fbpx
ಸಮಾಚಾರ

ಸಿಸೇರಿಯನ್ ಹೆರಿಗೆಯ ವಿಡಿಯೋ ಹಂಚಿಕೊಂಡ ನಟಿ ಸಂಜನಾ ಗಲ್ರಾನಿ

ನಟಿ ಸಂಜನಾ ಗಲ್ರಾನಿ ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿರುವುದು ಗೊತ್ತಿರುವ ವಿಚಾರ. . ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರೀಯರಾಗಿರುವ ನಟಿ ಸಂಜನಾ, ಸಾಮಾಜಿಕ ಜಾಲತಾಣದ ಮೂಲಕ ತಾಯ್ತನದ ಅಮೂಲ್ಯ ಕ್ಷಣಗಳ ಬಗ್ಗೆ
ಪೋಸ್ಟ್ ಮಾಡುತ್ತಿರುತ್ತಾರೆ.

 

 

ಈಗ ಅವರು ತಮ್ಮ ಸಿಸೇರಿಯನ್​ ಹೆರಿಗೆಯ ವಿಡಿಯೋ ಹಂಚಿಕೊಂಡಿದ್ದಾರೆ. ಇದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಸಿಸೇರಿಯನ್​ ಹೆರಿಗೆ ಕಷ್ಟ ಹೇಗಿರುತ್ತದೆ ಎಂಬುದನ್ನು ಸಂಜನಾ ವಿವರಿಸಿದ್ದಾರೆ. ಮಗು ಹೊರ ತೆಗೆದ ನಂತರ ಹೊಕ್ಕುಳ ಬಳ್ಳಿ ಕತ್ತರಿಸಿ ಮೊದಲ ಬಾರಿಗೆ ತಾವು ಮಗುವಿನ ಮುಖ ನೋಡಿದ ಗಳಿಗೆಯನ್ನು ಸಂಜನಾ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಜೊತೆಗೆ ತಮಗೆ ಹೆರಿಗೆ ಮಾಡಿಸಿದ ವೈದ್ಯರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಅಂದಹಾಗೆ ನಟಿ ಸಂಜನಾ ಮುಸ್ಲಿಂ ಸಂಪ್ರದಾಯದಲ್ಲಿ ವೈದ್ಯ ಅಜೀಜ್ ಪಾಷ ಅವರನ್ನು ಮದುವೆಯಾಗಿದ್ದರು. ಅಜೀಜ್ ಪಾಷ ಬೆಂಗಳೂರಿನ ಪ್ರಸಿದ್ಧ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ. ಡ್ರಗ್ಸ್ ವಿವಾದದ ವೇಳೆ ಸಂಜನಾ ಮದುವೆ ವಿಚಾರ ಹೊರಬಂದಿತ್ತು. ಇದೀಗ ದಂಪತಿ ಮೊದಲ ಮಗುವಿನ ಆಗಮನದ ಸಂಭ್ರಮದಲ್ಲಿದ್ದಾರೆ. ತಾವು ಗರ್ಭಿಣಿ ಕಳೆದ ಜನವರಿಯಲ್ಲಿ ಎಂಬ ವಿಚಾರವನ್ನು ಸಂಜನಾ ಹಂಚಿಕೊಂಡಿದ್ದರು. ಕಳೆದ ತಿಂಗಳು ಅವರಿಗೆ ಹೆರಿಗೆಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top