fbpx
ಸಮಾಚಾರ

ಐಎಂಡಿಬಿ ಇಂದ ಬಿಡುಗಡೆಯಾಯ್ತು ಟಾಪ್ 10 ಸಿನಿಮಾಗಳ ಪಟ್ಟಿ! ರಾಕಿ ಭಾಯ್ ಕೆಜಿಎಫ್ ಸಿನಿಮಾ ಯಾವ ಸ್ಥಾನದಲ್ಲಿ ಇದೆ ಗೊತ್ತಾ?

ಕನ್ನಡ ಚಿತ್ರರಂಗವನ್ನು ಪ್ರಪಂಚಾದ್ಯಂತ ಜನರು ತಿರುಗಿ ನೋಡುವಂತೆ ಮಾಡಿದ್ದೂ ನಮ್ಮ ಹೆಮ್ಮೆಯ ರಾಕಿ ಭಾಯ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ. ಈ ಸಿನಿಮಾ ಒಟ್ಟು 1200 ಕೋಟಿ ಹಣ ಗಳಿಸಿತ್ತು. ಐಎಂಡಿಬಿ ಬಿಡುಗಡೆಗೊಳಿಸಿರುವ ಟಾಪ್ 10 ಸಿನಿಮಾಗಳಲ್ಲಿ ಕೆಜಿಎಫ್ ಚಾಪ್ಟರ್-2 ಸಿನಿಮಾ ಸ್ಥಾನ ಪಡೆದುಕೊಂಡಿದೆ. ಇದಾದರೂ ಸಹ ಕೆಜಿಎಫ್ no.1 ಸ್ಥಾನವನ್ನು ಅಲಂಕರಿಸಲು ವಿಫಲವಾಗಿದೆ.

 

 

2022ರಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ ಸಿನಿಮಾಗಳ ಪಟ್ಟಿಯನ್ನು ಐಎಂಡಿಬಿ ಬಿಡುಗಡೆ ಬಿಡುಗಡೆಮಾಡಿದ್ದು ಇದರಲ್ಲಿ ಕಮಲ್ ಹಾಸನ್ ಅಭಿನಯದ ವಿಕ್ರಮ್​’ (8.8) ಮೊದಲ ಸ್ಥಾನದಲ್ಲಿದ್ದರೆ, ‘ಕೆಜಿಎಫ್ 2’ (8.5) ಎರಡನೇ ಸ್ಥಾನದಲ್ಲಿದ್ದು ಮೂರನೇ ಸ್ಥಾನದಲ್ಲಿ ‘ದಿ ಕಾಶ್ಮೀರ್ ಫೈಲ್ಸ್​’ (8.3), ನಾಲ್ಕನೇ ಸ್ಥಾನದಲ್ಲಿ ಮಲಯಾಳಂನ ‘ಹೃದಯಂ’ (8.1), ಐದನೇ ಸ್ಥಾನದಲ್ಲಿ ‘ಆರ್​ಆರ್​ಆರ್​’ ಚಿತ್ರ (8.0) ಇದೆ.

ಕೇವಲ ಸಿನಿಮಾಗಳಿಗೆ ಮಾತ್ರವಲ್ಲದೆ ವೆಬ್ ಸೀರೀಸ್ ಗು ರೇಟಿಂಗ್ ನೀಡಲಾಗಿದ್ದು ‘ಕ್ಯಾಂಪಸ್ ಡೈರೀಸ್​’ (9.0) ಮೊದಲ ಸ್ಥಾನದಲ್ಲಿದ್ದರೆ ‘ರಾಕೆಟ್ ಬಾಯ್ಸ್’ (8.9) ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ‘ಪಂಚಾಯತ್ 2’ (8.9) ನಾಲ್ಕನೇ ಸ್ಥಾನದಲ್ಲಿ ‘ಅಪಹರಣ್​’ (8.4) ಹಾಗೂ ಐದನೇ ಸ್ಥಾನದಲ್ಲಿ ‘ಹ್ಯೂಮನ್​’ (8.0) ಸಿನಿಮಾಗಳಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top