fbpx
ಸಮಾಚಾರ

ಮೀನಾಗೆ ಶಾಕ್ ಕೊಟ್ಟ ಗಂಡ: ನಯಾಪೈಸೆ ಕೂಡ ಪತ್ನಿ ಹೆಸರಲ್ಲಿ ಮಾಡಿಲ್ಲ! ಸಂಪೂರ್ಣ ಆಸ್ತಿ ಯಾರ ಪಾಲಾಗಿದೆ?

ನಟಿ ಮೀನಾ ಅವರ ಪತಿ ಇತ್ತೀಚಿಗೆ ಶ್ವಾಶಕೋಶ ಹಾಗು ಕೊರೊನದ ಕಾರಣದಿಂದ ಮೃತಪಟ್ಟಿದ್ದರು. ಇವರ ಸಾವಿನ ಸುತ್ತ ಹಲವಾರು ಅನುಮಾನಗಳು ಹುಟ್ಟಿಕೊಂಡಿದ್ದವು. ಇದೀಗ ಇದೆಲ್ಲದರ ಮದ್ಯೆ ಇವರ ಅಸ್ತಿ ವಿಚಾರವು ದೊಡ್ಡ ಸದ್ದು ಮಾಡುತ್ತಿದ್ದು, ಮೀನಾ ಪತಿ ಮೀನಾ ಹೆಸರಲ್ಲಿ ಒಂದು ರೂಪಾಯಿ ಅಸ್ತಿ ಕೂಡ ಬರೆದಿಲ್ಲ. ಹಾಗಾದರೆ ಇವರ ನೂರಾರು ಕೋಟಿ ಸಂಪೂರ್ಣ ಅಸ್ತಿ ಯಾರಪಾಲಾಗಿದೆ?

ಮೀನಾ ಅವರ ಪತಿ ವಿದ್ಯಾ ಸಾಗರ್ ಅವರು ಶ್ವಾಶಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಇವರಿಗೆ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾದರು. ಮೀನಾ ಮತ್ತು ವಿದ್ಯಾ ಸಾಗರ್ ಅವರು 2009 ರಲ್ಲಿ ಮದುವೆಯಾಗಿದ್ದು ಇವರಿಗೆ ನೈನಿಕಾ ಎಂಬ ಮುದ್ದಾದ ಮಗಳು ಇದ್ದಾಳೆ.

ವಿದ್ಯಾ ಸಾಗರ್ ಸಾವಿನ ಬಳಿಕ ಇವರ ಸಾವಿನ ಸುತ್ತ ಹಲವಾರು ಅನುಮಾನಗಳು ಹುಟ್ಟಿಕೊಂಡವು. ಅದರಲ್ಲೂ ವಿದ್ಯಾ ಸಾಗರ್ ಅವರ ಸಾವಿಗೆ ಅವರ ಪತ್ನಿ ಮೀನಾ ಅವರೇ ಕಾರಣ ಎಂದು ಹೇಳಲಾಗುತ್ತಿತ್ತು. ಏಕೆಂದರೆ ವಿದ್ಯಾಸಾಗರ್ ಬಳಿ 250 ಕೋಟಿ ಆಸ್ತಿ ಇದೆ, ಈ ಅಸ್ತಿ ಸಿಗಲಿಲ್ಲ ಎಂಬ ಕಾರಣಕ್ಕಾಗಿ ಮೀನಾ ಪತಿಯನ್ನು ಕೊಂದಿದ್ದಾರೆ. ಇದಲ್ಲದೇ ಕಳೆದ ಕೆಲ ದಿನಗಳಿಂದ ಆಸ್ತಿ ವಿಚಾರವಾಗಿ ಇವರಿಬ್ಬರ ನಡುವೆ ಜಗಳ ಆಗುತ್ತಿದೆ ಎಂಬ ವಿಚಾರ ಕೂಡ ವೈರಲ್ ಆಗುತ್ತಿತ್ತು.

ಆದರೆ ಇದೀಗ ಬಂದಿರುವ ಮಾಹಿತಿ ಪ್ರಕಾರ ವಿದ್ಯಾ ಸಾಗರ್ ತಮ್ಮ ಸಂಪೂರ್ಣ ಆಸ್ತಿಯನ್ನು ಇವರ ಮಗಳು ನೈನಿಕಾ ಅವರ ಹೆಸರಿಗೆ ಬರೆದಿದ್ದಾರೆ. ಆದರೆ ಕೆಲವರು ಮಾತ್ರ ಈ ವದಂತಿಯನ್ನು ತಳ್ಳಿಹಾಕಿದ್ದಾರೆ.

ವಿಲ್ ನಲ್ಲಿ ನೈನಿಕಾ ಚಿಕ್ಕವಳಾಗಿರುವುದರಿಂದ ನೈನಿಕಾ ವಯಸ್ಸಿಗೆ ಬರುವವರೆಗೂ ಇವರ ಪೋಷಕರು ಆಸ್ತಿಯನ್ನು ನೋಡಿಕೊಳ್ಳಬೇಕು ಎಂದು ಬರೆಯಲಾಗಿದೆ. ಆದರೆ ಇವೆಲ್ಲ ಸುದ್ದಿಗಳು ಎಳ್ಳು ಬಹಿರಂಗವಾಗಿ ಪ್ರಸ್ತಾಪಿಸಿಲ್ಲ. ಕೇವಲ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಹರಿದಾಡುತ್ತಿದೆ. ಹೀಗಾಗಿ ಇವೆಲ್ಲ ವಿಷಯಗಳು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಕಾದು ನೋಡಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top