fbpx
ಸಮಾಚಾರ

ಶಿವಣ್ಣನನ್ನು ಹಿಂದಿಕ್ಕಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಜನರನ್ನು ಆಕರ್ಷಿಸಿದ ಶಿವಣ್ಣನ ಅಭಿಮಾನಿ ಕಾಫೀ ನಾಡು ಚಂದು!

ಪ್ರತಿಯೊಬ್ಬರ ಜೀವನದಲ್ಲಿ ಹುಟ್ಟು ಹಬ್ಬ ಎಂಬುದು ಬಹಳ ವಿಶೇಷವಾದ ದಿನ. ನಾವು ನಮ್ಮ ಹುಟ್ಟುಹಬ್ಬಕಾಗಿ ಹಲವಾರು ಸಿನಿಮಾಗಳ ಹುಟ್ಟುಹಬ್ಬ ಹಾಡುಗಳನ್ನು ಹಾಡಿ ಆಚರಿಸುತ್ತೇವೆ. ಆದರೆ ಇದಕ್ಕೆಲ್ಲ ಮಿಗಿಲಾಗಿ ಇದೀಗ ಸಕತ್ ಫೇಮಸ್ ಆಗಿರುವುದು ಎಂದರೆ ಕಾಫೀ ನಾಡು ಚಂದ್ರು ಅವರ ಹ್ಯಾಪಿ ಬರ್ತಡೇ ಸಾಂಗ್. ಇದೀಗ ಇವರು ಎಷ್ಟು ಫೇಮಸ್ ಆಗಿದ್ದಾರೆ ಎಂದರೆ ತಮ್ಮ ನೆಚ್ಚಿನ ನಟ ಶಿವ್ ರಾಜ್ ಕುಮಾರ್ ಅವರನ್ನು ಹಿಂದಿಕ್ಕಿ ಇವರಿಗಿಂತ ಹೆಚ್ಚಿನ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

 

 

 

 

ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಟ್ರೆಂಡ್ ಆಗುತ್ತಿರುವುದು ಎಂದರೆ ಅದು ಕಾಫೀ ನಾಡು ಚಂದ್ರು ಅವರ ಹ್ಯಾಪಿ ಬರ್ತಡೇ ಸಾಂಗ್. ಇವರು ಪ್ರತಿ ಬಾರಿ ಹಾಡನ್ನು ಶುರು ಮಾಡುವ ಮೊದಲು ನಾನು ಪುನೀತ್ ಅಣ್ಣ ಮತ್ತು ಶಿವಣ್ಣ ಅವರ ಅಭಿಮಾನಿ ಎಂದು ಹೇಳಿ ಶುರುಮಾಡುತ್ತಾರೆ. ಆದರೆ ಇದೀಗ ಇವರು ಶಿವಣ್ಣ ಅವರನ್ನು ಮೀರಿಸಿ ಇನ್ಸ್ಟಾಗ್ರಾಮ್ ಅಲ್ಲಿ ಹೆಚ್ಚಿನ ಫಾಲೋವರ್ಸ್ ಸಂಪಾದಿಸಿದ್ದಾರೆ.

ಇವರ ಜನಪ್ರಿಯತೆ ಎಷ್ಟರಮಟ್ಟಿಗೆ ಇದೆ ಎಂದರೆ ಇದೀಗ ಪ್ರತಿಯೊಬ್ಬರ ಹುಟ್ಟು ಹಬ್ಬದಂದು ಕಾಫೀ ನಾಡು ಚಂದ್ರು ಅವರ ಹಾಡನ್ನೇ ಜನರು ಬಳಸುತ್ತಾರೆ. ಇದಲ್ಲದೆ ಕೆಲವು ಜನರ ಇವರ ತರ ಹಾಡನ್ನು ಹಾಡುವ ಪ್ರಯತ್ನವನ್ನು ಸಹ ಮಾಡಿದ್ದಾರೆ. ಶಿವರಾಜ್‌ಕುಮಾರ್‌ಗೆ 2 ಲಕ್ಷದ 5 ಸಾವಿರ ಫಾಲೋವರ್ಸ್ ಇದ್ರೆ, ಕಾಫಿನಾಡು ಚಂದು 2 ಲಕ್ಷದ 28 ಸಾವಿರ ಫಾಲೋವರ್ಸ್ ಇದ್ದು ತಮ್ಮ ನೆಚ್ಚಿನ ನಟ ಹ್ಯಾಟ್ರಿಕ್ ಹೀರೋ ಶಿವ್ ರಾಜ್ ಕುಮಾರ್ ಅವರನ್ನು ಹಿಂದಿಕ್ಕಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top