fbpx
ಸಮಾಚಾರ

ಖ್ಯಾತ ಗಾಯಕ ಭೂಪಿಂದರ್ ಸಿಂಗ್ ನಿಧನ

ಖ್ಯಾತ ಗಾಯಕ ಭೂಪಿಂದರ್ ಸಿಂಗ್ ಅವರು ನಿನ್ನೆ (ಜುಲೈ 18) ರಾತ್ರಿ 7.45ಕ್ಕೆ ನಿಧನ ಹೊಂದಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.ಭೂಪಿಂದರ್ ಸಿಂಗ್​ ಅವರನ್ನು ಮುಂಬೈನ ಅಂಧೇರಿಯಲ್ಲಿರುವ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರಿಗೆ ಕರುಳಿನ ಇನ್​ಫೆಕ್ಷನ್ ಆಗಿತ್ತು. ಈಗ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ. ೩

ಹತ್ತು ದಿನಗಳ ಹಿಂದೆ ಭೂಪಿಂದರ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಮಿಥಾಲಿ ಮುಖರ್ಜಿ ಹೇಳಿದ್ದಾರೆ. ಅವರ ಮೂತ್ರದಲ್ಲಿ ಸೋಂಕಿನ ಕಾರಣ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಹಲವಾರು ಪರೀಕ್ಷೆಗಳ ನಂತರ, ಅವರು ಕೋವಿಡ್ ಪಾಸಿಟಿವ್ ಬಂದಿದೆ. ಚಿಕಿತ್ಸೆ ಪಡೆಯುತ್ತಿರುವಾಗಲೇ ಭೂಪಿಂದರ್ ಸಿಂಗ್ ಮುಂಬೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಪತ್ನಿ ಹಾಗೂ ಮಗನನ್ನು ಅಗಲಿರುವ ಭೂಪಿಂದರ್ ಸಿಂಗ್ ಅವರು ಮೂಲತಃ ಪಂಜಾಬ್‍ನ ಅಮೃತಸಾರದವರಾಗಿದ್ದು, ಆಲ್ ಇಂಡಿಯಾ ರೇಡಿಯೋ ಮೂಲಕ ವೃತ್ತಿ ಜೀವನ ಆರಂಭಿಸಿದರು. ನಾಮ್ ಗಮ್ ಜಾಯೆಗಾ.., ಹೋತಾ ಪೆ ಐಸಿ ಬಾತ್.., ಕಭಿ ಕಿಸಿ ಕೋ ಮುಕಮ್ಮಲ್ ಜಹಾ ನಹಿ ಮಿಲ್ತಾ.. ಸೇರಿ ಇನ್ನೂ ಹಲವು ಸೂಪರ್ ಹಿಟ್ ಗೀತೆಗಳು ಭೂಪಿಂದರ್ ಸಿಂಗ್ ಅವರ ಕಂಠದಲ್ಲಿ ಮೂಡಿ ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top