fbpx
ಸಮಾಚಾರ

ಸರ್ಜಾ ಕುಟುಂಬಕ್ಕೆ ಮತ್ತೊಂದು ಆಘಾತ! ಅರ್ಜುನ್ ಸರ್ಜಾ ಅವರ ತಾಯಿ ಲಕ್ಷ್ಮೀದೇವಿ ನಿಧನ

ಸರ್ಜಾ ಕುಟುಂಬಕ್ಕೆ ಒಂದಾದರಮೇಲೊಂದು ಆಘಾತ ಎದುರಾಗುತ್ತಿದೆ. ಚಿರು ಅಗಲಿಕೆಯ ನೋವಿನಿಂದ ಹೊರ ಬರಕ್ಕಾಗದೆ ಇದ್ದ ಕುಟುಂಬಕ್ಕೆ ಇದೀಗ ಮತ್ತೊಂದು ಶಾಕ್ ಆಗಿದೆ. ನಟ ಅರ್ಜುನ್ ಸರ್ಜಾ ಅವರ ತಾಯಿ ಲಕ್ಷ್ಮೀದೇವಿ (84) ಇಂದು ನಿಧನರಾದರು.

ಲಕ್ಷ್ಮಿದೇವಿ ಖ್ಯಾತ ಹಿರಿಯ ನಟ ಶಕ್ತಿ ಪ್ರಸಾದ್ ಅವರ ಪತ್ನಿ. ಇವರು ಅರ್ಜುನ್ ಸರ್ಜಾ ಅವರ ತಾಯಿಯಾಗಿದ್ದು, ಧ್ರುವ ಸರ್ಜಾ ಅವರಿಗೆ ಅಜ್ಜಿಯಾಗಬೇಕು. ಕಳೆದ ಕೆಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಇವರನ್ನು ಅಪೊಲೊ ಆಸ್ಪತ್ರೆಗೆ ಸೇರಿಸಿ ಸುಮಾರು 22 ದಿನಗಳ ಕಾಲ ಐಸಿಯು ನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಇಂದು ಮದ್ಯಾಹ್ನ ಸುಮಾರು 12 ಗಂಟೆಗೆ ಇವರು ನಿಧನರಾದರು.

ತಾಯಿಯ ಅನಾರೋಗ್ಯದ ಹಿನ್ನಲ್ಲೇ ಅರ್ಜುನ್ ಸರ್ಜಾ ಬೆಂಗಳೂರಿನಲ್ಲೇ ಇದ್ದರು. ಧ್ರುವ ಸರ್ಜಾ ಮಾರ್ಟಿನ್ ಸಿನಿಮಾದ ಚಿತ್ರೀಕರಣಕ್ಕಾಗಿ ಹೈದೆರಾಬಾದ್ ಗೆ ತೆರಳಿದರು. ಆದರೆ ಇದೀಗ ಅವರು ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಾರೆ ಎಂಬ ಮಾಹಿತಿ ಇದೆ. ಚಿರು ಅಗಲಿಕೆಯ ನೋವಿಂದ ಕಂಗೆಟ್ಟಿದ್ದ ಕುಟುಂಬಕ್ಕೆ ಲಕ್ಷ್ಮೀದೇವಿ ಅವರ ಸಾವು ಇವರ ನೋವನ್ನು ಮತ್ತಷ್ಟು ಹೆಚ್ಚು ಮಾಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top