fbpx
ಸಮಾಚಾರ

ತಮಿಳು ನಟ ಚಿಯಾನ್ ವಿಕ್ರಮ್ ಗೆ ಹೃದಯಾಘಾತ

ತಮಿಳು ಚಿತ್ರರಂಗದ ಖ್ಯಾತ ನಟ ಚಿಯಾನ್ ವಿಕ್ರಮ್ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಇಂದು ಜುಲೈ 8 ರಂದು ಲಘು ಹೃದಯಾಘಾತಕ್ಕೆ ಒಳಗಾಗಿದ್ದರು. ತಕ್ಷಣ ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಆಸ್ಪತ್ರೆಯ ಮೂಲಗಳ ಪ್ರಕಾರ, ನಟ ವಿಕ್ರಮ್ ಅರೋಗ್ಯ ಸ್ಥಿರವಾಗಿದ್ದು, ಸದ್ಯಕ್ಕೆ ಆಸ್ಪತ್ರೆಯ ಆರೈಕೆಯಲ್ಲಿದ್ದಾರೆ.ವಿಕ್ರಮ್​ ಅವರಿಗೆ ಈಗ 56 ವರ್ಷ ವಯಸ್ಸು.

ನಟ ವಿಕ್ರಮ್ ಅವರ ಹೃದಯಾಘಾತದ ಸುದ್ದಿ ಎಲ್ಲೆಡೆ ಪಸರಿಸುತ್ತಿದ್ದಂತೆ ಅಭಿಮಾನಿಗಳು ಗಾಬರಿಯಾಗಿದ್ದು ಯಾವುದೇ ರೀತಿಯ ಹೆಚ್ಚು ಕಡಿಮೆ ಆಗದೆ ವಿಕ್ರಮ್ ಅವರು ಬಹುಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ಅವರ ಮುಂಬರುವ ಚಿತ್ರ ಕೋಬ್ರಾ ಆಗಸ್ಟ್ 11 ರಂದು ದೊಡ್ಡ ಪರದೆಯ ಮೇಲೆ ಬರಲಿದೆ. ಇಮೈಕ್ಕಾ ನೋಡಿಗಲ್ ಖ್ಯಾತಿಯ ನಿರ್ದೇಶಕ ಅಜಯ್ ಜ್ಞಾನಮುತ್ತು ಇದನ್ನು ನಿರ್ದೇಶನ ಮಾಡಿದ್ದಾರೆ. ತಾರಾಗಣದಲ್ಲಿ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ಶ್ರೀನಿಧಿ ಶೆಟ್ಟಿ, ಮಿರ್ನಾಲಿನಿ ರವಿ, ಕೆಎಸ್ ರವಿಕುಮಾರ್ ಮತ್ತು ಮಿಯಾ ಜಾರ್ಜ್ ಸೇರಿದಂತೆ ಇತರರು ಇದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top