fbpx
ಸಮಾಚಾರ

16 ಜುಲೈ: ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ

ಜುಲೈ 16, 2022 ಶನಿವಾರ
ವರ್ಷ : 1944, ಶೋಭಾಕೃತ
ತಿಂಗಳು : ಆಷಾಢ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ತೃತೀಯಾ : Jul 15 04:39 pm – Jul 16 01:27 pm; ಚತುರ್ಥೀ : Jul 16 01:27 pm – Jul 17 10:49 am
ನಕ್ಷತ್ರ : ಧನಿಷ್ಠ: Jul 15 05:31 pm – Jul 16 03:10 pm; ಶತಭಿಷ: Jul 16 03:10 pm – Jul 17 01:25 pm
ಯೋಗ : ಆಯುಷ್ಮಾನ್: Jul 16 12:21 am – Jul 16 08:49 pm; ಸೌಭಾಗ್ಯ: Jul 16 08:49 pm – Jul 17 05:49 pm
ಕರಣ : ವಿಷ್ಟಿ: Jul 16 02:59 am – Jul 16 01:27 pm; ಬಾವ: Jul 16 01:27 pm – Jul 17 12:03 am; ಬಾಲವ: Jul 17 12:03 am – Jul 17 10:49 am

Time to be Avoided
ರಾಹುಕಾಲ : 9:15 AM to 10:50 AM
ಯಮಗಂಡ : 2:00 PM to 3:36 PM
ದುರ್ಮುಹುರ್ತ : 07:46 AM to 08:37 AM
ವಿಷ : 09:51 PM to 11:20 PM
ಗುಳಿಕ : 6:05 AM to 7:40 AM

Good Time to be Used
ಅಮೃತಕಾಲ : None
ಅಭಿಜಿತ್ : 12:00 PM to 12:50 PM

Other Data
ಸೂರ್ಯೋದಯ : 6:05 AM
ಸುರ್ಯಾಸ್ತಮಯ : 6:46 PM

 

ಮೇಷ (Mesha)


ಸಾಂಸಾರಿಕವಾಗಿ ಅನಾವಶ್ಯಕ ಭಿನ್ನಾಭಿಪ್ರಾಯಕ್ಕೆ ಕಾರಣವಾದೀತು. ಹಳೇ ಮಿತ್ರರ ಭೇಟಿ ಹರುಷ ತರಲಿದೆ. ದೇವತಾ ಕಾರ್ಯ ಸಾಮಾಜಿಕ ಕಾರ್ಯದಲ್ಲಿ ಮುನ್ನಡೆ ಇದೆ. ಆರೋಗ್ಯದ ಬಗ್ಗೆ ಗಮನಹರಿಸಿರಿ.

ವೃಷಭ (Vrushabh)


ಗುರುವಿನ ದೈವಾನುಗ್ರಹದಿಂದ ಸಾಂಸಾರಿಕವಾಗಿ ಕಾರ್ಯಗಳು ನಿರ್ವಿಘ್ನ ವಾಗಿ ನೆರವೇರಲಿವೆ. ನಿರುದ್ಯೋಗಿಗಳ ಅಲ್ಪ ಪ್ರಯತ್ನ ಬಲವು ತಾತ್ಕಾಲಿಕ ಉದ್ಯೋಗ ಲಾಭಕ್ಕೆ ಅನುಕೂಲವಾಗಲಿದೆ. ದಿನಾಂತ್ಯ ಶುಭವಿದೆ.

ಮಿಥುನ (Mithuna)


ಸರಕಾರೀ ಕೆಲಸಗಳು, ಅಧಿಕಾರಿ ವರ್ಗದವರಿಗೆ ಅನುಕೂಲವಾಗಲಿವೆ. ವ್ಯಾಪಾರ, ವ್ಯವಹಾರಗಳು ಲಾಭಕರ ವಾದರೂ ಹೆ‌ಚ್ಚಿನ ಹೂಡಿಕೆ ಉತ್ತಮವಲ್ಲ. ಹೆ‌ಚ್ಚಿನ ಸಂಚಾರ ಅವಘಡಕ್ಕೆ ಕಾರಣವಾಗಬಹುದು.

ಕರ್ಕ (Karka)


ವಿದ್ಯಾರ್ಥಿಗಳ ಅಭ್ಯಾಸದಲ್ಲಿ ಚೇತರಿಕೆ ತರಲಿದೆ. ಸಾಮಾಜಿಕ ರಂಗದಲ್ಲಿ ಮಾನ್ಯತೆಯು ಲಭಿಸಲಿದೆ. ದೂರ ಸಂಚಾರ ದೇಹಾಯಾಸಕ್ಕೆ ಕಾರಣವಾದೀತು. ಪ್ರವಾಸಾದಿಗಳು ಶ್ರಮ ತರಲಿವೆ. ಶೆೈಕ್ಷಣಿಕ ವೃತ್ತಿಯವರಿಗೆ ಆರ್ಥಿಕ ಏರುಪೇರು.

