fbpx
ಸಮಾಚಾರ

ಇಂದು ದೇಶಾದ್ಯಂತ ಕಾರ್ಗಿಲ್ ವಿಜಯೋತ್ಸವದ ಆಚರಣೆ! ವಿಜಯೋತ್ಸವದ ಕುರಿತು ನೀವು ತಿಳಿದುಕೊಳ್ಳಬೇಕಾಗಿರುವ 10 ವಿಷಯಗಳು ಯಾವುವು ಗೊತ್ತಾ?

ಪಾಕಿಸ್ತಾನದ ವಿರುದ್ಧ ಭಾರತ ಕಾರ್ಗಿಲ್ ಯುದ್ಧ ಗೆದ್ದು ಇವತ್ತಿಗೆ 23 ವರ್ಷಗಳು ಕಳೆದವು. ಪಾಕಿಸ್ತಾನದ ಸೈನಿಕರು ಕಾರ್ಗಿಲ್ ನಗರದ ಮೇಲೆ ಯುದ್ಧ ಮಾಡುತ್ತಿದ್ದಾರೆ ಎಂಬ ವಿಷಯವನ್ನು ತಿಳಿದ ಭಾರತೀಯ ಸೇನೆ 20,000 ಯೋಧರೊಂದಿಗೆ ಪಾಕಿಸ್ತಾನ ಸೈನ್ಯವನ್ನು ಬಗ್ಗುಬಡಿದರು. ಈ ಯುದ್ಧದಲ್ಲಿ 700 ಕ್ಕೂ ಹೆಚ್ಚು ಯೋಧರು ಹುತಾತ್ಮರಾದರು. ಇವರ ತ್ಯಾಗ ಬಲಿದಾನವನ್ನು ಸ್ಮರಿಸಲು ಪ್ರತಿ ವರ್ಷ ಜುಲೈ 26ರನ್ನು ಭಾರತ ಕಾರ್ಗಿಲ್ ವಿಜಯ ದಿವಸ್ ಆಚರಿಸುತ್ತಿದೆ. ಈ ಕಾರ್ಗಿಲ್ ವಿಜಯೋತ್ಸವದ ಬಗ್ಗೆ 10 ವಿಷಯಗಳು ತಮ್ಮನ್ನು ಕುತೂಹಲಕ್ಕೆ ಎಡೆಮಾಡಿಕೊಡುತ್ತದೆ. ಅಂತಹ ವಿಷಯಗಳು ಇಲ್ಲಿವೆ.

ಪಾಕಿಸ್ತಾನವು ತನ್ನ ಪಡೆಗಳನ್ನು ಮತ್ತು ಅರೆಸೈನಿಕ ಪಡೆಗಳನ್ನು ಆಪರೇಷನ್ ಬದ್ರ್ ಅಡಿಯಲ್ಲಿ LOC ಯ ಭಾರತದ ಕಾರ್ಗಿಲ್ ಎನ್ನುವ ಸ್ಥಳಕ್ಕೆ ರಹಸ್ಯವಾಗಿ ಕಳುಹಿಸಿತ್ತು. ನಂತರ ಪಾಕಿಸ್ತಾನವು ಈ ಕಾರ್ಗಿಲ್‍ನ 130 ರಿಂದ 200 ಚದರ ಕಿ.ಮೀ ನಡುವಿನ ಪ್ರದೇಶವನ್ನು ಆಕ್ರಮಿಸಿಕೊಂಡಿತ್ತು.

ಕಾಶ್ಮೀರದಿಂದ ಲಡಾಖ್‍ಗಿದ್ದ ಸಂಪರ್ಕವನ್ನು ಕಡಿತಗೊಳಿಸಿ ಸಿಯಾಚಿನ್ ಕಣಿವೆಯಲ್ಲಿರುವ ಜನರನ್ನು ಹಸಿವಿನಿಂದ ಸಾಯಿಸುವುದು ಪಾಕಿಸ್ತಾನದ ಗುರಿಯಾಗಿತ್ತು. ಅಷ್ಟೇ ಅಲ್ಲದೇ ಭಾರತ ಹಾಗೂ ಪಾಕ್‍ನ ವೈರತ್ವಕ್ಕೆ ಮುಖ್ಯ ಬುನಾದಿಯಾಗಿದ್ದ ಕಶ್ಮೀರ ಸಮಸ್ಯೆಯಲ್ಲಿ ಭಾರತಕ್ಕೆ ಕೆಲವು ಷರತ್ತುಗಳನ್ನು ಒಪ್ಪಿಕೊಳ್ಳುವಂತೆ ಮಾಡುವುದು ಈ ಕುತಂತ್ರದ ಭಾಗವಾಗಿತ್ತು.

ಕಾರ್ಗಿಲ್ ಬೆಟ್ಟದ ಎತ್ತರದ ಪ್ರದೇಶದಲ್ಲಿ ಪಾಕ್ ಸೈನಿಕರು ಅವಿತಿದ್ದು ಭಾರತದ ಸೈನಿಕರು ಕೆಳಗಡೆ ಇದ್ದರು. ಭಾರತ ಸೈನಿಕರ ಚಲನವಲನಗಳನ್ನು ತಿಳಿದುಕೊಳ್ಳುತ್ತಿದ್ದ ಪಾಕ್ ಸೈನಿಕರು ಸುಲಭವಾಗಿ ದಾಳಿ ಮಾಡುತ್ತಿದ್ದರು. ಪರಿಸ್ಥಿತಿ ವಿಕೋಪಕ್ಕೇರಿದಾಗ ಕಾರ್ಗಿಲ್‍ನ್ನು ರಕ್ಷಿಸಲು ಭಾರತ ವಿಶೇಷ ಪಡೆಗಳೊಂದಿಗೆ ಸುಮಾರು 30,000 ಸೈನಿಕರನ್ನು ಕಾರ್ಗಿಲ್ ದ್ರಾಸ್ ಪ್ರದೇಶಕ್ಕೆ ಕಳುಹಿಸಿತ್ತು. ಅಲ್ಲಿ 527ಕ್ಕೂ ಹೆಚ್ಚು ಸೈನಿಕರು ಅಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡರು.

