fbpx
ಸಮಾಚಾರ

ಟ್ವಿಟ್ಟರ್ ಸಂಸ್ಥೆ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕುತ್ತಿರುವ ಅಪ್ಪು ಫ್ಯಾನ್ಸ್! ಕಾರಣವೇನು ಗೊತ್ತಾ?

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಅಗಲಿ ತಿಂಗಳುಗಳೇ ಕಳೆದರು ಅವರ ನೆನಪು ಮಾತ್ರ ಅಭಿಮಾನಿಗಳ ಮನಸಲ್ಲಿ ಅಚ್ಚೆಯಾಗಿ ಉಳಿದಿದೆ. ಈಗಲೂ ಅಪ್ಪು ಹೆಸರಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯುತ್ತಿದೆ. ಇವೆಲ್ಲದರ ಬೆನ್ನಲ್ಲೇ ಇದೀಗ ಅಪ್ಪು ಅಭಿಮಾನಿಗಳು ಟ್ವಿಟ್ಟರ್ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ

ಹಲವಾರು ಸೆಲಬ್ರಿಟಿ ಗಳು ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುತ್ತಾರೆ. ಅದರಲ್ಲೂ ಪ್ರತಿಯೊಬ್ಬ ಸೆಲೆಬ್ರಿಟಿ ಕೂಡ ಟ್ವಿಟ್ಟರ್ ಬಳಸುತ್ತಾರೆ. ಈಗಾಗಿ ಸೆಲೆಬ್ರಿಟಿ ಹೆಸರಲ್ಲಿ ಜನರು ನಕಲು ಖಾತೆ ತೆರೆಯಬಹುದು ಎಂಬ ಕಾರಣಕ್ಕಾಗಿ ಇವರ ಹೆಸರು ಪಕ್ಕ ಬ್ಲೂ ಟಿಕ್ ಇರುತ್ತದೆ. ಆದರೆ ಇದೀಗ ಪುನೀತ್ ರಾಜ್ ಕುಮಾರ್ ಅವರ ಹೆಸರಿನ ಪಕ್ಕ ಇರುವ ಈ ಬ್ಲೂ ಟಿಕ್ ಅನ್ನು ತೆಗೆದುಹಾಕಿದ್ದು, ಟ್ವಿಟ್ಟರ್ ಸಂಸ್ಥೆ ವಿರುದ್ಧ ಅಪ್ಪು ಅಭಿಮಾನಿಗಳು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

 

 

ನೀಲಿ ಟಿಕ್ ತೆಗೆಯಲು ಕಾರಣವಿದೆ?
ಅಪ್ಪು ನಮ್ಮನೆಲ್ಲ ಅಗಲಿ ಸುಮಾರು 9 ತಿಂಗಳು ಕಳೆದವು. ಅಂದರೆ ಸುಮಾರು 9 ತಿಂಗಳಿಂದ ಅಪ್ಪು ಟ್ವಿಟ್ಟರ್ ಖಾತೆಯನ್ನು ಯಾರು ಬಳಸುತ್ತಿಲ್ಲ. ಹೀಗಾಗಿ ಸುಮಾರು 8 ತಿಂಗಳಿಂದ ಟ್ವಿಟ್ಟರ್ ಖಾತೆಯನ್ನು ಬಳಸಿಲ್ಲ ಎಂಬ ಕಾರಣದಿಂದ ಇದರಲ್ಲಿರುವ ನೀಲಿ ಟಿಕ್ ಅನ್ನು ತೆಗೆದು ಹಾಕಲಾಗಿದೆ.

ಆದರೆ ವಿಪರ್ಯಾಸವೆಂದರೆ ಸಿದ್ಧಾರ್ಥ್ ಶುಕ್ಲಾ ಅವರ ಟ್ವಿಟರ್ ಖಾತೆಯ ನೀಲಿ ಟಿಕ್ ಇನ್ನೂ ಹಾಗೆ ಇದೆ. ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಖಾತೆಯ ನೀಲಿ ಟಿಕ್ ಅನ್ನು ತೆಗೆದಿರುವ ಕಾರಣ ಇದೀಗ ಅಪ್ಪು ಅಭಿಮಾನಿಗಳು ಟ್ವಿಟ್ಟರ್ ಸಂಸ್ಥೆ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top