ಒಡಿಶಾದ ಹೆಸರಾಂತ ನಟಿ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತೆ ಪ್ರಕೃತಿ ಮಿಶ್ರಾ ಅವರ ಮೇಲೆ ಹಾಡುಹಗಲೇ ಮಹಿಳೆಯೊಬ್ಬಳು ಹಲ್ಲೆ ನಡೆಸಿದ್ದಾಳೆ. ತನ್ನ ಪತಿ ಜೊತೆ ಈ ನಟಿ ಕಾರಿನಲ್ಲಿ ಇದ್ದಳು ಎಂಬ ಕಾರಣಕ್ಕಾಗಿ ಇವರ ಮೇಲೆ ಹಲ್ಲೆ ಮಾಡಿದ್ದಾಳೆ.
View this post on Instagram
ಪ್ರಕೃತಿ ಮಿಶ್ರಾ ಮತ್ತು ಒಡಿಸ್ಸಾದ ನಟ ಬಾಬುಶಾಜ್ ಮೊಹಂತಿ ಇಬ್ಬರೂ ಪ್ರೀತಿಯಲ್ಲಿದ್ದಾರೆ ಎಂದು ನಟ ಬಾಬುಶಾಜ್ ಅವರ ಪತ್ನಿಗೆ ಅನುಮಾನ. ಈಗಾಗಿ ಇವರ ಪತಿ ಮೇಲೆ ಇವರು ಒಂದು ಕಣ್ಣನ್ನು ಇಟ್ಟಿದ್ದರು. ಇವರ ಅನುಮಾನ ನಿಜವಾದಂತೆ ಪತಿ ಕಾರಿನಲ್ಲಿ ಪ್ರಕೃತಿ ಮಿಶ್ರಾ ಅವರ ಜೊತೆ ಸುತ್ತಾಡುತ್ತಿರುವುದನ್ನು ಕಂಡರು. ನಂತರ ಅವರು ಪತಿಯ ಕಾರನ್ನು ತಡೆದು ಕಾರಿನಲ್ಲಿದ್ದ ನಟಿ ಪ್ರಕೃತಿ ಮಿಶ್ರಾ ಅವರ ಕೂದಲನ್ನು ಎಳೆದು ಇವರ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡುತ್ತಿದ್ದ ವಿಡಿಯೋವನ್ನು ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು, ಇದೀಗ ಈ ವಿಡಿಯೋ ಸಕತ್ ವೈರಲ್ ಆಗುತ್ತಿದೆ.
Whatever the cause, the victim is being beaten by a lady while screaming for aid. These unshameful bystanders are happily recording videos.#PrakrutiMishraBeatenByBabusanWife #PrakrutiMishra#Babusan pic.twitter.com/pAAOhPu13f
— SUBHRANSU PANDA (@AuthorSubhransu) July 23, 2022
ವಿಡಿಯೋ ವೈರಲ್ ಆಗುತ್ತಿದ್ದಂತೆ ಘಟನೆಯ ಕುರಿತು ಸ್ಪಷ್ಟನೆ ನೀಡಿದ ನಟಿ “ಈ ಘಟನೆಯ ಕುರಿತು ಹಲವರು ನನ್ನ ಮೇಲೆಯೇ ಆರೋಪ ಮಾಡುತ್ತಿದ್ದಾರೆ. ಆದರೂ, ನನ್ನ ಮೇಲೆ ಹಲ್ಲೆಯಾಗಿದೆ. ನಾವು ಎಂತಹ ಸಮಾಜದಲ್ಲಿ ಇದ್ದೇವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಈ ಘಟನೆಯನ್ನು ನಾನು ಸಮರ್ಥವಾಗಿ ಎದುರಿಸುತ್ತೇನೆ. ಕಾನೂನು ಮೂಲಕವೇ ಉತ್ತರಿಸುತ್ತೇನೆ. ಮಾಡಲು ನನಗೆ ಸಾಕಷ್ಟು ಕೆಲಸಗಳಿಗೆ. ಅವುಗಳಲ್ಲಿ ತೊಡಗಿಕೊಳ್ಳುವೆ” ಎಂದು ಬರೆದುಕೊಂಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
