fbpx
ಸಮಾಚಾರ

ವೀಲ್ ಚೇರ್ ಮೂಲಕ ಝೋಮ್ಯಾಟೊ ಫುಡ್ ಡೆಲಿವರಿ ಮಾಡುತ್ತಿರುವ ವ್ಯಕ್ತಿ! ಇವರ ಸಾಧನೆಗೆ ಹಾಟ್ಸ್ ಆಫ್- ವಿಡಿಯೋ ವೈರಲ್

ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಬದುಕನ್ನು ನಡೆಸಲು ಹಲವಾರು ರೀತಿಯಲ್ಲಿ ಕಷ್ಟ ಪಡುತ್ತಾರೆ. ತಮ್ಮ ದೇಹದಲ್ಲಿ ಎಷ್ಟೇ ಕಷ್ಟವಿದ್ದರೂ ಯಾವುದಾದರು ಒಂದು ರೀತಿಯಲ್ಲಿ ಶ್ರಮ ಪಟ್ಟು ಕೆಲಸ ಮಾಡಿ ಜೀವನ ನಡೆಸುತ್ತಾರೆ. ಕೈ ಕಾಲು ನೆಟ್ಟಿಗಿದ್ದರು ಕೆಲಸ ಮಾಡದೇ ಇರುವ ವ್ಯಕ್ತಿಗಳಿಗೆ ಇಂತಹ ಜನರು ಮಾದರಿಯಾಗುತ್ತಾರೆ. ಇದೀಗ ನಾನು ಹೇಳಲು ಹೊರಟಿರುವುದು ವೀಲ್ ಚೇರ್ ಮೂಲಕ ಫುಡ್ ಡೆಲಿವರಿ ಮಾಡುತ್ತಿರುವ ಒಬ್ಬ ವ್ಯಕ್ತಿಯ ಕುರಿತು.

 

 

ವಿಕಲ ಚೇತನ ವ್ಯಕ್ತಿಯೊಬ್ಬರು ಝೋಮ್ಯಾಟೊ ಕಂಪನಿ ಟಿ ಶರ್ಟ್ ಧರಿಸಿ ತನ್ನ ವೀಲ್ ಚೇರ್ ಮೂಲಕ ಫುಡ್ ಡೆಲಿವರಿ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ಗ್ರೂಮಿಂಗ್ ಬುಲ್ಸ್ ಎಂಬ ಪೇಜ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ. ಇವರು ತಮ್ಮ ವೀಲ್ ಚೇರ್ ಅನ್ನು ಗಾಡಿಗೆ ಸೇರಿಸಲಾಗಿದೆ. ಇದರಿಂದಾಗಿ ಇವರಿಗೆ ಗಾಡಿಯನ್ನು ಓಡಿಸಲು ಸುಲಭವಾಗುತ್ತಿದೆ.

ಇದೀಗ ಇವರ ಈ ವಿಡಿಯೋ ಎಲ್ಲಾ ಕಡೆ ಸಕತ್ ವೈರಲ್ ಆಗುತ್ತಿದ್ದು, ಇವರ ಸಾಹಸದ ಬಗ್ಗೆ ಪ್ರತಿಯೊಬ್ಬರು ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ಅಂಗಗಳು ಸರಿಯಾಗಿದ್ದರು ಕೆಲಸ ಮಾಡದೇ ಸೋಮಾರಿಯಾಗಿರುವಂತಹ ಜನರಿಗೆ ಇವರು ಸ್ಫೂರ್ತಿದಾಯಕ ಎಂಬುದನ್ನು ನಾವು ಇಲ್ಲಿ ಕಾಣಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top