fbpx
ಸಮಾಚಾರ

ವಿಕ್ರಾಂತ್ ರೋಣ ಸಿನಿಮಾಕ್ಕೂ ತಗುಲಿತು ಪೈರಸಿ ಭೂತ! ರಿಲೀಸ್ ಆದ ಕೆಲವೇ ಘಂಟೆಗಳಲ್ಲಿ ಆನ್‌ಲೈನ್‌ನಲ್ಲಿ ಲೀಕ್

ಸ್ಯಾಂಡಲ್ವುಡ್ ನ ಮೋಸ್ಟ ಎಕ್ಸ್ಪೆಕ್ಟೆಡ್ ಸಿನಿಮಾ “ವಿಕ್ರಾಂತ್ ರೋಣ” ಬಿಡುಗಡೆಯಾಗಿ ಪ್ರಪಂಚಾದ್ಯಂತ ಸಕತ್ ಸೌಂಡ್ ಮಾಡುತ್ತಿದೆ. ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ಫ್ಯಾಂಟಸಿ ಶೈಲಿಯಲ್ಲಿ ಕಿರುತೆರೆಮೇಲೆ ಮಿಂಚುತ್ತಿದ್ದಾರೆ. ಆದರೆ ಇದೀಗ ಈ ಸಿನಿಮಾಕ್ಕೂ ಕೂಡ ಪೈರಸಿ ಭೂತ ಎದುರಾಗಿದೆ.

ಒಂದು ಸಿನಿಮಾ ಬಿಡುಗಡೆಯಾಗುತ್ತಿದೆ ಎಂದರೆ ಆ ಸಿನಿಮಾದ ನಿರ್ದೇಶಕರಿಂದ ಹಿಡಿದು ಪ್ರತಿಯೊಬ್ಬರಿಗೂ ಪೈರಸಿ ಭೂತ ಕಾಡುತ್ತಿರುತ್ತದೆ. ಇದೀಗ ವಿಕ್ರಾಂತ್ ರೋಣ ಸಿನಿಮಾಗೂ ಕೂಡ ಈ ಭೂತ ಮೆಟ್ಟಿಕೊಂಡಿದೆ. ಸಿನಿಮಾ ಬಿಡುಗಡೆ ಯಾಗಿ ಕೆಲವೇ ಕೆಲವು ಘಂಟೆಗಳಲ್ಲಿ ಈ ಸಿನಿಮಾ ಕೆಲವು ಡಿಜಿಟಲ್ ವೇದಿಕೆಗಳಲ್ಲಿ ಲಭ್ಯವಾಗಿದ್ದು, ಹಲವಾರು ಲಿಂಕ್ ಗಳು ಸಿನಿಮಾ ಡೌನ್ಲೋಡ್ ಮಾಡುವಂತೆ ತೋರಿಸುತ್ತಿದೆ. ಇದೀಗ ಸಿನಿಮಾ ತಂಡ ಈ ಲಿಂಕ್ ಗಳನ್ನು ಡಿಲೀಟ್ ಮಾಡುವ ಪ್ರಯತ್ನ ಮಾಡುತ್ತಿದೆ.

ವಿಕ್ರಾಂತ್ ರೋಣ ಸಿನಿಮಾ ಆನ್ಲೈನ್ ನಲ್ಲಿ ಬಿಡುಗಡೆಯಾಗಬಹುದು ಎಂಬ ಅನುಮಾನ ಸಿನಿಮಾ ತಂಡಕ್ಕೆ ಅಲ್ಲದೆ ಕಿಚ್ಚ ಸುದೀಪ್ ಅವರಿಗೂ ಇತ್ತು ಎಂದು ಹೇಳಬಹುದು. ಪೈರಸಿ ಕುರಿತು ಸುದೀಪ್ ಮಾತನಾಡುತ್ತಾ ಇದು ಮೊಬೈಲ್‌ನಲ್ಲಿ ನೋಡುವಂತಹ ಸಿನಿಮಾವಲ್ಲ. ಸಿಕ್ಕರೆ ಖಂಡಿತಾ ನೀವು ನೋಡಿ. ಆದರೆ, ಈ ಸಿನಿಮಾವನ್ನು ಮೊಬೈಲ್‌ನಲ್ಲಿ ನೋಡಿದ ನಂತರವೂ ನೀವು ಥಿಯೇಟರ್‌ಗೆ ಬಂದು ಮತ್ತೆ ಸಿನಿಮಾ ನೋಡುತ್ತೀರಿ. ಆ ರೀತಿಯಲ್ಲಿದೆ ಎಂದು ಹೇಳಿದರು.

ಪೈರಸಿ ಕುರಿತು ನಿರ್ದೇಶಕ ಅನೂಪ್ ಭಂಡಾರಿ ಅವರು ಒಂದು ಪೋಸ್ಟರ್ ರಿಲೀಸ್ ಮಾಡಿ ನಿಮಗೆ ಪೈರಸಿ ಏನಾದರು ಕಂಡುಬಂದರೆ ಸೈಬರ್ ಕ್ರೈಂ ನಂಬರ್ ಮತ್ತು ಸ್ವತಃ ಅನೂಪ್ ಬಹನ್ದಾರಿ ಅವರು ನೀಡಿದ್ದ ನಂಬರ್ ಗೆ ಕರೆ ಮಾಡಿ ಮಾಹಿತಿ ನೀಡಿ ಎಂದು ಕೇಳಿಕೊಂಡಿದ್ದರು. ಆದರೆ ಇವೆಲ್ಲದರ ನಡುವೆಯೂ ಸಹ ವಿಕ್ರಾಂತ್ ರೋಣ ಸಿನಿಮಾದ ಪೈರಸಿ ವಿಡಿಯೋಗಳು ಕೆಲವೊಂದು ಸೈಟ್ ಗಳಲ್ಲಿ ಹರಿದಾಡುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top