ಕ್ರಿಕೆಟ್ ನಲ್ಲಿ ಆವಿಷ್ಕಾರ ಎಂಬುದು ಇತ್ತೀಚಿಗೆ ಸಾಮಾನ್ಯ ವಿಷಯವಾಗಿಬಿಟ್ಟಿದೆ.ತಂತ್ರಜ್ಞಾನವು ಈ ಆಟವನ್ನು ನೋಡುವ ಮತ್ತು ಪ್ರದರ್ಶಿಸುವ ವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಟಿ20 ಬ್ಲಾಸ್ಟ್ನಲ್ಲೂ ಇಂತಹದೊಂದು ಬದಲಾವಣೆ ಕಂಡುಬಂದಿದೆ..
An innovative way to bring the match ball in the Vitality Blast. pic.twitter.com/1w8pfCg22P
— Mufaddal Vohra (@mufaddal_vohra) July 7, 2022
ಇತ್ತೀಚೆಗೆ ಇಂಗ್ಲೆಂಡ್ನಲ್ಲಿ ನಡೆದ ಟಿ20 ಬ್ಲಾಸ್ಟ್ ಪಂದ್ಯದಲ್ಲಿ ಒಂದು ವಿನೂತನ ಉಪಾಯವನ್ನು ಮಾಡಲಾಗಿತ್ತು. ಪಂದ್ಯದಲ್ಲಿ ಬಳಸಬೇಕಿದ್ದ ಚೆಂಡನ್ನು ಮೈದಾನಕ್ಕೆ ಅಂಪೈರ್ ಹಿಡಿದುಕೊಂಡು ಬಂದಿರಲಿಲ್ಲ. ಬದಲಿಗೆ ರಿಮೋಟ್ ಕಂಟ್ರೋಲ್ನ ಪುಟ್ಟ ಕಾರೊಂದು ಮೈದಾನ ಪ್ರವೇಶಿಸಿ, ಚೆಂಡನ್ನು ಹಿಡಿದುಕೊಂಡು ಬಂದಿದೆ.. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ.
An innovative way to bring the match ball in the Vitality Blast. pic.twitter.com/1w8pfCg22P
— Mufaddal Vohra (@mufaddal_vohra) July 7, 2022
ಕಾರು ಹತ್ತಿರ ಬರುತ್ತಿದ್ದಂತೆ ಮೇಲೆ ಚೆಂಡು ಇರುವುದು ಕಂಡು ಬಂದಿದೆ. ಈ ವೀಡಿಯೋದಲ್ಲಿ ಕಾರಿನ ಮೇಲ್ಛಾವಣಿಯಲ್ಲಿ ಚೆಂಡನ್ನು ಇಟ್ಟು ರಿಮೋಟ್ ಕಂಟ್ರೋಲ್ ಮೂಲಕ ಆಪರೇಟ್ ಮಾಡಲಾಗಿದೆ. ಸಾಮಾನ್ಯವಾಗಿ ಪಂದ್ಯ ಆರಂಭಕ್ಕೂ ಮುನ್ನ ಚೆಂಡು ಅಂಪೈರ್ ಕೈಯಲ್ಲಿರುತ್ತದೆ. ಆದರೆ, ಟಿ20 ಬ್ಲಾಸ್ಟ್ನಲ್ಲಿ ಮೈದಾನದಲ್ಲಿ ಚೆಂಡನ್ನು ಪಡೆಯುವ ವಿಶಿಷ್ಟ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
