fbpx
ಸಮಾಚಾರ

ಅರ್ಜುನ್​ ಜನ್ಯ ನಿರ್ದೇಶನ ಮಾಡಲಿರುವ ಶಿವಣ್ಣನ ಚಿತ್ರಕ್ಕೆ ಟೈಟಲ್​ ಅನೌನ್ಸ್​!

ಮಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಅವರು ಸಂಗೀತದಲ್ಲಿ ಮಾಡಿರುವ ಮೋಡಿ ನಮಗೆಲ್ಲ ತಿಳಿದಿದೆ. ಇವರ ಹಾಡುಗಳಿಗಾಗಿ ಜನ ಮುಗಿಬಿದ್ದು ಕಾಯುತ್ತಿರುತ್ತಾರೆ. ಇದೀಗ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಅರ್ಜುನ್ ಜನ್ಯ ಸಿನಿಮಾ ನಿರ್ದೇಶನದತ್ತ ಹೆಜ್ಜೆ ಹಾಕುತ್ತಿದ್ದು, ಇದೆ ಕಾರಣಕ್ಕಾಗಿ ಶಿವಣ್ಣನ ಹುಟ್ಟುಹಬ್ಬಕ್ಕಾಗಿ ಟೈಟಲ್ ಕೂಡ ಅನೌನ್ಸ್ ಮಾಡಿದ್ದಾರೆ.

ಶಿವಣ್ಣನಿಗಾಗಿ ನಿರ್ದೇಶನ ಮಾಡುತ್ತಿರುವ ಸಿನಿಮಾಕ್ಕಾಗಿ “45” ಎಂದು ಶೀರ್ಷಿಕೆ ಇಡಲಾಗಿದೆ. ಇದೀಗ ಈ ಟೈಟಲ್ ಅನ್ನು ಸ್ವತಃ ಶಿವ್ ರಾಜ್ ಕುಮಾರ್ ಅವರೇ ಬಿಡುಗಡೆ ಮಾಡಿದ್ದಾರೆ. ಇನ್ನುಳಿದ ಭಾಷೆಗಳಲ್ಲಿ ಅಲ್ಲಿನ ಸ್ಟಾರ್ ನಂತರ ಕೈಯಲ್ಲಿ ಬಿಡುಗಡೆ ಮಾಡಿಸಲಾಗಿದೆ. ಇನ್ನು 45 ಎಂದಾಕ್ಷಣ ಇದರ ಅರ್ಥ ಏನು, ಈ ಸಿನಿಮಾ ಯಾವ ಕಥೆಯನ್ನು ಹೇಳುತ್ತದೆ, ಈ ಸಿನಿಮಾದ ಕಾನ್ಸೆಪ್ಟ್ ಏನು ಹೀಗೆ ಹತ್ತು ಹಲವಾರು ಪ್ರಶ್ನೆಗಳು ಅಭಿಮಾನಿಗಳ ಮನಸಲ್ಲಿ ಮೂಡೋದು ಸಹಜ. ಇದಕ್ಕೆ ಸಿನಿಮಾ ತಂಡವೇ ಉತ್ತರಿಸಬೇಕು.

ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ಮೂಡಿಬರಲಿದೆ. ತೆಲುಗಿನಲ್ಲಿ ಅಕ್ಕಿನೇನಿ ನಾಗಾರ್ಜುನ, ತಮಿಳಿನಲ್ಲಿ ಶಿವ ಕಾರ್ತಿಕೇಯನ್​, ಮಲಯಾಳಂನಲ್ಲಿ ಪೃಥ್ವಿರಾಜ್​ ಸುಕುಮಾರ್​ ಅವರು ‘45’ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದ್ದಾರೆ. ಅವರೆಲ್ಲರಿಗೂ ಶಿವಣ್ಣ ಸಾಮಾಜಿಕ ಜಾಲತಾಣದ ಮೂಲಕ ಧನ್ಯವಾದ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top