fbpx
ಸಮಾಚಾರ

ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದಾರಾ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್? ಬಾಲಿವುಡ್ ಅಂಗಳದ ಸುತ್ತಾ ಬರೀ ಇದೇ ಚರ್ಚೆ

ಬಾಲಿವುಡ್ ಜೋಡಿಯಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮುಂಬೈ ನ ತಮ್ಮ ಮನೆಯಲ್ಲಿ ಏಪ್ರಿಲ್ 14 ರಂದು ವಿವಾಹರಾದರು. ಆದರೆ ಈ ಜೋಡಿ ಜೂನ್ ತಿಂಗಳಲ್ಲಿ ತಮ್ಮ ಅಭಿಮಾನಿಗಳಿಗೆ ಒಂದು ಅಚ್ಚರಿಯ ವಿಷಯವನ್ನು ನೀಡಿದ್ದು, ಅದೇನೆಂದರು ತಾವು ತಮ್ಮ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ತಿಳಿಸಿದರು. ಅಂದಿನಿಂದ ಒಂದಲ್ಲ ಒಂದು ವಿಷಯದಲ್ಲಿ ಈ ಜೋಡಿ ಸುದ್ದಿಯಾಗುತ್ತಲೇ ಇತ್ತು. ಆದರೆ ಇದೀಗ ರಣಬೀರ್ ಮತ್ತು ಆಲಿಯಾ ಅವರು ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದಾರೆ ಎಂದು ಸುಳಿವು ನೀಡಿದರು, ಇದು ಎಲ್ಲರನ್ನು ಗೊಂದಲಕ್ಕೆ ನೂಕಿದೆ.

ರಣಬೀರ್ ಕಪೂರ್ ಅವರು ತಮ್ಮ ಮುಂಬರುವ ಚಲನಚಿತ್ರ ಶಂಶೇರಾವನ್ನು ಪ್ರಚಾರ ಮಾಡುವ ಸಂದರ್ಶನಗಳಲ್ಲಿ ಪಿತೃತ್ವದ ಬಗ್ಗೆ ಬಹಿರಂಗವಾಗಿ ಚರ್ಚಿಸುತ್ತಿದ್ದಾರೆ. ಫಿಲ್ಮ್ ಕಂಪ್ಯಾನಿಯನ್‌ಗೆ ನೀಡಿದ ಸಂದರ್ಶನದಲ್ಲಿ, ರಣಬೀರ್‌ಗೆ ಎರಡು ಸತ್ಯ ಮತ್ತು ಒಂದು ಸುಳ್ಳನ್ನು ಹೇಳಲು ಕೇಳಲಾಗಿತ್ತು. ಆಗ ರಣ್ಬೀರ್ ಕಪೂರ್ “ನಾನು ಅವಳಿ ಮಕ್ಕಳಿಗೆ ತಂದೆಯಾಗಲಿದ್ದೇನೆ ಮತ್ತು ನಾನು ಬಹಳ ದೊಡ್ಡ ಪೌರಾಣಿಕ ಚಿತ್ರದ ಭಾಗವಾಗಲಿದ್ದೇನೆ. ನಾನು ಕೆಲಸದಿಂದ ದೀರ್ಘ ವಿರಾಮ ತೆಗೆದುಕೊಳ್ಳುತ್ತೇನೆ.” ಎಂದು ಹೇಳಿದರು.

ಇದೀಗ ಈ ಎರಡು ವಿಚಾರದಲ್ಲಿ ಸತ್ಯ ಯಾವುದು ಸುಳ್ಳು ಯಾವುದು ಎಂಬುದನ್ನು ನಿರ್ಧರಿಸಲು ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ. ಇದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಕೂಡ ಆಗುತ್ತಿದೆ. ರಣಬೀರ್ ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿರುವುದರಿಂದ ದೊಡ್ಡ ವಿರಾಮ ತೆಗೆದುಕೊಳ್ಳೋದು ಸುಳ್ಳು. ಹೀಗಾಗಿ ಅವರು ಅವಳಿ ಮಕ್ಕಳಿಗೆ ತಂದೆಯಾಗುತ್ತಿರುವುದು ನಿಜ ಎಂಬುದು ಅಭಿಮಾನಿಗಳ ನಂಬಿಕೆ. ಇದಕೆಲ್ಲ ಉತ್ತರ ಕಾದು ನೋಡಬೇಕು ಅಷ್ಟೇ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top