fbpx
ಸಮಾಚಾರ

2ನೇ ಬಾರಿಗೆ ತಂದೆಯಾದ ರಾಬಿನ್ ಉತ್ತಪ್ಪ: ಮುದ್ದಾದ ಮಗುವಿಗೆ ವಿಶೇಷ ಹೆಸರು

ಕೊಡಗಿನ ಕುವರ, ಕ್ರಿಕೆಟಿಗ ರಾಬಿನ್ ಉತ್ತಪ್ಪ ಮತ್ತು ಅವರ ಪತ್ನಿ ಶೀತಲ್ ಎರಡನೇ ಬಾರಿಗೆ ತಂದೆ ತಾಯಿ ಆದ ಖುಷಿಯಲ್ಲಿದ್ದಾರೆ. ರಾಬಿನ್ ಉತ್ತಪ್ಪ ಅವರ ಪತ್ನಿ ಶೀತಲ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಕ್ರಿಕೆಟಿಗ ತಮ್ಮ ಪುಟ್ಟ ಕಂದಮ್ಮನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.

“ನಮ್ಮ ಹೃದಯ ತುಂಬಿದೆ ಹಾಗೂ ನಮ್ಮ ಜೀವನದಲ್ಲಿನ ನೂತನ ದೇವತೆಯನ್ನು(ಹೆಣ್ಣು ಮಗು) ಪರಿಚಯಿಸುವುದನ್ನು ನಾವು ಇಷ್ಟಪಡುತ್ತೇವೆ. ಟ್ರಿನಿಟಿ ಥಿಯೇ ಉತ್ತಪ್ಪ ಅವರನ್ನು ಪರಿಚಯಿಸುತ್ತಿದ್ದೇವೆ. ಜಗತ್ತಿಗೆ ಆಗಮಿಸಲು ನಮ್ಮನ್ನು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ನಾವು ಕೃತಜ್ಞರಾಗಿದ್ದೇವೆ ಮತ್ತು ನಿನ್ನ ಸಹೋರ ಹಾಗೂ ಪೋಷಕರಾಗಿ ನಾವು ಆರ್ಶಿವರ್ದಿಸಿದ್ದೇವೆ,” ಎಂದು ರಾಬಿನ್‌ ಉತ್ತಪ್ಪ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

 

 

View this post on Instagram

 

A post shared by ROBIN UTHAPPA (@robinaiyudauthappa)

 

2017ರಲ್ಲಿಯೇ ರಾಬಿನ್‌ ಉತ್ತಪ್ಪ ಹಾಗೂ ಶೀತಲ್ ದಂಪತಿಗೆ ಗಂಡು ಮಗು ಜನಿಸಿತ್ತು. ಆಗ ಅವರು ತಮ್ಮ ಗಂಡು ಮಗುವಿಗೆ ನೀಲ್‌ ನೋಲನ್ ಉತ್ತಪ್ಪ ಎಂಬ ನಾಮಕರಣ ಮಾಡಿದ್ದರು. ಇದೀಗ ತಮ್ಮ ಕುಟುಂಬಕ್ಕೆ ಆಗಮಿಸಿರುವ ಹೆಣ್ಣು ಮಗುವಿಗೆ ಟ್ರಿನಿಟಿ ಥಿಯೇ ಉತ್ತಪ್ಪ ಎಂದು ಹೆಸರಿಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top