fbpx
ಸಮಾಚಾರ

‘ಮೈನಾ’ ಸುಂದರಿಗೆ ಕಂಕಣ ಭಾಗ್ಯ: ಸ್ಟಾರ್​ ಹೀರೋ ಜತೆ ನಿತ್ಯ ಮೆನನ್ ಮದುವೆ

ಮುದ್ದು ಮುಖದ ಚೆಲುವೆ ನಿತ್ಯಾ ಮೆನನ್ ಸದ್ಯ ಸಿನಿಮಾಗಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಮಲಯಾಳಂ, ತಮಿಳಿನಲ್ಲಿಯೇ ಹೆಚ್ಚೆಚ್ಚು ಸಿನಿಮಾಗಳನ್ನು ಮಾಡುತ್ತಿರುವ 34 ವರ್ಷದ ಈ ನಟಿ ಈಗ ಮಲಯಾಳಂನ ಸ್ಟಾರ್ ಹೀರೋನ ಕೈ ಹಿಡಿಯಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಹೌದು, ನಿತ್ಯಾ ಮೆನನ್ ಚಿತ್ರರಂಗದ ವ್ಯಕ್ತಿಯನ್ನು ಮದುವೆಯಾಗಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಮಲಯಾಳಂನಲ್ಲಿ ಸ್ಟಾರ್ ನಟನಾಗಿ ಮುಂದುವರಿದಿರುವ ವ್ಯಕ್ತಿಯನ್ನು ಮದುವೆಯಾಗಲಿದ್ದಾರಂತೆ. ಸಿನಿಮಾರಂಗಕ್ಕೆ ಬರುವ ಮುನ್ನವೇ ಇವರ ಸಂಪರ್ಕಕ್ಕೆ ಬಂದಿದ್ದರು ಎನ್ನಲಾಗಿದೆ.. ಆ ಸಂಪರ್ಕ ಸ್ನೇಹಕ್ಕೆ ತಿರುಗಿತ್ತು ಆದರೆ ಆ ಗೆಳೆತನ ಪ್ರೀತಿಗೆ ಕಾರಣವಾಗಿ ಕೆಲ ವರ್ಷಗಳ ಕಾಲ ಇಬ್ಬರು ಪ್ರೀತಿಸುತ್ತಿದ್ದರು. ಇದೀಗ ನಿತ್ಯಾ ಅವರನ್ನು ಮದುವೆಯಾಗಲು ನಿರ್ಧರಿಸಿದ್ದಾರಂತೆ. ಈ ಕುರಿತು ನಿತ್ಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಅಂದಹಾಗೆ ಹಲವು ಸಿನಿಮಾಗಳಲ್ಲಿ ನಿತ್ಯಾ ಮೆನನ್​ ಬ್ಯುಸಿ ಆಗಿದ್ದಾರೆ. ಅವರು ನಟಿಸಿರುವ ‘19(1)(ಎ)’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರ ಥಿಯೇಟರ್​ನಲ್ಲಿ ತೆರೆಕಾಣುವ ಬದಲು ನೇರವಾಗಿ ಒಟಿಟಿ ಮೂಲಕ ರಿಲೀಸ್​ ಆಗಲಿದೆ. ಈ ಸಿನಿಮಾದಲ್ಲಿ ವಿಜಯ್​ ಸೇತುಪತಿ ಕೂಡ ಅಭಿನಯಿಸಿದ್ದಾರೆ. ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​ ಮೂಲಕ ಈ ಚಿತ್ರ ಪ್ರಸಾರ ಆಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top