ಮೇಲಿನಿಂದ ದಾಳಿಯಾಗುತ್ತಿದ್ದರೂ ನಮ್ಮ ಸೈನಿಕರು ಅಂಜದೆ ಸಾಹಸ ಪ್ರದರ್ಶನ ತೋರಿದ್ದರು.ಬೋಫೋರ್ಸ್ ಗನ್ ಮೂಲಕ ಸೈನಿಕರು ಪಾಕಿಸ್ತಾನದ ಸೇನಾ ಬಂಕರ್‍ಗಳನ್ನೇ ಧ್ವಂಸ ಮಾಡಿದ್ದರು.

ಪಾಕಿಸ್ತಾನದ ವಾಯುಪಡೆಯ ನಿವೃತ್ತ ಕಮಾಂಡರ್ ಕೈಸರ್ ತುಫೈಲ್ ಅವರು ಯುದ್ಧದ ಬಳಿ ಪಾಕಿಸ್ತಾನದ ಯೋಜನೆಗಳನ್ನು ಭಾರತೀಯ ವಾಯುಯಾನ ಮತ್ತು ರಕ್ಷಣಾ ನಿಯತಕಾಲಿಕೆಗೆ ಬಹಿರಂಗಪಡಿಸಿದರು.

ಕಾರ್ಗಿಲ್‍ನ ಅಕ್ರಮಣಕ್ಕಾಗಿ ಪಾಕಿಸ್ತಾನವು ಹೊಂಚು ಹಾಕಿದ್ದರ ಹಿಂದಿನ ಮಾಸ್ಟರ್‌ ಮೈಂಡ್‌ ಪಾಕಿಸ್ತಾನದ ಆಗಿನ ಆರ್ಮಿ ಜನರಲ್ ಪರ್ವೇಜ್ ಮುಷರಫ್, ಪಾಕಿಸ್ತಾನ್ ಎಕ್ಸ್ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಮಹ್ಮದ್ ಅಹ್ಮದ್, ಮೇಜರ್ ಜನರಲ್ ಜಾವೇದ್ ಹಸನ್, ಪಾಕಿಸ್ತಾನದ ಸೇನೆಯ ಮೇಜರ್ ಜನರಲ್ ಅಶ್ರಫ್ ರಶೀದ್ ಆಗಿದ್ದರು.

ಮತ್ತೊಂದು ಆಘಾತಕಾರಿ ಸಂಗತಿ ಏನೆಂದರೆ ನಾವು ಭಾರತದ ಮೇಲೆ ದಾಳಿ ಮಾಡುತ್ತಿದ್ದೇವೆ ಎಂಬ ವಿಚಾರ ಪಾಕಿಸ್ತಾನದ ಅಂದಿನ ಪ್ರಧಾನಿ ನವಾಜ್ ಷರೀಫ್ ಅವರಿಗೆ ತಿಳಿದಿರಲಿಲ್ಲ.

1999ರ ಮೇ 3ರಂದು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿದ್ದ ಪಾಕ್ ಸೇನೆ ಜುಲೈ ಮೊದಲ ವಾರದಲ್ಲಿ ತನ್ನ ಸೋಲನ್ನು ಒಪ್ಪಿಕೊಂಡಿತು. ಜುಲೈ 26ರಂದು ಆಕ್ರಮಿತ ಭಾರತೀಯ ಪ್ರದೇಶಗಳನ್ನು ತೊರೆಯುವಂತೆ ಪಾಕಿಸ್ತಾನಿ ಪಡೆಗಳಿಗೆ ಸೂಚಿಸುವ ಮೂಲಕ ಯುದ್ಧ ಕೊನೆಗೊಂಡಿತು.

ಕಾರ್ಗಿಲ್ ವಿಜೋತ್ಸವದ ನೆನಪಿಗಾಗಿ ಪ್ರತಿ ವರ್ಷ ಜುಲೈ 26ರಂದು ಪ್ರಧಾನಿ ಆದವರು ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುತ್ತಾರೆ.

ಕಾರ್ಗಿಲ್‍ನ್ನು ರಕ್ಷಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದ ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ, ಕ್ಯಾಪ್ಟನ್ ವಿಕ್ರಮ್ ಬಾತ್ರಾ ಮತ್ತು ಕ್ಯಾಪ್ಟನ್ ಕೀಶಿಂಗ್ ಕ್ಲಿಫರ್ಡ್ ನೋಂಗ್ರಮ್ ಅವರಿಗೆ ಮರಣೋತ್ತರವಾಗಿ ಪರಮವೀರ ಚಕ್ರ ಹಾಗೂ ಮಹಾವೀರ ಚಕ್ರವನ್ನು ಭಾರತ ಸರ್ಕಾರ ನೀಡಿ ಹುತಾತ್ಮ ಯೋಧರನ್ನು ಗೌರವಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top