fbpx
ಸಮಾಚಾರ

ಜೀವ ಬೆದರಿಕೆ ಬೆನ್ನಲ್ಲೇ ಸ್ವಯಂ ರಕ್ಷಣೆಗಾಗಿ ಗನ್ ಲೈಸನ್ಸ್ ಪಡೆದ ಸಲ್ಮಾನ್ ಖಾನ್!

ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಮ್​ ಖಾನ್​ಗೆ ಕೆಲವು ದಿನಗಳಿಂದ ಬೆದರಿಕೆಯ ಕರೆಗಳು ಮತ್ತು ಪತ್ರಗಳು ಬರುತ್ತಿದ್ದವು. ಇದೆ ಕಾರಣಕ್ಕಾಗಿ ಆತ್ಮ ರಕ್ಷಣೆಗಾಗಿ ಗನ್ ಲೈಸೆನ್ಸ್ ಬೇಕೆಂದು ಅರ್ಜಿ ಸಲ್ಲಿಸಿದ್ದರು. ಇದೀಗ ಸಲ್ಮಾನ್ ಖಾನ್ ಅವರಿಗೆ ಸ್ವಯಂ ರಕ್ಷಣೆಗೆ ಗನ್ ಹೊಂದಲು ಪರವಾನಗಿ ನೀಡಲಾಗಿದೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.

ಕಳೆದ ತಿಂಗಳು ಮುಂಬೈ ಪೊಲೀಸ್ ಕಮಿಷನರ್ ಅವರನ್ನು ಭೇಟಿ ಮಾಡಿ ತಮಗೆ ಆತ್ಮರಕ್ಷಣೆಗಾಗಿ ಗನ್ ಇಟ್ಟುಕೊಳ್ಳಲು ಲೈಸನ್ಸ್ ಬೇಕೆಂದು ಬೇಡಿಕೆಯನ್ನು ಇಟ್ಟಿದ್ದರು. ಇದೀಗ ಇದರ ಕುರಿತು ಅಗತ್ಯವಿರುವ ಪ್ರಕ್ರಿಯೆಗಳನ್ನು ಮುಗಿಸಿರುವ ಸಲ್ಮಾನ್ ಖಾನ್ ಇನ್ಮುಂದೆ ಲೈಸನ್ಸ್ ಹೊಂದಿರುವ ಗನ್ ಬಳಸಬಹುದು ಎಂದು ತಿಳಿಸಲಾಗಿದೆ.

‘ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ರೀತಿ ನಿಮ್ಮನ್ನೂ ಮುಗಿಸುತ್ತೇವೆ’ ಎಂದು ಸಲ್ಮಾನ್​ ಖಾನ್​ಗೆ ಕೊಲೆ ಬೆದರಿಕೆ ಹಾಕಲಾಗಿತ್ತು. ಈ ಘಟನೆಯ ಬಳಿಕ ಸಲ್ಮಾನ್ ಖಾನ್ ತಮ್ಮ ಸುರಕ್ಷತೆಯ ವಿಚಾರದಲ್ಲಿ ಹೆಚ್ಚು ಗಮನ ವಹಿಸಿದರು. ಮೊದಲಿಗೆ ಶಸ್ತ್ರಸಜ್ಜಿತ ಮತ್ತು ಬುಲೆಟ್ ಪ್ರೂಫ್ ಲ್ಯಾಂಡ್ ಕ್ರೂಸರ್ ಕಾರನ್ನು ಅಪ್‌ಗ್ರೇಡ್ ಮಾಡಿಕೊಂಡಿದ್ದಾರೆ. ಇದೀಗ ಗನ್ ಇಟ್ಟುಕೊಳ್ಳಲು ಲೈಸನ್ಸ್ ಕೂಡ ಪಡೆದುಕೊಂಡಿದ್ದಾರೆ.

‘ಕಭಿ ಈದ್​ ಕಭಿ ದಿವಾಲಿ’, ‘ಟೈಗರ್​ 3’ ಮುಂತಾದ ಸಿನಿಮಾಗಳಲ್ಲಿ ಸಲ್ಮಾನ್ ಬ್ಯುಸಿ ಯಾಗಿದ್ದಾರೆ. ಇದಲ್ಲದೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಸದಾ ಕಾಲ ಸುತ್ತಾಡುತ್ತಿರುತ್ತಾರೆ. ಹೀಗಾಗಿ ಇವರು ಭದ್ರತೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕಾದ ಅನಿವಾರ್ಯ ಎದುರಾಗಿರುವುದರಿಂದ ಸಹಜವಾಗಿ ತಮ್ಮ ಭದ್ರತೆಯ ಕುರಿತು ಹೆಚ್ಚಿನ ಗಮನ ವಹಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top