fbpx
ಸಮಾಚಾರ

ಈ ಬಾರಿಯ ಕನ್ನಡದ ಬಿಗ್ ಬಾಸ್ ನಲ್ಲಿ ಯಾರೆಲ್ಲಇರಲಿದ್ದಾರೆ? ಸದ್ದಿಲ್ಲದೇ ಶುರುವಾಗುತ್ತಿದೆ ಚರ್ಚೆ

ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಷೋ ಎಂದರೆ ಅದು ಬಿಗ್ ಬಾಸ್. ಸತತ 8 ಸೀಸನ್ ಗಳನ್ನು ಮುಗಿಸಿರುವ ಟೀಮ್ ಇದೀಗ 9 ನೇ ಸೀಸನ್ ಗಾಗಿ ತಯಾರಿ ನಡೆಸಿಕೊಳ್ಳುತ್ತಿದೆ. ಹೀಗಾಗಲೇ ಇದರ ಪ್ರೊಮೊ ಶೂಟ್ ಕೂಡ ಮುಗಿದಿದ್ದು, ವಿಭಿನ್ನ ಗೆಟಪ್ ನಲ್ಲಿ ಕಿಚ್ಚ ಕಂಗೊಳಿಸುತ್ತಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಜನರು ಬಿಗ್ ಬಾಸ್ ಮನೆಗೆ ಯಾರೆಲ್ಲ ಹೋಗಬಹುದು ಎಂಬ ಲೆಕ್ಕಾಚಾರವನ್ನು ಹಾಕಿಕೊಳ್ಳುತ್ತಿದ್ದಾರೆ.

 

 

ಬಿಗ್ ಬಾಸ್ ಸೀಸನ್ 9 ಶುರುವಾಗಲು ಕ್ಷಣಗಣನೆ ಆರಂಭವಾಗಿದೆ. ಇದೀಗ ಜನರು ಯಾರೆಲ್ಲ ಬಿಗ್ ಬಾಸ್ ಮನೆ ಪ್ರವೇಶಿಸಬಹುದು ಎಂಬ ಲೆಕ್ಕಾಚಾರಗಳನ್ನು ಹಾಕುತ್ತಿದ್ದು, ಕೆಲವು ಸಲಹೆಗಳನ್ನು ಸಹ ನೀಡುತ್ತಿದ್ದಾರೆ.

ಬಿಗ್ ಬಾಸ್ ಕಾರ್ಯಕ್ರಮವನ್ನು ನಾವು ಗಮನಿಸಿದರೆ ಪ್ರತಿ ಬಾರಿಯೂ ಸಿನಿಮಾ ಮತ್ತು ಸೀರಿಯಲ್ ಗಳಲ್ಲಿ ಹೆಚ್ಚು ಜನಪ್ರಿಯ ಗಳಿಸಿರುವ ಸೆಲಬ್ರಿಟಿಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಅದರಲ್ಲೂ ಹೆಚ್ಚು ವಿವಾದವನ್ನು ತಮ್ಮ ಎಳೆದುಕೊಂಡಿರುವ ವ್ಯಕ್ತಿಗಳನ್ನೇ ಬಿಗ್ ಬಾಸ್ ಹುಡುಕಿ ತಮ್ಮ ಕಾರ್ಯಕ್ರಮಕ್ಕೆ ತರುತ್ತಾರೆ. ಈ ಬಾರಿಯೂ ಕೂಡ ಅದೇ ಪ್ರಯತ್ನ ನಡೆಯುತ್ತಿದೆ.

ಕಳೆದ ಕೆಲವು ಸೀಸನ್ ಗಳಲ್ಲಿ ಸೆಲೆಬ್ರಿಟಿ ಗಳಲ್ಲದೆ ಜನ ಸಾಮಾನ್ಯರಿಗೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರಸಿದ್ಧಿ ಗಳಿಸಿದ ವ್ಯಕ್ತಿಯನ್ನು ಆಯ್ಕೆ ಮಾಡಲಾಗಿತ್ತು. ಈ ಬಾರಿಯೂ ಕೂಡ ಸಾಮಾನ್ಯ ಜನರಿಗೆ ಅವಕಾಶ ನೀಡಬೇಕೆಂದು ಕಮೆಂಟ್​ಗಳ ಮೂಲಕ ನೆಟ್ಟಿಗರು ತಮ್ಮ ಹಂಬಲ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಈ ಬಾರಿಯ ಬಿಗ್ ಬಾಸ್ ಗೆ ಯಾರೆಲ್ಲ ಬರಲಿದ್ದಾರೆ ಎಂಬುದನ್ನು ಕಾದು ನೋಡಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top