ಸಿಂಹ (Simha)


ಕಾರ್ಯಸಾಧನೆಯಲ್ಲಿ ವಿಳಂಬ. ಮಾನಸಿಕ ತುಮುಲ ಹೆಚ್ಚಲಿದೆ. ಉದ್ಯೋಗವನ್ನರಸುವವರಿಗೆ ನಿರೀಕ್ಷಿತ ಉದ್ಯೋಗ ಸಿಗದು. ಅಪೆ¤àಷ್ಟರಲ್ಲಿ ಮಂಗಲ ಕಾರ್ಯದ ಸಂಭ್ರಮವಿದೆ. ಕೋರ್ಟು ವಿವಾದದಲ್ಲಿ ಹಿನ್ನಡೆ.

ಕನ್ಯಾರಾಶಿ (Kanya)


ಕನಸು ಕಾಣುವ ನೀವು ಸದ್ಯ ಮಾನಸಿಕ ಅಸ್ಥಿರತೆಯಿಂದ ಬಳಲಬೇಕಾಗುತ್ತದೆ. ಧನಾದಾಯ ಉತ್ತಮವಿದ್ದರೂ ಚಿಂತೆ ಕಾಡದೆ ಬಿಡದು. ಒಮ್ಮೊಮ್ಮೆ ದುಡುಕು ವರ್ತನೆ ಪಶ್ಚಾತ್ತಾ ಪಪಡುವಂತಾಗಲಿದೆ.

ತುಲಾ (Tula)


ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ. ಖಾಸಗಿ ಕೆಲಸಗಾರರಿಗೆ ವೇತನದಲ್ಲಿ ಬಡ್ತಿ ದೊರೆಯಲಿದೆ. ತಾಂತ್ರಿಕ ವೃತ್ತಿಯವರಿಗೆ ಕೈತುಂಬಾ ಕೆಲಸ. ಆಗಾಗ ಮನೆಯಲ್ಲಿ ರಿಪೇರಿ ಖರ್ಚುಗಳು ಕಂಡುಬರಲಿವೆ

ವೃಶ್ಚಿಕ (Vrushchika)


ನವ ವಿವಾಹಿತರಿಗೆ ಮಧುಚಂದ್ರ ಭಾಗ್ಯವಿದೆ. ದೇಹಾರೋಗ್ಯ ಆಗಾಗ ಏರುಪೇರಾದೀತು. ಗಾಯದಿಂದ ಕಿರಿಕಿರಿ ತಂದೀತು. ಪದೇ ಪದೇ ಸಂಚಾರದ ಸಾಧ್ಯತೆ. ದಿನಾಂತ್ಯ ಅತಿಥಿಗಳು ಬಂದಾರು.

ಧನು ರಾಶಿ (Dhanu)


ಮದುವೆಯ ಮಾತುಕತೆ ಯಶಸ್ವಿಯಾಗಲಿದೆ. ಪ್ರಯಾಣ ಆದಷ್ಟು ಕಡಿಮೆ ಇರಲಿ. ದೇವತಾ ಕಾರ್ಯಗಳಿಗಾಗಿ ಧನವ್ಯಯ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದ ಹುಚ್ಚು ಹಿಡಿದೀತು. ಬಂಧುಗಳ ಸಹಾಯವಿದೆ.

ಮಕರ (Makara)


ಸಂತಾನ ಭಾಗ್ಯದಲ್ಲಿ ತೊಡಕು. ಸ್ತ್ರೀ ವಿಷಯದ ಬಗ್ಗೆ ಚಿಂತೆ ಹತ್ತೀತು. ಕಾರ್ಯಕ್ಷೇತ್ರದಲ್ಲಿ ಶತ್ರುಗಳಿಗೆ ಅಸೂಯೆ ತಂದೀತು. ಸಾಂಸಾರಿಕವಾಗಿ ಶಾಂತಿ, ಸಮಾಧಾನದಿಂದ ವರ್ತಿಸಿರಿ. ಆರ್ಥಿಕವಾಗಿ ಖರ್ಚುವೆಚ್ಚಗಳಿವೆ.

ಕುಂಭರಾಶಿ (Kumbha)


ಕೇತು, ರಾಹು, ಗುರು ಮನಸ್ಸನ್ನು ಕಾರ್ಯನಿರ್ವಹಿಸದಂತೆ ತಡೆದಾರು. ವಿವೇಚನೆಯಿಂದ ಕಾರ್ಯಸಾಧಿಸ ಬೇಕಾಗುತ್ತದೆ. ಆಫೀಸಿನ ಕೆಲಸದ ಒತ್ತಡ ಸುಖ ನೆಮ್ಮದಿ ಹಾಳುಗೈಯಲಿದೆ.

ಮೀನರಾಶಿ (Meena)


ಧನ ಹಾನಿಯಿಂದ ಬೇಸರವಾದೀತು. ಮಹಿಳೆಯರಿಗೆ ಮನೆಯಲ್ಲಿ ಋಣಾತ್ಮಕ ಚಿಂತೆಯೂ ಬಾಧಿಸಲಿದೆ. ಕುಟುಂಬಿಕವಾಗಿ ಯಾರನ್ನೂ ನಂಬದಂತಹ ಪರಿಸ್ಥಿತಿಯೂ ಬಂದೀತು. ಜಾಗ ಖರೀದಿ ತಪ್ಪಿ ಹೋದೀತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top