fbpx
ಸಮಾಚಾರ

ನೆನ್ನೆ ಕೆ.ಎಂ.ಎಫ್ ನಿಂದ ಏರಿಕೆಯಾಗಿದ್ದ ನಂದಿನಿ ಉತ್ಪನ್ನಗಳ ಬೆಲೆ ಇಂದು ಕೊಂಚ ಇಳಿಕೆ! ನೂತನ ಬೆಲೆ ಜಾರಿ ಮಾಡಿದ ಕೆ.ಎಂ.ಎಫ್

ನಂದಿನಿ ಹಾಲಿನ ಉತ್ಪನ್ನಗಳ ಬೆಲೆಯಲ್ಲಿ ನೆನ್ನೆ ಬರಿ ಏರಿಕೆ ಮಾಡಿದ್ದ ಕೆ.ಎಂ.ಎಫ್ ಸಂಸ್ಥೆ ಇದೀಗ ಉತ್ಪನ್ನಗಳ ಬೆಲೆಯನ್ನು ಕೊಂಚ ಕಡಿಮೆಮಾಡಿದೆ. ಬೆಲೆ ಏರಿಕೆಯಿಂದ ಹಲವ್ವರು ಕಡೆ ಜನರು ತಮ್ಮ ಆಕ್ರೋಶವನ್ನು ಹೊರಹಾಕಿದ್ದರು/ ಇದರಿಂದ ಜನರಿಗೆ ಯಾವುದೇ ಸಮಸ್ಯೆ ಆಗಬಾರದೆಂದು ಕೆ.ಎಂ.ಎಫ್ ಸಂಸ್ಥೆ ಇದೀಗ ಬೆಳ್ಯಾನ್ನು ಕಡಿಮೆ ಗೊಳಿಸಿ ನೂತನ ಬೆಲೆ ಪರಿಷ್ಕರಣೆ ಮಾಡಲಾಗಿದೆ.

5% GST ಸೇರಿಸಿ ನೆನ್ನೆ ಕೆ.ಎಂ.ಎಫ್ ಸಂಸ್ಥೆ ಮೂರೂ ಉತ್ಪನ್ನಗಳ (ಮೊಸರು, ಮಜ್ಜಿಗೆ ಮತ್ತು ಲಸ್ಸಿ) ಬೆಲೆಯನ್ನು ಹೆಚ್ಚಿಸಿತ್ತು. ಆದರೆ ಇದೀಗ 5% GST ಸೇರಿಸಿ ಇದರ ಬೆಲೆಯನ್ನು ಮತ್ತಷ್ಟು ಕಡಿಮೆಗೊಳಿಸಿದೆ. ಕೆ.ಎಂ.ಎಫ್ ಬಿಡುಗಡೆ ಮಾಡಿರುವ ನೂತನ ಬೆಲೆ ವಿವರ ಹೀಗಿದೆ.

 

 

ಮೊಸರು 200 ಎಂಎಲ್:
ಹಿಂದೆ ಇದ್ದ ದರ 10 ರೂಪಾಯಿ, ನೆನ್ನೆ ದರ 12 ರೂಪಾಯಿ, ಇಂದಿನ ದರ 10.50 ಪೈಸೆ

ಮೊಸರು 500 ಎಂಎಲ್:
ಹಿಂದೆ ಇದ್ದ ದರ 22 ರೂಪಾಯಿ, ನೆನ್ನೆ ದರ 24 ರೂಪಾಯಿ, ಇಂದಿನ ದರ 23 ರುಪಾಯಿ

ಒಂದು ಲೀಟರ್ ಮೊಸರು:
ಹಿಂದೆ ಇದ್ದ ದರ 7 ರೂಪಾಯಿ, ನೆನ್ನೆ ದರ 8 ರೂಪಾಯಿ, ಇಂದಿನ ದರ 7.50 ಪೈಸೆ

ಲಸ್ಸಿ 200 ಎಂಎಲ್:
ಹಿಂದೆ ಇದ್ದ ದರ10 ರುಪಾಯಿ, ನೆನ್ನೆ ದರ 11 ರುಪಾಯಿ, ಇಂದಿನ ದರ 10.50 ಪೈಸೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top