fbpx
ಸಮಾಚಾರ

ವಿಕ್ರಾಂತ್ ರೋಣ ಸಿನಿಮಾದ ರಿಲೀಸ್ ಗೆ ಕ್ಷಣಗಣನೆ ಶುರು! ವಿದೇಶದಲ್ಲಿ 1200 ಕ್ಕೂ ಅಧಿಕ ಪರದೆಗಳಲ್ಲಿ ಅಬ್ಬರಿಸಲು ರೆಡಿಯಾದ ಕಿಚ್ಚ

ಗಾಂಧಿನಗರದ ಮಂದಿ ಅಲ್ಲದೆ ಇಡೀ ವಿಶ್ವದಲ್ಲಿ ಜನರು ಕಾಯುತ್ತಿರುವ ಸಿನಿಮಾವೆಂದರೆ ಅದು ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಪಾನ್ ಇಂಡಿಯಾ ಸಿನಿಮಾ “ವಿಕ್ರಾಂತ್ ರೋಣ”. ಈಗಾಗಲೇ ಟ್ರೈಲರ್ ಮತ್ತು ಸಾಂಗ್ ಗಳಿಂದ ಸಕತ್ ಕ್ರೇಜ್ ಹುಟ್ಟಿಸಿರುವ ಚಿತ್ರತಂಡ, ಬಿಡುಗಡೆಗಾಗಿ ಸಜ್ಜಾಗಿದೆ. ಈಗಾಗಲೇ ಸಿನಿಮಾ ತಂಡ ಪ್ರಮೋಷನ್ ಕಾರ್ಯವನ್ನು ಭರ್ಜರಿಯಾಗಿ ನಡೆಸುತ್ತಿದೆ. ಇದೆಲ್ಲದರ ಮಧ್ಯದಲ್ಲಿ ಇದೀಗ ಬಂದಿರುವ ಸುದ್ದಿ ಎಂದರೆ ವಿದೇಶದಲ್ಲಿ ಈ ಸಿನಿಮಾ ಸುಮಾರು 1200 ಪರದೆಗಳಲ್ಲಿ ಬಿಡುಗಡೆಯಾಗಲಿದೆ.

ಆರ್.ಆರ್.ಆರ್, ಕೆಜಿಎಫ್ 2 ನಂತರ ವಿದೇಶದಲ್ಲಿ ಸುಮಾರು 1200 ಪರದೆಗಳಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾವೆಂದರೆ ಅದು ವಿಕ್ರಾಂತ್ ರೋಣ. ಈ ಕುರಿತಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಒನ್ ಟ್ವೆಂಟಿ 8 ಮೀಡಿಯಾ ಮತ್ತು ಕಾಸ್ಮೋಸ್ ಎಂಟರ್‌ಟೈನ್‌ಮೆಂಟ್‌ನ ಆಪರೇಷನ್ ಮುಖಸ್ಥ ಯೋಗೀಶ್ ದ್ವಾರಕೀಶ್ ಬುಂಗಾಲೆ ವಿದೇಶದಲ್ಲಿ 30 ಕ್ಕೂ ಹೆಚ್ಚು ದೇಶಗಳಲ್ಲಿ 1200 ಪರದೆಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

ನಮಗೆಲ್ಲರಿಗೂ ತಿಳಿದಿರುವಂತೆ ಸುಮಾರು 3 ತಿಂಗಳುಗಳಿಂದ ದೇಶ ವಿದೇಶದಲ್ಲಿ ವಿಕ್ರಾಂತ್ ರೋಣ ಸಿನಿಮಾದ ಪ್ರಮೋಷನ್ ಕಾರ್ಯ ಭರ್ಜರಿಯಾಗಿ ಸಾಗುತ್ತಿದೆ. ಈಗಾಗಲೇ ಯುಕೆ, ಯುಎಸ್, ಕೆನಡಾ, ಯುರೋಪಿಯನ್ ರಾಷ್ಟ್ರಗಳು, ಇಡೀ ಗಲ್ಫ್, ಆಸ್ಟ್ರೇಲಿಯಾ, ಮಲೇಷ್ಯಾ, ಸಿಂಗಾಪುರ್, ನೇಪಾಳದಲ್ಲಿ ಥಿಯೇಟರ್ ಬಿಡುಗಡೆಯನ್ನು ಖಚಿತಪಡಿಸಿದ್ದೇವೆ.ಆಯಾ ದೇಶಗಳಲ್ಲಿ ಸೆನ್ಸಾರ್ ಮಂಡಳಿಗೆ ಭೇಟಿ ನೀಡಿದ ನಂತರ ಚಿತ್ರಮಂದಿರಗಳ ಪಟ್ಟಿಯೊಂದಿಗೆ ಅಧಿಕೃತ ಪ್ರಕಟಣೆಯನ್ನು ಮಾಡಲಾಗುವುದು, ಆ ನಿಟ್ಟಿನಲ್ಲಿ ಕೆಲಸವು ಈಗ ಪ್ರಾರಂಭವಾಗಿದೆ” ಎಂದು ಸಿನಿಮಾತಂಡ ತಿಳಿಸಿದರು.

ಪಾನ್ ಇಂಡಿಯಾ ಸಿನಿಮಾದ ವಿಕ್ರಾಂತ್ ರೋಣ ಜುಲೈ 28 ರಂದು ಕನ್ನಡ ಭಾಷೆಯಲ್ಲದೆ, ದಕ್ಷಿಣ ಭಾರತದ ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತಮಿಳಿನಲ್ಲಿ ಬಿಡುಗಡೆಯಾಗುತ್ತಿದೆ. ಇದಲ್ಲದೆ ರೇಬಿಕ್, ಜರ್ಮನ್, ರಷ್ಯನ್ ಮತ್ತು ಮ್ಯಾಂಡರಿನ್ ಭಾಷೆಗಳಲ್ಲಿಯೂ ಬಿಡುಗಡೆಯಾಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top