fbpx
ಸಮಾಚಾರ

T-20 ಕ್ರಿಕೆಟ್ ನಲ್ಲಿ ಯಾವ ಬೌಲರ್ ಮಾಡದೇ ಇರುವ ಸಾಧನೆಯನ್ನು ಮಾಡಿದ ಭುವಿ?

ಭಾರತ ಮತ್ತು ಇಂಗ್ಲೆಂಡ್ ನಡುವಿನ T-20 ಪಂದ್ಯ ಬಹಳಷ್ಟು ರೋಚಕತೆಯಿಂದ ಕೂಡಿತ್ತು. ಈ ಟೂರ್ನಿಯಲ್ಲಿ ಉತ್ತಮ ಸಾಧನೆ ತೋರಿದ ಟೀಮ್ ಇಂಡಿಯಾ ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿತ್ತು. ಈ ಟೂರ್ನಿಯಲ್ಲಿ ಭಾರತಕ್ಕೆ ಜಯ ತಂದು ಕೊಟ್ಟಿದ್ದು ಭುವನೇಶ್ವರ್ ಕುಮಾರ್ ಎಂದು ಹೇಳಿದರೆ ತಪ್ಪಾಗಲಾರದು. ಇದೀಗ ಭುವಿ T-20 ಕ್ರಿಕೆಟ್ ನಲ್ಲಿ ಯಾರೂ ಮಾಡದೇ ಇರುವಂತಹ ಸಾಧನೆಯನ್ನು ಮಾಡಿದ್ದಾರೆ.

ಭಾರತ ತಂಡದ ಶ್ರೇಷ ಬೌಲರ್ ಎಂದರೆ ಅದು ಭುವನೇಶ್ವರ್ ಕುಮಾರ್. ಕಳೆದ ಕೆಲವು ವರ್ಷಗಳಿಂದ ಇವರಿಗೆ ಹೆಚ್ಚಾಗಿ ಭಾರತ ತಂಡದಲ್ಲಿ ಆಡಲು ಅವಕಾಶ ಸಿಕ್ಕಿರಲಿಲ್ಲ. ಇದೀಗ ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದಲ್ಲದೆ T20 ಕ್ರಿಕೆಟ್​ನ ಪವರ್ ಪ್ಲೇಗಳಲ್ಲಿ 500 ಡಾಟ್ ಬಾಲ್‌ಗಳನ್ನು ಬೌಲ್ ಮಾಡಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದಕ್ಕಿಂತ ಮುಂಚೆ ಈ ಧಾಖಲೆ ನ್ಯೂಜಿಲೆಂಡ್‌ನ ಟಿಮ್ ಸೌಥಿ ಮತ್ತು ವೆಸ್ಟ್ ಇಂಡೀಸ್‌ನ ಸ್ಯಾಮ್ಯುಯೆಲ್ ಬದ್ರಿ ಅವರ ಹೆಸರಿನಲ್ಲಿತ್ತು. ಈ ಇಬ್ಬರು ಬೌಲರ್ ಗಳು 383 ಡಾಟ್ ಬಾಲ್​ಗಳನ್ನು ಎಸೆದಿದ್ದರು. ಆದರೆ ಇದೀಗ ಭುವಿ 500 ಡಾಟ್ ಬಾಲ್ ಗಳನ್ನೂ ಎಸೆಯುವ ಮೂಲಕ ವಿಶೇಷ ಸಾಧನೆಯನ್ನು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top