fbpx
ಸಿನಿಮಾ

ರವಿಚಂದ್ರನ್ ಪುತ್ರ ಮನೋರಂಜನ್ ಮದುವೆ ಫಿಕ್ಸ್; ಹುಡುಗಿ ಯಾರು? ವಿಶಿಷ್ಟ ಆಹ್ವಾನ ಪತ್ರಿಕೆ ಇದೋ ಇಲ್ಲಿದೆ

ನಟ ‘ಕ್ರೇಜಿ ಸ್ಟಾರ್​’ ರವಿಚಂದ್ರನ್​ ಅವರ ಮನೆಯಲ್ಲಿ ಶೀಘ್ರವೇ ಶುಭಕಾರ್ಯ ನಡೆಯಲಿದೆ. ಈ ಬಗ್ಗೆ ಮಾಹಿತಿ ಕೇಳಿಬಂದಿದೆ. ರವಿಚಂದ್ರನ್​ ಹಾಗೂ ಸುಮತಿ ದಂಪತಿಯ ಹಿರಿಯ ಪುತ್ರ ಮನೋರಂಜನ್​ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಸದ್ಯದಲ್ಲೇ ಅವರು ಹಸೆಮಣೆ ಏರಲಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ಆಗಸ್ಟ್ 21 ಹಾಗೂ 22ರಂದು ಅವರು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

ಸಂಗೀತಾ ದೀಪಕ್ ಎಂಬುವರನ್ನು ಮಿಸ್ಟರ್ ಪ್ರಿನ್ಸ್ ಮನೋರಂಜನ್ ಮದುವೆಯಾಗಲಿದ್ದಾರೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ಸ್‌ನಲ್ಲಿರುವ ವೈಟ್ ಪೆಟಲ್ಸ್‌ನಲ್ಲಿ (ತ್ರಿಪುರ ವಾಸಿನಿ) ಮನೋರಂಜನ್ ರವಿಚಂದ್ರನ್‌ ಅವರ ವಿವಾಹ ಮಹೋತ್ಸವ ಜರುಗಲಿದೆ. ಮದುವೆಯ ವಿಶಿಷ್ಟ ಮದುವೆ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ. ಪತ್ರಿಕೆಯಲ್ಲಿ ರವಿಚಂದ್ರನ್ ಅವರ ಫೋಟೋ ಇರುವುದು ಹೈಲೆಟ್ ಆಗಿದೆ. ಆಗಸ್ಟ್ 20 ಹಾಗೂ 21 ರಂದು ಮನೋರಂಜನ್ ರವಿಚಂದ್ರನ್ ಮತ್ತು ಸಂಗೀತಾ ದೀಪಕ್ ಅವರ ಮದುವೆ ನಡೆಯಲಿದೆ.

ಮನೋರಂಜನ್ ಕೂಡ ಸಾಕಷ್ಟು ಸಿನಿಮಾಗಳ ಮೂಲಕ ಚಂದನವನದಲ್ಲಿ ಗಮನ ಸೆಳೆದಿದ್ದಾರೆ. ಈಗ ತಮ್ಮ ವಯಕ್ತಿಕ ಬದುಕಿನ ವಿಚಾರವಾಗಿ ಸೌಂಡ್ ಮಾಡ್ತಿದ್ದಾರೆ. ಮನೋರಂಜನ್ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಸದ್ಯ ಮದುವೆಯ ಇನ್ವಿಟೇಶನ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪತ್ರಿಕೆಯಲ್ಲಿ ರವಿಚಂದ್ರನ್ ಅವರ ಫೋಟೋ ಇರುವುದು ಹೈಲೆಟ್ ಆಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top