fbpx
ಸಮಾಚಾರ

ರೋಹಿತ್ ಸಿಡಿಸಿದ ಸಿಕ್ಸ್, ನೇರವಾಗಿ ಪ್ರೇಕ್ಷಕ ತಲೆಗೆ ಬಡಿದ ಚೆಂಡು! ವಿಡಿಯೋ ವೈರಲ್

ರೋಹಿತ್ ಶರ್ಮ ಆಗಮನದಿಂದ ಟೀಮ್ ಇಂಡಿಯಾ ಗೆ ಬಲಬಂದಂತಿದೆ. ದಿ ಓವಲ್ ಕ್ರೀಡಾಂಗಣದಲ್ಲಿ ಮಂಗಳವಾರ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದ ಟೀಮ್ ಇಂಡಿಯಾ 10 ವಿಕೆಟ್ ಗಳ ಗೆಲವನ್ನು ಸಾಧಿಸಿತು. ಈ ಗೆಲುವಿಗೆ ಬೌಲಿಂಗ್ ವಿಭಾಗದಲ್ಲಿ ಬುಮ್ರಾ ಮಿಂಚಿದರೆ, ಬ್ಯಾಟಿಂಗ್ ವಿಭಾಗದಲ್ಲಿ ನಾಯಕನಾಗಿ ರೋಹಿತ್ ಮಿಂಚಿದರು. ಈ ಪಂದ್ಯದಲ್ಲಿ ರೋಹಿತ್ ಸಿಡಿಸಿದ ಒಂದು ಸಿಕ್ಸ್ ಪ್ರೇಕ್ಷಕನ ತಲೆಗೆ ಬಿದ್ದು ಪಂದ್ಯಕ್ಕೆ ಕೆಲ ಸಮಯ ಅಡಚಣೆ ಆಯಿತು.

 

 

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ ಬುಮ್ರಾ ಅವರ ಮಾರಕ ದಾಳಿಯಿಂದ 110 ರನ್ ಗಳಿಗೆ ಸರ್ವಪತನ ಕಂಡಿತ್ತು. ಈ ಸುಲಭ ಗೆಲವನ್ನು ಬೆನ್ನಟ್ಟಿದ್ದ ಟೀಮ್ ಇಂಡಿಯಾ ಕೇವಲ 18 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 114 ರನ್ ಗಳಿಸಿ ಗೆಲುವನ್ನು ಸಂಭ್ರಮಿಸಿತು. ಈ ಗೆಲುವಲ್ಲಿ ನಾಯಕ ರೋಹಿತ್ ಶರ್ಮಾ ಮಹತ್ವದ ಪಾತ್ರ ವಹಿಸಿದ್ದರು. ಕೇವಲ 58 ಎಸೆತಗಳಲ್ಲಿ ಅಜೇಯ 76 ರನ್‌ ಸಿಡಿಸಿದರು. ಇದರಲ್ಲಿ 6 ಫೋರ್‌ ಮತ್ತು ಬರೋಬ್ಬರಿ 5 ಸಿಕ್ಸರ್‌ಗಳು ಸಿಡಿದವು. ಇವರು ಸಿಡಿಸಿದ್ದ ಒಂದು ಸಿಕ್ಸ್ ಗ್ಯಾಲರಿ ಯಲ್ಲಿದ್ದ ಪ್ರೇಕ್ಷಣ ತಲೆಗೆ ಬಡಿದು ಕೆಲವು ಸಮಯ ಪಂದ್ಯಕ್ಕೆ ಅಡಚಣೆ ಆಗಿತ್ತು.

ಇಂಗ್ಲೆಂಡ್ ನ ವೇಗಿಯಾದ ಡೇವಿಡ್‌ ವಿಲ್ಲೀ ಬೌಲಿಂಗ್ ನಲ್ಲಿ ಪುಲ್ ಶಾರ್ಟ್ ಹೊಡೆದ ರೋಹಿತ್ ಸ್ಕ್ವೇರ್‌ ಲೆಗ್‌ ಕಡೆಗಿದ್ದ ಪ್ರೇಕ್ಷಕರ ಗ್ಯಾಲರಿ ಕಡೆಗೆ ಹೋಗಿತ್ತು. ಪಂದ್ಯ ವೀಕ್ಷಿಸುತ್ತಿದ್ದ ಮಹಿಳೆಯ ತಲೆಗೆ ಚೆಂಡು ಬಡಿಯಿತು ಎಂದು ವರದಿಗಾರರು ತಿಳಿಸುತ್ತಿದ್ದರು.

ಟ್ವೀಟ್ ಮೂಲಕ ಶೇರ್ ಮಾಡಿರುವ ವಿಡಿಯೋದಲ್ಲಿ “ರೋಹಿತ್ ಸಿಡಿಸಿದ ಸಿಕ್ಸರ್‌ನಿಂದ ಪ್ರೇಕ್ಷಕರ ಗ್ಯಾಲರಿಯಲ್ಲಿ ಯಾರಿಗೋ ಪೆಟ್ಟಾದಂತೆ ಕಾಣಿಸುತ್ತಿದೆ. ಹೆಚ್ಚೇನು ಪೆಟ್ಟಾಗಿಲ್ಲ ಎಂದಷ್ಟೇ ಆಶಿಸೋಣ. ರೋಹಿತ್ ಕೂಡ ಆಕಡೆಗೇ ನೋಡುತ್ತಿದ್ದಾರೆ. ಯಾರಿಗೋ ಪೆಟ್ಟಾಗಿದೆ ಎಂಬ ಸಂದೇಶ ಅವರಿಗೂ ಸಿಕ್ಕಂತೆ ಕಾಣಿಸುತ್ತಿದೆ,” ಎಂದು ಕಾಮೆಂಟರಿ ಮಾಡುತ್ತಿರುವುದು ನಾವು ಗಮನಿಸಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top