fbpx
ಸಮಾಚಾರ

ತಮ್ಮ ಮುದ್ದಾದ ಮಗುವಿನ ಜೊತೆ ಫೋಟೋಶೂಟ್ ಮಾಡಿಸಿದ ಸಂಜನಾ- ಫೋಟೋ ವೈರಲ್

ನಟಿ ಸಂಜನಾ ತಮ್ಮ ಮುದ್ದು ಮಗುವಿನ ಲಾಲನೆ ಪಾಲನೆಯಲ್ಲಿ ಸಕತ್ ಬ್ಯುಸಿ ಯಾಗಿದ್ದಾರೆ. ತಮ್ಮ ಮಗುವಿನ ಜನನದ ನಂತರ ಇಲ್ಲಿಯವರೆಗೂ ತಮ್ಮ ಮಗುವಿನ ಬಗ್ಗೆ ಪ್ರತಿಯೊಂದು ವಿಚಾರವನ್ನು ಸಂಜನಾ ಹಂಚಿಕೊಳ್ಳುತ್ತಿದ್ದರು. ಇದೀಗ ಇದೆ ಮೊದಲ ಬಾರಿಗೆ ತಮ್ಮ ಮುದ್ದಾದ ಮಗುವಿನ ಜೊತೆ ಫೋಟೋಶೂಟ್ ಮಾಡಿಸಿದ್ದು, ಇದೀಗ ಈ ಫೋಟೋ ಮತ್ತು ವಿಡಿಯೋ ಸಕತ್ ವೈರಲ್ ಆಗುತ್ತಿದೆ.

 

 

ನಟಿ ಸಂಜನಾ ಅವರ ಮನೆಗೆ ಮಗುವಿನ ಆಗಮನದ ನಂತರ ಮನೆಯ ತುಂಬಾ ಸಂತಸದ ವಾತಾವರಣ ಉಂಟಾಗಿದೆ. ತಮ್ಮ ಮಗುವಿನ ಮುಖವನ್ನು ಪೂರ್ತಿಯಾಗಿ ತೋರಿಸದ ಸಂಜನಾ ಇದೆ ಮೊದಲ ಬಾರಿಗೆ ತಮ್ಮ ಮುದ್ದಾದ ಮಗುವಿನ ಜೊತೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

 

 

ತಮ್ಮ ಮುದ್ದಾದ ಮಗುವಿನ ಫೋಟೋಶೂಟ್ ಅನ್ನು ಎರಡು ವಿಭಿನ್ನ ಥೀಮ್ ಮೂಲಕ ಚಿತ್ರಿಸಿದ್ದಾರೆ. ಮೊದಲನೆಯದು ಡಾಕ್ಟರ್. ತಮ್ಮ ಪತಿ ವೈದ್ಯರಾಗಿರುವ ಕಾರಣ ವೈದ್ಯರ ಥೀಮ್ ಇಟ್ಟುಕೊಡು ಫೋಟೋಶೂಟ್ ಮಾಡಿಸಿದ್ದಾರೆ. ಎರಡನೆಯದಾಗಿ ಆಕ್ಟರ್. ನಟಿ ಸಂಜನಾ ನಟಿಯಾಗಿರುವ ಕಾರಣ ಆಕ್ಟರ್ ಥೀಮ್ ಇಟ್ಟುಕೊಂಡು ಫೋಟೋಶೂಟ್ ಮಾಡಿಸಿದ್ದಾರೆ. ಸದ್ಯಕ್ಕೆ ಆಕ್ಟರ್ ಥೀಮ್ ಮಾಡಿರುವ ಫೋಟೋಶೂಟ್ ಅನ್ನು ರಿವೀಲ್ ಮಾಡಿರುವ ಸಂಜನಾ ಇದೀಗ ಈ ಫೋಟೋಗಳು ಸಕತ್ ವೈರಲ್ ಆಗುತ್ತಿದೆ. ಡಾಕ್ಟರ್ ಥೀಮ್ ಇಟ್ಟುಕೊಂಡು ಮಾಡಿಸಿರುವ ಫೋಟೋಶೂಟ್ ಯಾವ ರೀತಿ ಇರಬಹುದು ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top