fbpx
ಸಮಾಚಾರ

ತಾಯಿಯಾಗಲಿದ್ದಾರೆ ಕತ್ರಿನಾ ಕೈಫ್! ಹುಟ್ಟುಹಬ್ಬದಂದು ಈ ವಿಷಯ ರಿವೀಲ್ ಮಾಡ್ತಾರಾ?

ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಇದೀಗ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಕಳೆದ ವರ್ಷ ಹಸೆಮಣೆ ಏರಿದ ಇವರು ಇದೀಗ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ತಾವು ತಾಯಿಯಾಗುತ್ತಿರುವ ವಿಷಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಎಲ್ಲಾ ಕಡೆ ಹರಿದಾಡುತ್ತಿದೆ.

ನಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಕಳೆದ ಡಿಸೆಂಬರ್ 9 ರಂದು ಗುರು ಹಿರಿಯರ ಸಮ್ಮುಖದಲ್ಲಿ ಮದುವೆಯಾದರು. ಇದಾದ ನಂತರ ಕತ್ರಿನಾ ಕೈಫ್ ಯಾವುದೇ ಸಮಾರಂಭಗಳಲ್ಲಿ ಹೆಚ್ಚಾಗಿ ಕಂಡು ಬಂದಿರಲಿಲ್ಲ. ಇದೀಗ ತಾವು ತಾಯಿಯಾಗತ್ತಿರುವ ವಿಚಾರ ಬಿಟೌನ್ ಸುತ್ತ ಸಕತ್ ಸೌಂಡ್ ಮಾಡುತ್ತಿದೆ.

ಜುಲೈ 16 ರಂದು ಕತ್ರಿನಾ ಅವರ ಹುಟ್ಟು ಹಬ್ಬ ಇರುವ ಕಾರಣ ಈ ದಿನದಂದು ಈ ಸಂತೋಷದ ಸುದ್ದಿಯನ್ನು ಅವರು ಹಂಚಿಕೊಳ್ಳಲಿದ್ದಾರೆ ಎಂದು ಕತ್ರಿನಾ ಅವರ ಆಪ್ತ ಮೂಲಗಳಿಂದ ತಿಳಿದು ಬರುತ್ತಿದೆ. ಆದರೆ ಈ ಕುರಿತು ಕತ್ರಿನಾ ಅವರು ಎಲ್ಲೂ ಕೂಡ ಬಹಿರಂಗವಾಗಿ ಖಚಿತಪಡಿಸಿಲ್ಲ. ಹೀಗಾಗಿ ಇದು ನಿಜಾನೋ ಸುಳ್ಳೋ ಎಂಬುದನ್ನು ತಿಳಿಯಲು ಇವರ ಹುಟ್ಟು ಹಬ್ಬದ ದಿನ ಅಂದರೆ ಜುಲೈ 16 ವರೆಗೆ ಕಾಯಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top