿಮಗೆ ಹೊಸ ಹುಮ್ಮಸ್ಸು ನೀಡುವುದು.

 

ಕೆಲಸಗಳು ಯಾವುದೇ ಅಡೆತಡೆಗಳಿಲ್ಲದೆ ಮುಂದೆ ಸಾಗುವವು. ನಿಮ್ಮ ಶ್ರಮ ಹಾಗೂ ನಿಷ್ಠೆಯ ಫಲವಾಗಿ ಉತ್ತಮ ಆದಾಯ ಗಳಿಸುವಿರಿ. ಖರ್ಚು ವೆಚ್ಚಗಳ ಮೇಲೆ ನಿಗಾ ಇಡುವುದು ಒಳ್ಳೆಯದು.

 

 

ಗುಡ್ಡದಂತೆ ಬಂದಿದ್ದ ಆತಂಕಗಳು ಕಡ್ಡಿಯಂತೆ ಹಾರಿಹೋಗಲಿವೆ. ಸಂತೋಷದಿಂದ ದಿನಗಳನ್ನು ಕಳೆಯಲು ಪ್ರಯತ್ನಿಸಿ.ನಾನೇ ಎಲ್ಲವನ್ನು ಬಲ್ಲವನೆಂದು ಗರ್ವ ಪಡಬೇಡಿ. ಅನಿವಾರ್ಯ ಸಂದರ್ಭಗಳಲ್ಲಿ ಅನುಭವಿಗಳ ಸಲಹೆ ಪಡೆಯಿರಿ.

 

 

ನೀವು ಮಾಡಲಿರುವ ಉತ್ತಮ ಕೆಲಸಗಳು ನಿರ್ವಿಘ್ನವಾಗಿ ನೆರವೇರಲಿವೆ. ಬಾಕಿ ಹಣ ಸಕಾಲದಲ್ಲಿ ಬರಲಿದೆ. ಪರಿಸ್ಥಿತಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ತಿರುವು ಪಡೆಯಲಿದೆ. ಅತಿ ಒತ್ತಡದ ಸನ್ನಿವೇಶಗಳನ್ನು ಎದುರಿಸಬೇಕಾಗುವುದು.

 

 

ವ್ಯವಹಾರ ನಿಮಿತ್ತ ದೂರ ಪ್ರಯಾಣ ಮಾಡಬೇಕಾಗುವುದು. ತಾಯಿಯ ಆರೋಗ್ಯದಲ್ಲಿ ಎಚ್ಚರಿಕೆ ಅಗತ್ಯ. ಯುವ ಪ್ರತಿಭೆಗೆ ತಕ್ಕ ಗೌರವ ಸಂದಾಯವಾಗುವುದು. ಶಿಸ್ತುಬದ್ಧ ಜೀವನ ರೂಢಿಸಿಕೊಳ್ಳುವುದು ಒಳ್ಳೆಯದು.

 

 

ಶಾರೀರಿಕ ಬಳಲಿಕೆ ಕಂಡು ಬಂದರೂ ಉತ್ಸಾಹ ಕುಂದದು. ಆರೋಗ್ಯದ ಕಡೆ ಲಕ್ಷ ್ಯ ನೀಡಿ. ವಾಹನಗಳನ್ನು ಚಲಾಯಿಸುವಾಗ ಎಚ್ಚರದಿಂದಿರಿ. ಲೇವಾದೇವಿ ವ್ಯವಹಾರ ಮುಂದುವರೆಸಲು ಸಕಾಲ.

ಅವಸರದಲ್ಲಿ ಹಮ್ಮಿಕೊಂಡ ಕಾರ್ಯಗಳು ಅರ್ಧಕ್ಕೆ ನಿಲ್ಲುವ ಸಂದರ್ಭವಿದೆ. ಆರ್ಥಿಕ ಭರವಸೆ ಕೊಟ್ಟವರು ಹಣಕಾಸಿನ ಸಹಾಯ ಮಾಡಲು ಹಿಂಜರಿಯುವರು. ವ್ಯಾಪಾರದ ದೃಷ್ಟಿಯಿಂದ ಹಳೆಯ ವಾಹನ ಖರೀದಿ ಸೂಕ್ತವಲ್ಲ.

 

 

ಅಪರಿಚಿತ ವ್ಯಕ್ತಿಯ ಸಲಹೆಯಿಂದಾಗಿ ವ್ಯವಹಾರಗಳಲ್ಲಿ ಸಾಕಷ್ಟು ತೊಂದರೆ ಅನುಭವಿಸುವಿರಿ. ಹಾಗಾಗಿ ಅಪರಿಚಿತ ವ್ಯಕ್ತಿಗಳೊಂದಿಗೆ ವ್ಯವಹಾರ ಬೇಡ. ಆರ್ಥಿಕ ಮುಗ್ಗಟ್ಟು ಕಂಡು ಬರುವುದು.

 

ನಿಮ್ಮ ಆದಾಯದ ಮೂಲ ಹೆಚ್ಚಲಿದೆ. ಬಂಧುಗಳಿಗೆ ಕೈಲಾದ ಸಹಾಯ ಮಾಡಲು ಪ್ರಯತ್ನಿಸುವಿರಿ. ಎಲ್ಲಾ ಸಮಸ್ಯೆಗಳು ಒಮ್ಮೆಲೆ ಪರಿಹಾರ ಆಗುವುದು. ಆರೋಗ್ಯದ ವಿಚಾರದಲ್ಲಿ ತೊಂದರೆ ಇಲ್ಲ.

 

ಮತ್ತಾರನ್ನೋ ಸಂತೃಪ್ತಿಪಡಿಸಲು ಹೋಗಿ ನೀವು ಸಮಸ್ಯೆಯ ಸುಳಿಯಲ್ಲಿ ಸಿಲುಕದಿರಿ. ಕಾರ್ಯದ ಒತ್ತಡ ತೀವ್ರವಾಗುವುದರಿಂದ ಅಪಾರ ತಾಳ್ಮೆ ಅತ್ಯವಶ್ಯಕ ಎಂಬುದನ್ನು ಮರೆಯದಿರಿ. ಮತ್ತೊಬ್ಬರ ಮೇಲೆ ಸಂಶಯ ಪಡುವುದನ್ನು ಬಿಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top