fbpx
ಸಮಾಚಾರ

ಖ್ಯಾತ ಹಿರಿಯ ಗಾಯಕಿ ನಿರ್ಮಲಾ ಮಿಶ್ರಾ ನಿಧನ!

ಹಿರಿಯ ಬೆಂಗಾಲಿ ಮತ್ತು ಒಡಿಯಾ ಗಾಯಕಿ ನಿರ್ಮಲಾ ಮಿಶ್ರಾ ಅವರು ತೀವ್ರ ಹೃದಯಾಘಾತದಿಂದ ಭಾನುವಾರ (ಜುಲೈ 31) ಮುಂಜಾನೆ ಚೆಟ್ಲಾ ಪ್ರದೇಶದ ತಮ್ಮ ನಿವಾಸದಲ್ಲಿ ನಿಧನರಾದರು ಎಂದು ಅವರ ಹಿರಿಯ ವೈದ್ಯರು ತಿಳಿಸಿದ್ದಾರೆ.

81 ವರ್ಷದ ನಿರ್ಮಲಾ ಮಿಶ್ರಾ ಅವರು ಹಲವಾರು ಬೆಂಗಾಲಿ ಮತ್ತು ಒಡಿಯಾ ಚಲನಚಿತ್ರಗಳಲ್ಲಿನ ಹಾಡುಗಳಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ, ಅವರು ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

ವೈದ್ಯರ ಪ್ರಕಾರ “ಅವರು ಮಧ್ಯರಾತ್ರಿ 12.05 ರ ಸುಮಾರಿಗೆ ತೀವ್ರ ಹೃದಯಾಘಾತಕ್ಕೆ ಒಳಗಾದರು ಮತ್ತು ಅವರನ್ನು ಹತ್ತಿರದ ನರ್ಸಿಂಗ್ ಹೋಮ್‌ಗೆ ಕರೆದುಕೊಂಡು ಹೋಗಲಾಗಿತ್ತು, ಆದರೆ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು” ಎಂದು ತಿಳಿಸಿದರು.

ಇವರು 1938 ರಲ್ಲಿ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಜನಿಸಿದರು. ಇವರು ಸಂಗೀತ ಸುಧಾಕರ್ ಬಾಲಕೃಷ್ಣ ದಾಸ್ ಪ್ರಶಸ್ತಿಗೆ ಭಾಜನರಾಗಿದ್ದರು. ಒಡಿಯಾ ಸಂಗೀತಕ್ಕೆ ಅವರ ಜೀವಮಾನದ ಗಾಯನದ ಕೊಡುಗೆಗಾಗಿ ಈ ಪ್ರಶಸ್ತಿಯನ್ನು ಅವರಿಗೆ ನೀಡಲಾಗಿತ್ತು.

ಇವರ ಜನಪ್ರಿಯ ಬೆಂಗಾಲಿ ಹಾಡುಗಳು ‘ಎಮಾನ್ ಏಕ್ತಾ ಜಿನುಕ್’, ‘ಬೋಲೋ ತೊ ಅರ್ಷಿ’ ಮತ್ತು ‘ಈ ಬಂಗ್ಲಾರ್ ಮತಿ ತೆ’ ಸೇರಿವೆ, ಇದಲ್ಲದೆ ಅವರ ಕೆಲವು ಹಿಟ್ ಒಡಿಯಾ ಹಾಡುಗಳು ‘ನಿದಾ ಭಾರ ರಾತಿ ಮಧು ಝರಾ ಜಾನ್ಹಾ’ ಮತ್ತು ‘ಮೋ ಮನ ​​ಬೀನಾ ರಾ ತಾರೆ’ ಮುಂತಾದವು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top