fbpx
ಸಮಾಚಾರ

ಮಗಳ ಮುದ್ದಾದ ಹೆಸರನ್ನು ರಿವೀಲ್ ಮಾಡಿದ ಪ್ರಣೀತಾ ಸುಭಾಷ್! ಏನದು ಗೊತ್ತಾ?

ಸ್ಯಾಂಡಲ್ವುಡ್ ನ ಬ್ಯೂಟಿ, ಹೆಸರಾಂತ ನಟಿ ಪ್ರಣೀತಾ ಸುಭಾಷ್ ಅವರು ಇತ್ತೀಚೆಗೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಮಗು ಆಗಮನದ ನಂತರ ಅದರ ಲಾಲನೆ ಪಾಲನೆಯಲ್ಲಿ ಅವರು ಸದಾ ಬ್ಯುಸಿ ಯಾಗಿದ್ದರು. ಇದೀಗ ತಮ್ಮ ಮಗುವಿಗೆ ಮುದ್ದಾದ ಹೆಸರನ್ನು ಇಟ್ಟಿದ್ದು, ಇದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

 

 

ನಟಿ ಪ್ರಣೀತಾ ಅವರ ಮನೆಗೆ ಮುದ್ದಾದ ಮಗುವಿನ ಆಗಮನದ ನಂತರ ಮನೆಯ ಸುತ್ತಾ ಸಂತಸದ ವಾತಾವರಣ ಬೆಳೆಯಿತು. ಮನೆಯ ಪ್ರತಿಯೊಬ್ಬ ಸದಸ್ಯರು ಕೂಡ ಮಗುವಿನ ಲಾಲನೆ ಪಾಲನೆಯಲ್ಲಿ ಸಕತ್ ಬ್ಯುಸಿ ಯಾಗಿದ್ದರು. ಮಗು ಆಗಮನದ ಬಳಿಕ ತಮ್ಮ ಮಗುವಿನ ಕುರಿತು ಪ್ರತಿಯೊಂದು ಅಪ್ಡೇಟ್ ಅನ್ನು ಪ್ರಣೀತಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದರು. ಮಗಳ ಫೋಟೋ ಶೂಟ್ ಜೊತೆಗೆ ಇದೀಗ ತಮ್ಮ ಮಗುವಿನ ಮುದ್ದಾದ ಹೆಸರನ್ನು ಕೂಡ ಪ್ರಣೀತಾ ಅಭಿಮಾನಿಗಳ ಬಳಿ ಹಂಚಿಕೊಂಡಿದ್ದಾರೆ.

ಪ್ರಣೀತಾ ದಂಪತಿ ತಮ್ಮ ಮುದ್ದಾದ ಹೆಣ್ಣು ಮಗುವಿಗೆ ʻಅರ್ನಾʼ ಎಂಬ ಹೆಸರನ್ನು ಇಟ್ಟಿದ್ದಾರೆ. ಇದರ ಜೊತೆ ತಮ್ಮ ಮುದ್ದಾದ ಮಗುವಿನ ಫೋಟೋ ಶೂಟ್ ಕೂಡ ಮಾಡಿಸಿದ್ದು, ಕ್ಯಾಪ್ಶನ್ ನಲ್ಲಿ ‘Introducing Arna’ ಎಂದು ಬರೆದುಕೊಂಡಿದ್ದಾರೆ. ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top