fbpx
ಸಮಾಚಾರ

ತನಗಿಂತ 16 ವರ್ಷ ಚಿಕ್ಕವಳೊಂದಿಗೆ ಹೃತಿಕ್ ರೋಷನ್ 2ನೇ ಮದುವೆ!

ಸೂಪರ್ ಸ್ಟಾರ್ ಹೃತಿಕ್ ರೋಷನ್ ಈಗ ಸಿನಿಮಾಗಿಂತ ಸಬಾ ಆಜಾದ್ ಜತೆಗಿನ ಲವ್ವಿ ಡವ್ವಿ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಹೃತಿಕ್ ತಮ್ಮ ಡಿವೋರ್ಸ್ ನಂತರ ಸಬಾ ಜತೆ ಏಂಗೇಜ್ ಆಗಿದ್ದಾರೆ. ಈ ಸ್ಟಾರ್ ಜೋಡಿಯ ಮದುವೆ ಕುರಿತು ಅಸಲಿ ವಿಚಾರವೊಂದು ಹೊರಬಿದ್ದಿದೆ.

ಹೌದು, ಹೃತಿಕ್ ಮತ್ತು ಸಬಾ ಇಬ್ಬರು ಸದ್ಯದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡುವ ಬಗ್ಗೆ ಯೋಚಿಸುತ್ತಿದ್ದಾರೆ. ಶೀಘ್ರದಲ್ಲೇ ಈ ಸ್ಟಾರ್ ಲವ್ ಬರ್ಡ್ ಹಸೆಮಣೆ ಏರಲಿದೆ ಎನ್ನುವ ಮಾತುಬಾಲಿವುಡ್ ನಲ್ಲಿ ಕೇಳಿಬರುತ್ತಿದೆ. ಈ ಬಗ್ಗೆ ಹಿೃತಿಕ್ ಆಪ್ತರು ಆಂಗ್ಲ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

ಸದ್ಯ ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಅವರು ಸಂತೋಷದ ಸಂಬಂಧ ಹೊಂದಿದ್ದಾರೆ. ಅವರು ಸಾಕಷ್ಟು ಸಮಯವನ್ನು ಒಟ್ಟಿಗೆ ಕಳೆಯುತ್ತಾರೆ ಮತ್ತು ರಜಾ ದಿನಗಳನ್ನು ಒಟ್ಟಿಗೆ ಕಳಯುತ್ತಿದ್ದಾರೆ. ಇಬ್ಬರು ಹೆಚ್ಚಾಗಿ ಒಟ್ಟಿಗೆ ಸಮಯ ಕಳೆಯುತ್ತಿರುವುದರಿಂದ ಸದ್ಯದಲ್ಲೇ ಮದುವೆಯಾಗುವ ಬಗ್ಗೆ ಪ್ಲಾನ್ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

ಕರಣ್ ಜೋಹರ್ ಅವರ ಬರ್ತ್‌ಡೇ ಪಾರ್ಟಿಯಲ್ಲಂತೂ ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಕೈ-ಕೈ ಹಿಡಿದುಕೊಂಡು ಬಂದಿದ್ದರು. ಇದನ್ನೆಲ್ಲಾ ನೋಡಿದವರು ಇಬ್ಬರ ಮಧ್ಯೆ ಪ್ರೀತಿ ಚಿಗುರಿದೆ ಅಂತಲೇ ಭಾವಿಸಿದ್ದಾರೆ. ಸಾಲದಕ್ಕೆ ಹೃತಿಕ್ ರೋಷನ್ ಕುಟುಂಬಸ್ಥರಿಗೂ ಸಬಾ ಆಜಾದ್ ಕ್ಲೋಸ್ ಆಗಿದ್ದಾರೆ. ಹೀಗಾಗಿ, ಇಬ್ಬರು ಮದುವೆಯಾಗಲಿದ್ದಾರಂತೆ ಎಂಬ ಅಂತೆ-ಕಂತೆಯೂ ಬಾಲಿವುಡ್ ಗಲ್ಲಿಗಲ್ಲಿಗಳಲ್ಲಿ ಕೇಳಿಬರುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top