fbpx
ಸಮಾಚಾರ

ಗೋಲ್ಗಪ್ಪಾ ಪ್ರಿಯರೆ ಎಚ್ಚರ! ಪಾನಿ ರುಚಿಯಾಗಿಸಲು ಟಾಯ್ಲೆಟ್ ಕ್ಲಿನರ್ ಬಳಕೆ- ವಿಡಿಯೋ ವೈರಲ್

ಗೋಲ್ಗಪ್ಪಾ, ಈ ಹೆಸರು ಕೇಳಿದರೆ ಬಾಯಲ್ಲಿ ನೀರು ಸುರಿಯುತ್ತದೆ. ಅದರಲ್ಲೂ ಹೆಚ್ಚಾಗಿ ಹೆಣ್ಣುಮಕ್ಕಳಿಗೆ ಗೋಲ್ಗಪ್ಪಾ ಎಂದರೆ ಪಂಚಪ್ರಾಣ. ಆದರೆ ಇನ್ಮುಂದೆ ಗೋಲ್ಗಪ್ಪಾ ತಿನ್ನುವ ಮುಂಚೆ ಎಚ್ಚರ. ಏಕೆಂದರೆ ನೀವು ತಿನ್ನುವ ರುಚಿಯಾದ ಪಾನಿಗೆ ಯಾವ ನೀರನ್ನು ಬಳಸುತ್ತಾರೆ ಗೊತ್ತಾ? ಇಲ್ಲಿದೆ ಇದರ ಕುರಿತು ಒಂದು ವಿಡಿಯೋ.

 

 

ನಾವು ಹಲವು ಬಾರಿ ಪಾನಿಪುರಿ ತಯಾರಿಕೆಯಲ್ಲಿ ಯಾವೆಲ್ಲ ಕೆಟ್ಟ, ಕೊಳಕು ನೀರುಗಳನ್ನು ಬಳಸುತ್ತಾರೆಂದು ನೋಡಿದ್ದೇವೆ. ಆದರೆ ಇಲ್ಲಿ ಪಾನೀಪುರಿಗೆ ಹಾಕುವ ಪಾನಿಗೆ ಟಾಯ್ಲೆಟ್ ಕ್ಲಿನರ್ ಬಳಸಲಾಗಿದ್ದು, ಇದೀಗ ಈ ವಿಡಿಯೋ ಎಲ್ಲಾ ಕಡೆ ಸಕತ್ ವೈರಲ್ ಆಗುತ್ತಿದೆ.

 

 

ಈ ವಿಡಿಯೋವನ್ನು ಗಮನಿಸಿದರೆ ಇದರಲ್ಲಿ ಒಬ್ಬ ವ್ಯಕ್ತಿ ಮುಖಕ್ಕೆ ಟವೆಲ್ ಸುಟ್ಟಿಕೊಂಡಿದ್ದು, ಪಾನಿಯನ್ನು ತಯಾರಿಸುತ್ತಿರುತ್ತಾನೆ. ಇದೇ ಸಂಧರ್ಭದಲ್ಲಿ ಇದಕ್ಕೆ ಹಾರ್ಪಿಕ್ ಟಾಯ್ಲೆಟ್ ಕ್ಲಿನರ್ ಅನ್ನು ಗೋಲ್ಗಪ್ಪಾ ನೀರಿಗೆ ಬೆರೆಸುತ್ತಾನೆ. ಇದೇ ಸಂಧರ್ಭದಲ್ಲಿ ಮರೆಯಲ್ಲಿ ನಿಂತು ವಿಡಿಯೋ ಮಾಡುತ್ತಿದ್ದ ವ್ಯಕ್ತಿ ದಾಳಿ ಮಾಡಿ ಪ್ರಶ್ನಿಸುತ್ತಾನೆ. ಆದರೆ ಗೋಲ್ಗಪ್ಪಾ ಸಿದ್ದ ಪಡಿಸುತ್ತಿರುವ ವ್ಯಕ್ತಿ ಇದನ್ನು ಸಮರ್ಥಿಸಲು ಮುಂದಾಗುತ್ತಿರುವುದನ್ನು ನಾವು ವಿಡಿಯೋ ದಲ್ಲಿ ಗಮನಿಸಬಹುದು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.

ಆದರೆ, AFWAಯ ಫ್ಯಾಕ್ಟ್ ಚೆಕ್ ಪ್ರಕಾರ, ಈ ವೀಡಿಯೊವನ್ನು ಜಾಗೃತಿ ಮೂಡಿಸುವ ಸಲುವಾಗಿ ಪ್ರದರ್ಶಿಸಲಾಗಿದೆ ಎಂದು ಕಂಡುಬಂದಿದೆ. ಇದನ್ನು ಗ್ಯಾನ್ ಭಂಡಾರ್ ಎಂಬ ಫೇಸ್‌ಬುಕ್ ಖಾತೆಯು ರಚಿಸಿದ್ದು, ಈ ವೀಡಿಯೊವನ್ನು ಜಾಗೃತಿ ಮೂಡಿಸಲು ಮಾಡಲಾಗಿದೆ ಎಂದು ಹಕ್ಕು ನಿರಾಕರಣೆ ಹೊರಡಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top