fbpx
ಸಮಾಚಾರ

ತೆರಿಗೆ ಪಾವತಿಸುವಲ್ಲಿ ರಜನಿಕಾಂತ್ ಸೂಪರ್ ಸ್ಟಾರ್! ಆದಾಯ ತೆರಿಗೆ ಇಲಾಖೆಯಿಂದ ಗೌರವ ಪ್ರಮಾಣ ಪತ್ರ ಸ್ವೀಕಾರ

ಇತ್ತೀಚಿಗೆ ಅಕ್ಷಯ್ ಕುಮಾರ್ ಅವರಿಗೆ ತೆರಿಗೆ ಪಾವತಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ ಎಂಬ ಕಾರಣಕ್ಕಾಗಿ ಅವರಿಗೆ ಆದಾಯ ತೆರಿಗೆ ಇಲಾಖೆ ಬಹುಮಾನ ನೀಡಿ ಗೌರವಿಸಿತು. ಇದೀಗ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೂ ಸಹ ಆದಾಯ ತೆರಿಗೆ ಇಲಾಖೆ ಬಹುಮಾನ ನೀಡಿ ಗೌರವಿಸಿದೆ.

 

 

ತಮಿಳುನಾಡಿನಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುತ್ತಿರುವವರ ಪಟ್ಟಿಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರು ಮುಂಚೂಣಿಯಲ್ಲಿದ್ದಾರೆ. ಜುಲೈ 24ರಂದು ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಅತಿಹೆಚ್ಚು ಮತ್ತು ಸಕಾಲದಲ್ಲಿ ತೆರಿಗೆ ಪಾವತಿಸಿದ್ದಕ್ಕಾಗಿ ಪ್ರಶಸ್ತಿ ನೀಡಲಾಯಿತು. ತೆಲಂಗಾಣ ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್ ಪ್ರಶಸ್ತಿ ಪ್ರದಾನ ಮಾಡಿದರು. ಸಮಾರಂಭದಲ್ಲಿ, ಸೂಪರ್‌ಸ್ಟಾರ್ ರಜನಿಕಾಂತ್ ಅವರು ತಮಿಳುನಾಡಿನಲ್ಲಿ ಹೆಚ್ಚು ಮತ್ತು ತ್ವರಿತವಾಗಿ ತೆರಿಗೆ ಪಾವತಿಸಿದಕ್ಕಾಗಿ ಗೌರವಿಸಲಾಯಿತು.ರಜನಿಕಾಂತ್ ಅವರ ಅನುಪಸ್ಥಿತಿಯಲ್ಲಿ ಅವರ ಪುತ್ರಿ ಮತ್ತು ಚಲನಚಿತ್ರ ನಿರ್ಮಾಪಕಿ ಐಶ್ವರ್ಯ ಪ್ರಶಸ್ತಿ ಸ್ವೀಕರಿಸಿದರು.

ಪ್ರಶಸ್ತಿ ಪಡೆದ ನಂತರ ಟ್ವೀಟ್ ಮೂಲಕ ಧನ್ಯವಾದ ತಿಳಿಸಿದ ಐಶ್ವರ್ಯ “ಹೆಚ್ಚಿನ ಮತ್ತು ತ್ವರಿತ ತೆರಿಗಾದರ ಹೆಮ್ಮೆಯ ಮಗಳು. ಆದಾಯ ತೆರಿಗೆ ದಿನಾಚರಣೆಯಂದು ಅಪ್ಪನನ್ನು ಗೌರವಿಸಿದ್ದಕ್ಕಾಗಿ ತಮಿಳುನಾಡು ಮತ್ತು ಪುದುಚೇರಿಯ ಆದಾಯ ತೆರಿಗೆ ಇಲಾಖೆಗೆ ತುಂಬಾ ಧನ್ಯವಾದಗಳು” ಎಂದು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top