ಸ್ಯಾಂಡಲ್ವುಡ್ ನ ಮೋಸ್ಟ ಎಕ್ಸ್ಪೆಕ್ಟೆಡ್ ಸಿನಿಮಾ ಎಂದರೆ ಅದು ಕೆಜಿಎಫ್. ಭಾರತ ಮತ್ತು ಕನ್ನಡ ಸಿನಿಮಾವನ್ನು ಪ್ರಪಂಚಾದ್ಯಂತ ಜನರು ದೊಡ್ಡ ಮಟ್ಟಕ್ಕೆ ಗುರುತಿಸುವಂತೆ ಮಾಡಿದ್ದೂ ಇದೇ ಕೆಜಿಎಫ್ ಸಿನಿಮಾ. ಇದೀಗ ಕೆಜಿಎಫ್ ಚಾಪ್ಟರ್-2 ಸಿನಿಮಾ 100 ದಿನಗಳನ್ನು ಪೂರೈಸಿದ್ದು, ಹೊಂಬಾಳೆ ಸಿನಿಮಾ ಸಂಸ್ಥೆ ಅಭಿಮಾನಿಗಳಿಗೆ ಟ್ವೀಟ್ ಮೂಲಕ ಧನ್ಯವಾದ ತಿಳಿಸಿದರು.
ಏಪ್ರಿಲ್ 14 ರಂದು ಕೆಜಿಎಫ್ ಚಾಪ್ಟರ್-2 ಸಿನಿಮಾ ಬಿಡುಗಡೆಯಾಗಿತ್ತು. ಬಿಡುಗಡೆ ಮುಂಚೆಯೇ ಸಾಕಷ್ಟು ಕ್ರೇಜ್ ಹುಟ್ಟಿಸಿದ ಸಿನಿಮಾ ಬಿಡುಗಡೆ ನಂತರ ಬಾಕ್ಸ್ ಆಫೀಸ್ ಅನ್ನು ಚಿಂದಿ ಉಡಾಯ್ಸಿತು. ಕನ್ನಡ, ಹಿಂದಿ, ತೆಲುಗು, ತಮಿಳ್ ,ಮಲ್ಯಾಳಮ್ ಭಾಷೆಗಳಲ್ಲಿ ಸುಮಾರು 1250 ಕೋಟಿಗಳಷ್ಟು ಸಿನಿಮಾ ಗಳಿಸಿತು. ಕೇವಲ ಹಿಂದಿ ಭಾಷೆಯಲ್ಲಿ ಈ ಸಿನಿಮಾ 434 ಕೋಟಿ ರೂಪಾಯಿ ಗಳಿಸಿತು.
Thank You for scripting and stitching this amazing journey for us. We can still feel the jubilation & reverberation all around us. We promise to keep you enthralled with our next #Monster hit and of our home run!#KGF2 #100MonsterDaysOfKGF2#HombaleFilms pic.twitter.com/WDfHTG7fR6
— Hombale Films (@hombalefilms) July 22, 2022
ಇಷ್ಟೆಲ್ಲಾ ಕ್ರೇಜ್ ಹುಟ್ಟಿಸಿದ ಸಿನಿಮಾ ಇದೀಗ ಯಶಸ್ವಿ 100 ದಿನಗಳನ್ನು ಪೂರೈಸಿದ್ದು, ಶರ ವೇಗದಲ್ಲಿ ಸಾಗುತ್ತಿದೆ. ಇಂತಹ ಸಂಧರ್ಭದಲ್ಲಿ ಸಿನಿಮಾದ ಸಕ್ಸಸ್ ಗಾಗಿ ಕಾರಣರಾದ ಅಭಿಮಾನಿಗಳಿಗೆ ಟ್ವೀಟ್ ಮೂಲಕ ಹೊಂಬಾಳೆ ಸಿನಿಮಾ ತಂಡ ಧನ್ಯವಾದವನ್ನು ತಿಳಿಸಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
