fbpx
ಸಮಾಚಾರ

ಪ್ರಪಂಚಾದ್ಯಂತ ಮೊದಲ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಟಾಪ್ 5 ಕನ್ನಡದ ಸಿನಿಮಾಗಳು ಯಾವುವು ಗೊತ್ತಾ? ಇಲ್ಲಿದೆ ಅದರ ಕುರಿತು ಮಾಹಿತಿ

ಇತ್ತೀಚಿನ ದಿನಗಳಲ್ಲಿ ನಮ್ಮ ಭಾರತದ ಸಿನಿಮಾಗಳು ದೇಶದಲ್ಲಿ ಅಲ್ಲದೆ ಪ್ರಪಂಚಾದ್ಯಂತ ಸಕತ್ ಸೌಂಡ್ ಮಾಡುತ್ತಿದೆ. ಅದರಲ್ಲೂ ನಮ್ಮ ಕನ್ನಡ ಸಿನಿಮಾಗಳು ಕೂಡ ವಿದೇಶದಲ್ಲೂ ಹೆಚ್ಚಿನ ಸೌಂಡ್ ಮಾಡುತ್ತಿದೆ. ಹೀಗಾಗಿ ನಮ್ಮ ಕನ್ನಡದ ಸಿನಿಮಾಗಳು ಕೂಡ ಪಾನ್ ಇಂಡಿಯಾ ಸಿನಿಮಾ ಲೆವೆಲ್ ಗೆ ಬೆಳೆದು ನಿಂತಿದೆ. ಇದೀಗ ಪ್ರಪಂಚಾದ್ಯಂತ ಸಕತ್ ಸೌಂಡ್ ಮಾಡಿ ಮೊದಲ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಕನ್ನಡದ ಟಾಪ್ 5 ಸಿನಿಮಾಗಳ ಪಟ್ಟಿ ಇಲ್ಲಿದೆ.

1. ಕೆಜಿಎಫ್ ಚಾಪ್ಟರ್-2:
ರಾಕಿ ಭಾಯ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್-2 ಸಿನಿಮಾ ಪ್ರಪಂಚಾದ್ಯಂತ ಜನರು ಕನ್ನಡ ಸಿನಿಮಾದ ಕಡೆ ನೋಡುವಂತೆ ಮಾಡಿತ್ತು. ಕೆಜಿಎಫ್ ಚಾಪ್ಟರ್-1 ಸಕ್ಸೆಸ್ ನಂತರ ಕೆಜಿಎಫ್ ಚಾಪ್ಟರ್-2 ಸಿನಿಮಾ ಕೂಡ ಬಾಕ್ಸ್ ಆಫೀಸ್ ಅನ್ನು ಧೂಳಿಪಟ ಮಾಡಿತ್ತು. ಇದೀಗ ಈ ಸಿನಿಮಾ ಮೊದಲ ದಿನ ಪ್ರಪಂಚಾದ್ಯಂತ 165 ಕೋಟಿ ಗಳಿಸಿತ್ತು.

 

 

2. ವಿಕ್ರಾಂತ್ ರೋಣ:
ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಗು ಮುಂಚೆ ಸಕತ್ ಕ್ರೇಜ್ ಹುಟ್ಟಿಸಿತ್ತು. ಇದೆ ಮೊದಲ ಬಾರಿಗೆ ಅಭಿಮಾನಿಗಳು ಕಿಚ್ಚ ಸುದೀಪ್ ಅವರನ್ನು ಫ್ಯಾಂಟಸಿ ಶೈಲಿ ಅಲ್ಲಿ ಕಣ್ತುಂಬಿಕೊಂಡಿದ್ದರು. ಸಕತ್ ಕ್ರೇಜ್ ಹುಟ್ಟಿಸಿದ ಈ ಸಿನಿಮಾ ಮೊದಲ ದಿನ ಸುಮಾರು 35 ಕೋಟಿ ಗಳಿಸಿದೆ.

 

 

3. ಜೇಮ್ಸ್:
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಾಯಕನಾಗಿ ಕೊನೆಯದಾಗಿ ನಟಿಸಿದ ಸಿನಿಮಾ ಎಂದರೆ ಅದು ಜೇಮ್ಸ್. ಕೊನೆಯಬಾರಿ ಅಭಿಮಾನಿಗಳು ಅಪ್ಪು ಅವರನ್ನು ತೆರೆಯ ಮೇಲೆ ನಾಯಕನಾಗಿ ಕಣ್ತುಂಬಿಕೊಂಡರು. ಸಾಕಷ್ಟು ಪ್ರೀತಿ ಅಭಿಮಾನ ಸಂಪಾದಿಸಿದ ಈ ಸಿನಿಮಾ ಬಾಕ್ಸ್ ಆಫೀಸ್ ಅನ್ನು ಧೂಳಿಪಟ ಮಾಡಿತ್ತು. ಮೊದಲ ದಿನ ಈ ಸಿನಿಮಾ 32 ಕೋಟಿ ಗಳಿಸಿ 3 ನೇ ಸ್ಥಾನದಲ್ಲಿದೆ.

 

 

4. ಕೆಜಿಎಫ್ ಚಾಪ್ಟರ್-1:
ರಾಕಿ ಭಾಯ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್-1 ಪ್ರಪಂಚಾದ್ಯಂತ ಜನರು ಕನ್ನಡ ಸಿನಿಮಾ ಕಡೆ ತಿರುಗಿ ನೋಡುವಂತೆ ಮಾಡಿತ್ತು. ಬಿಡುಗಡೆ ಅಡಗಿನಿಂದಲೂ ಈ ಸಿನಿಮಾ ಬಾಕ್ಸ್ ಆಫೀಸ್ ಅನ್ನು ಧೂಳಿಪಟ ಮಾಡುತ್ತ ಬಂತು. ರಿಲೀಸ್ ಆದ ಮೊದಲ ದಿನ ಈ ಸಿನಿಮಾ 25 ಕೋಟಿ ಗಳಿಸಿತ್ತು.

 

 

5. ದಿ ವಿಲನ್:
ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವ್ ರಾಜ್ ಕುಮಾರ್ ಒಟ್ಟಿಗೆ ಅಭಿನಯಿಸಿದ ಸಿನಿಮಾ ಎದರೆ ಅದು ದಿ ವಿಲನ್. ಹಾಡುಗಳು ಮತ್ತು ಡೈಲಾಗ್ ಮೂಲಕ ಸಕತ್ ಕ್ರೇಜ್ ಹುಟ್ಟಿಸಿದ ಈ ಸಿನಿಮಾ ಬಿಡುಗಡೆ ಆದಾಗಿನಿಂದಲೂ ಸಕತ್ ಸೌಂಡ್ ಮಾಡುತ್ತಿತ್ತು. ಈ ಸಿನಿಮಾ ಮೊದಲ ದಿನ 20 ಕೋಟಿ ಗಳಿಸಿತ್ತು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top