fbpx
ಸಮಾಚಾರ

ಅಧಿಕಾರಿಗಳ ಎಡವಟ್ಟಿನಿಂದ ಮನೆಯ ತಿಂಗಳಿನ ವಿದ್ಯುತ್ತು ಬಿಲ್ ಬರೋಬ್ಬರಿ 3,400 ಕೋಟಿ ರೂ! ಶಾಕ್ ಆಗಿ ಆಸ್ಪತ್ರೆ ಸೇರಿದ ಮನೆ ಮಂದಿ

ವಿದ್ಯುತ್ ಬಿಲ್ ಏರಿಕೆಯ ಮೂಲಕ ಜನರಿಗೆ ಸರಕಾರ ಮೊದಲಿನಿಂದಲೂ ಶಾಕ್ ನೀಡುತ್ತಲೇ ಬಂದಿದೆ. ಅದರಲ್ಲೂ ಕೆಲವರಿಗೆ ತಾವು ಬಳಸಿರುವುದಕ್ಕಿಂತ ಹೆಚ್ಚಾಗಿ ವಿದ್ಯುತ್ ಬಿಲ್ ಅನ್ನು ನೀಡುತ್ತಿದೆ. ಇವೆಲ್ಲದರ ಮಧ್ಯೆ ಮಧ್ಯಪ್ರದೇಶದ ವಿದ್ಯುತ್ ಸಂಸ್ಥೆ ಮಾಡಿರುವ ಎಡವಟ್ಟಿನಿಂದ ಮನೆಯ ಜನರು ಆಸ್ಪತ್ರೆ ಸೇರುವಂತಾಗಿದೆ.

 

 

ಮಧ್ಯಪ್ರದೇಶದ ಗ್ವಾಲಿಯರ್ ನಗರದ ಶಿವ್ ವಿಹಾರ್ ನಿವಾಸಿಯಾಗಿರುವ ಗುಪ್ತಾ ಅವರಿಗೆ ಬೆಳ್ಳಂಬೆಳಗ್ಗೆ ಶಾಕ್ ಆಗಿದೆ. ಏಕೆಂದರೆ ಈ ತಿಂಗಳು ವಿದ್ಯುತ್ ಬಿಲ್ ಸ್ವೀಕರಿಸುತ್ತಿದಂತೆ ಅದರಲ್ಲಿದ್ದ ಮೊತ್ತವು ಕಂಡು ಶಾಕ್ ಆಗಿದ್ದಾರೆ. ಏಕೆಂದರೆ ಅವರ ಒಂದು ತಿಂಗಳ ವಿದ್ಯುತ್ ಬಿಲ್ಲಿನ ಮೊತ್ತ 34,19,53,25,293 ರೂ. ಇದನ್ನು ನೋಡುತ್ತಿದ್ದಂತೆ ಯಾಂಕಾ ಗುಪ್ತಾ, ಅವರ ತಂದೆ ರಾಜೇಂದ್ರ ಪ್ರಸಾದ್ ಗುಪ್ತಾ ಮತ್ತು ಅವರ ತಾಯಿ ಆಘಾತಗೊಂಡು ಕುಸಿದುಬಿದ್ದಿದ್ದಾರೆ. ಇದರ ಪರಿಣಾಮವಾಗಿ ಇದೀಗ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಯಾವಾಗ ಈ ಸುದ್ದಿ ಹರಿದಾಡಲು ಶುರುವಾಗಿ ಜನರ ಆಕ್ರೋಶ ಹೆಚ್ಚಾಯಿತೋ ಮಧ್ಯಪ್ರದೇಶ ಸರ್ಕಾರಿ ಸ್ವಾಮ್ಯದ ವಿದ್ಯುತ್ ಕಂಪೆನಿ (MPMKVVC), ಇದರ ಕುರಿತು ಸ್ಪಷ್ಟನೆ ನೀಡಿದೆ. ವಿದ್ಯುತ್ ಇಲಾಖೆಯ ಉದ್ಯೋಗಿಯೊಬ್ಬರು ವ್ಯವಸ್ಥೆಯಲ್ಲಿನ ವಿದ್ಯುತ್ ಬಳಕೆಯ ಬದಲು ವಿದ್ಯುತ್ ಗ್ರಾಹಕರ ಸಂಖ್ಯೆಯನ್ನು ನಮೂದಿಸಿದ್ದಾರೆ ಎಂದು ತಿಳಿದುಬಂದಿದೆ. ಇದೀಗ ಹೊಸ ಬಿಲ್ ನೀಡಲಾಗಿದ್ದು, ಇದರ ಮೊತ್ತ 1300 ರೂ. ಗಳಾಗಿದೆ.

ಈ ರೀತಿಯ ಎಡವಟ್ಟು ಮಾಡಿದ ಒಬ್ಬ ನೌಕರನನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಮತ್ತು ಇನ್ನೊಬ್ಬರನ್ನು ಅಮಾನತುಗೊಳಿಸಲಾಗಿದೆ. ಅಲ್ಲದೆ, ಸಂಬಂಧಪಟ್ಟ ಜೂನಿಯರ್ ಇಂಜಿನಿಯರ್‌ಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಮಧ್ಯಪ್ರದೇಶದ ಇಂಧನ ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top