fbpx
ಸಮಾಚಾರ

ಖ್ಯಾತ ನಿರ್ದೇಶಕ ಮಣಿರತ್ನಂ ಆಸ್ಪತ್ರೆಗೆ ದಾಖಲು

ಭಾರತೀಯ ಚಿತ್ರರಂಗದ ಖ್ಯಾತ ಮಣಿರತ್ನಂ ಅವರು ಚೆನ್ನೈ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕೊರೊನಾ ಸೋಂಕಿನ ಲಕ್ಷಣ ಪತ್ತೆಯಾದ ಹಿನ್ನೆಲೆ ಖ್ಯಾತ ನಿರ್ದೇಶಕ ಮಣಿರತ್ನಂ (66) ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಣಿರತ್ನಂ ಅವರ ಆರೋಗ್ಯದ ಸ್ಥಿತಿ ಬಗ್ಗೆ ಇನ್ನಷ್ಟು ಮಾಹಿತಿ ಹೊರಬೀಳಬೇಕಿದೆ. ನಟಿ ಸುಹಾಸಿನಿ ಅವರು ಪತಿ ಮಣಿರತ್ನಂ ಆರೋಗ್ಯದ ಬಗ್ಗೆ ವಿಷಯ ತಿಳಿಸಬೇಕಿದೆ.

ಮೂಲಗಳ ಪ್ರಕಾರ ಮಣಿರತ್ನಂ ಅವರ ಆರೋಗ್ಯ ಈಗ ಸ್ಥಿರವಾಗಿದೆ. ಯಾವುದೇ ಬೇರೆ ರೋಗ ಲಕ್ಷಣಗಳು ಇಲ್ಲ ಎಂದು ವರದಿ ಆಗಿದೆ. ಆಸ್ಪತ್ರೆ ಕಡೆಯಿಂದ ಅಥವಾ ಕುಟುಂಬದವರಿಂದ ಹೆಲ್ತ್​ ಅಪ್​ಡೇಟ್​ ಸಿಗಲಿ ಎಂದು ಆಭಿಮಾನಿಗಳು ಕಾಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಣಿರತ್ನಂ ಅವರ ಸಂಪರ್ಕಕ್ಕೆ ಬಂದ ಎಲ್ಲರೂ ಕೊವಿಡ್​ ಪರೀಕ್ಷೆ ಮಾಡಿಸಿಕೊಳ್ಳಬೇಕಾಗಿದೆ.

ಮಣಿ ರತ್ನಂ ಅವರ ಮನೆಯಲ್ಲಿ ಅವರ 90 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಪೋಷಕರಿರುವ ಕಾರಣದಿಂದ ಅವರ ಆರೋಗ್ಯ ಸುರಕ್ಷತೆಯ ಕಾರಣದಿಂದ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ರತ್ನಂ ಅವರ ಬಹು ನಿರೀಕ್ಷಿತ ಸಿನಿಮಾ ಪೊನ್ನಿಯಿನ್ ಸೆಲ್ವನ್: ಭಾಗ I ರ ಟೀಸರ್ ಬಿಡುಗಡೆಗೆ ಆಗಿ 10 ದಿನಗಳ ನಂತರ ಈ ವಿಚಾರ ಹೊರ ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top