fbpx
ಸಮಾಚಾರ

ದೇವರ ಜೊತೆ ದೇವರಾದ ನಮ್ಮ ಅಪ್ಪು! ಗಣೇಶನ ಮೂರ್ತಿಯಲ್ಲಿ ಅಪ್ಪುವನ್ನು ಕಂಡು ಸಂತಸಗೊಂಡ ಅಭಿಮಾನಿಗಳು

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮನ್ನು ಅಗಲಿ ತಿಂಗಳುಗಳೇ ಕಳೆದರು ಅವರ ನೆನಪು ಮಾತ್ರ ಅಭಿಮಾನಿಗಳ ಮನಸಲ್ಲಿ ಆಚೆಯಾಗಿ ಉಳಿದಿದೆ. ಇಂದಿಗೂ ಅಪ್ಪು ಅವರ ಹೆಸರಲ್ಲಿ ಪ್ರತಿನಿತ್ಯ ಒಳ್ಳೆಯ ಕಾರ್ಯಕ್ರಮಗಳು ನಡೆಯುತ್ತಿದೆ. ಪ್ರತಿಯೊಬ್ಬರೂ ಅಪ್ಪುವಿಗೆ ದೇವರ ಸ್ಥಾನವನ್ನು ನೀಡಿದ್ದಾರೆ. ಇದೀಗ ಅಪ್ಪುವನ್ನು ಗಣೇಶನ ಜೊತೆ ನೋಡುವ ಭಾಗ್ಯ ಅಭಿಮಾನಿಗಳಿಗೆ ದೊರೆಯುವ ಸಾಧ್ಯತೆಯಿದೆ.

ಮುಂದಿನ ತಿಂಗಳು ಗಣೇಶ ಗೌರಿ ಹಬ್ಬ ಶುರುವಾಗಲಿದೆ. ಈಗಿಂದಲೇ ಗಣೇಶನ ಪ್ರತಿಮೆ ಮಾಡುವುದರಲ್ಲಿ ಜನ ಬ್ಯುಸಿ ಯಾಗಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಹಲವು ವಿಧವಿಧವಾದ ಗಣೇಶನ ಪ್ರತಿಮೆಯನ್ನು ತಯಾರಿಸಲುತ್ತಿದೆ. ಆದರೆ ಇದೀಗ ಜನರ ಕಣ್ಣಿಗೆ ಗೋಚರಿಸಿದ್ದು ಮಾತ್ರ ಗಣೇಶನ ಜೊತೆ ಇರುವ ನಮ್ಮ ಅಪ್ಪು.

ಹೌದು, ಅಪ್ಪು ಅಗಲಿದ ನಂತರ ಅಭಿಮಾನಿಗಳು ಅವರನ್ನು ದೇವರ ರೂಪದಲ್ಲಿ ಪೂಜಿಸುತ್ತಿದ್ದರು. ಇದೀಗ ಅಭಿಮಾನಿಗಳ ಆರಾಧ್ಯ ದೈವವನ್ನು ಗಣೇಶನ ಜೊತೆ ನೋಡುವ ಭಾಗ್ಯ ಅಭಿಮಾನಿಗಳಿಗೆ ದೊರಕಿದೆ. ಅಪ್ಪುವಿನ ಜೊತೆ ಇರುವ ಗಣೇಶನ ಮೂರ್ತಿ ಇದೀಗ ಎಲ್ಲಾ ಕಡೆ ರಾರಾಜಿಸುತ್ತಿದ್ದು, ಅಪ್ಪುವನ್ನು ಕಂಡ ಅಭಿಮಾನಿಗಳ ಮನಸ್ಸು ಸಂತಸದಿಂದ ಕೂಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top