fbpx
ಸಮಾಚಾರ

ಖ್ಯಾತ ನಟಿಗೆ ಹ್ಯಾಪಿ ಬರ್ತಡೇ ಸಾಂಗ್ ಹಾಡಿದ ಕಾಫಿ ನಾಡು ಚಂದು! ವಿಡಿಯೋ ವೈರಲ್

ನಾವು ಪ್ರತಿಯೊಬ್ಬರ ಹುಟ್ಟುಹಬ್ಬದಂದು ಹಲವಾರು ಸಿನಿಮಾಗಳ ಹುಟ್ಟು ಹಬ್ಬದ ಹಾಡನ್ನು ಹಾಕಿ ಸಂಭ್ರಮಿಸುತ್ತೇವೆ. ಇದೀಗ ಹಲವಾರು ಹುಟ್ಟು ಹಬ್ಬದ ಹಾಡುಗಳು ಸಕತ್ ಫೇಮಸ್ ಆಗಿದೆ. ಆದರೆ ಇದಕೆಲ್ಲ ಹೊರತಾಗಿ ಇದೀಗ ಸಕತ್ ಟ್ರೆಂಡಿಂಗ್ ನಲ್ಲಿರುವ ಹಾಡೆಂದರೆ ಅದು ಕಾಫಿ ನಾಡು ಚಂದು ಅವರ ಹುಟ್ಟುಹಬ್ಬದ ಹಾಡು.

 

 

ಹೌದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ಟ್ರೆಂಡ್ ಆಗುತ್ತಿರುವ ಬರ್ತಡೇ ಸಾಂಗ್ ಎಂದರೆ ಅದು ಕಾಫಿ ನಾಡು ಚಂದು ಅವರ ಬರ್ತಡೇ ಸಾಂಗ್. ನಾನು ಶಿವಣ್ಣ ಪುನೀತ್ ಅಣ್ಣನವರ ಅಭಿಮಾನಿ ಎಂದು ಶುರು ಮಾಡುವ ಈ ಸಾಂಗ್ ಇದೀಗ ಸಕತ್ ಟ್ರೆಂಡಿಂಗ್ ನಲ್ಲಿದೆ. ಸಾಮಾನ್ಯ ಜನರಿಗೆ ಮಾತ್ರವಲ್ಲದೆ ಹಲವಾರು ಸೆಲೆಬ್ರಿಟಿಗಳಿಗೂ ಇವರು ಬರ್ತಡೇ ಹಾಡನ್ನು ಹಾಡಿದ್ದಾರೆ. ಇದೀಗ ಇವರು ಜುಲೈ 26ರಂದು ಜನ್ಮದಿನ ಆಚರಸಿಕೊಂಡ ನಟಿ ಅಮೃತಾ ಅಯ್ಯಂಗಾರ್‌ ಅವರಿಗೂ ವಿಶ್‌ ಮಾಡಿ ಬರ್ತಡೇ ಹಾಡನ್ನು ಆಡಿದ್ದು, ಈ ವಿಡಿಯೋ ಇದೀಗ ಸಕತ್ ವೈರಲ್ ಆಗುತ್ತಿದೆ.

ಇವರು ತಮ್ಮ ಇನ್ಸ್ಟಾಗ್ರಾಮ್ ಕಥೆಯಲ್ಲಿ ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ಫಾಲ್ಲೋರ್ಸ್ ಸಂಪಾದಿಸಿದ್ದಾರೆ. ಇವರ ಬರ್ತಡೇ ಸಾಂಗ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ಫೇಮಸ್ ಆಗಿದ್ದು, ಅಭಿಮಾನಿಗಳು ತಮ್ಮ ಹುಟ್ಟು ಹಬ್ಬದಂದು ಕಾಫಿ ನಾಡು ಚಂದು ಅವರ ಬಳಿ ತಮ್ಮ ಹುಟ್ಟುಹಬ್ಬಕ್ಕಾಗಿ ಹಾಡನ್ನು ಹಾಡಿಸುವ ಮೂಲಕ ಸಂಭ್ರಮಿಸುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top